Screen Reader Access                 A-  A  A+ 
ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಘಾಟಿ, ಬೆಂಗಳೂರು - 561203, ಬೆಂಗಳೂರು ಗ್ರಾಮಾಂತರ .
Sri Subrahmanyaswamy Temple, Ghati, Benagluru Rural - 561203, Bengaluru Rural District [TM000063]
×
Temple History

ಇತಿಹಾಸ

ದೇವಾಲಯವು 15ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಸರಿಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಪೂರ್ವದಲ್ಲಿ ವಿಳೇದೆಲೆ ಮಾರುವ ವರ್ತಕನು ಪಟ್ಟಣಕ್ಕೆ ವಿಳೇದೆಲೆಯನ್ನು ಮಾರಲು ಹೋಗುವ ದಾರಿ ಮಧ್ಯದಲ್ಲಿ, ಪ್ರತಿದಿನವೂ ಈ ಪುಣ್ಯಸ್ಥಳದಲ್ಲಿ (ಘಾಟಿ ಸುಬ್ರಹ್ಮಣ್ಯ) ವಿಶ್ರಮಿಸಿಕೊಂಡು ಹೊರಡುತ್ತಿದ್ದನು. ಒಂದು ದಿನ ಇದೇ ರೀತಿ ದಾರಿ ಮಧ್ಯದಲ್ಲಿ ಈ ಸ್ಥಳದಲ್ಲಿ ವಿಶ್ರಮಿಸುವಾಗ ಅವನ ಸ್ವಪ್ನದಲ್ಲಿ ಶ್ರೀ ಸ್ವಾಮಿಯವರು ಬಂದು ಈ ಸ್ಥಳದಲ್ಲಿ ಸರ್ಪ ರೂಪದಲ್ಲಿ ಶಿವನ ಸುತನಾದ ನಾನು ಹಾಗು ಅದೇ ಶಿಲೆಯಲ್ಲೆ ಲಕ್ಷ್ಮಿ ಸಹಿತವಾಗಿ ಶ್ರೀ ನೃಸಿಂಹಸ್ವಾಮಿಯು ಯುಗಾಂತರದಲ್ಲಿ ಮಾರ್ಕಾಂಡೇಯ ಮಹರ್ಷಿಗಳಿಗೆ ನಾನು ಕೊಟ್ಟ ವರಪ್ರಧಾನದಿಂದ, ಷೋಡೋಶಕಲಾಸಂಭೂತನಾಗಿ ಉದ್ಭವವಾಗಿದ್ದು, ನನ್ನ ಭಕ್ತನಾದಂತಹ ಸೊಂಡೂರು ಮಹಾರಾಜರಿಗೆ ಈ ವಿಷಯವನ್ನು ತಿಳಿಸಿ, ಗುಡಿ ಗೋಪುರಾಧಿಗಳನ್ನು ಕಟ್ಟಿಸಿ, ಪೂಜಾ ಕೈಕಂರ್ಯಗಳಿಗೆ ವ್ಯವಸ್ಥೆಯನ್ನು ಮಾಡಿಸಲು ನನ್ನ ಆಜ್ಞೆಯಾಗಿದೆ ಎಂದು...

ಸ್ಥಳ ಪುರಾಣ

ದೇವಾಲಯವು 15ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಸರಿಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಪೂರ್ವದಲ್ಲಿ ವಿಳೇದೆಲೆ ಮಾರುವ ವರ್ತಕನು ಪಟ್ಟಣಕ್ಕೆ ವಿಳೇದೆಲೆಯನ್ನು ಮಾರಲು ಹೋಗುವ ದಾರಿ ಮಧ್ಯದಲ್ಲಿ, ಪ್ರತಿದಿನವೂ ಈ ಪುಣ್ಯಸ್ಥಳದಲ್ಲಿ (ಘಾಟಿ ಸುಬ್ರಹ್ಮಣ್ಯ) ವಿಶ್ರಮಿಸಿಕೊಂಡು ಹೊರಡುತ್ತಿದ್ದನು. ಒಂದು ದಿನ ಇದೇ ರೀತಿ ದಾರಿ ಮಧ್ಯದಲ್ಲಿ ಈ ಸ್ಥಳದಲ್ಲಿ ವಿಶ್ರಮಿಸುವಾಗ ಅವನ ಸ್ವಪ್ನದಲ್ಲಿ ಶ್ರೀ ಸ್ವಾಮಿಯವರು ಬಂದು ಈ ಸ್ಥಳದಲ್ಲಿ ಸರ್ಪ ರೂಪದಲ್ಲಿ ಶಿವನ ಸುತನಾದ ನಾನು ಹಾಗು ಅದೇ ಶಿಲೆಯಲ್ಲೆ ಲಕ್ಷ್ಮಿ ಸಹಿತವಾಗಿ ಶ್ರೀ ನೃಸಿಂಹಸ್ವಾಮಿಯು ಯುಗಾಂತರದಲ್ಲಿ ಮಾರ್ಕಾಂಡೇಯ ಮಹರ್ಷಿಗಳಿಗೆ ನಾನು ಕೊಟ್ಟ ವರಪ್ರಧಾನದಿಂದ, ಷೋಡೋಶಕಲಾಸಂಭೂತನಾಗಿ ಉದ್ಭವವಾಗಿದ್ದು, ನನ್ನ ಭಕ್ತನಾದಂತಹ ಸೊಂಡೂರು ಮಹಾರಾಜರಿಗೆ ಈ...

ಪೌರಾಣಿಕ ಹಿನ್ನೆಲೆ

ಶ್ರೀ ಸ್ವಾಮಿಯವರು ತಾರಕಾಸುಯಾದಿ ರಾಕ್ಷಸರ ಸಂಹಾರ ನಿಮಿತ್ತ ಅವತಾರವನ್ನು ತಾಳಿದ್ದು, ತದನಂತರ ಸರ್ಪರೂಪ ಧಾರಣೆ ಮಾಡಿ ತಪ್ಪಸ್ಸು ಮಾಡಿದ ಸ್ಥಳ ಮತ್ತು ದಾಯಾದಿ ಮತ್ಸರದಿಂದ ಸರ್ಪಗಳಿಗೂ ಹಾಗೂ ಗರುಡನಿಗೂ ದ್ವೇಷೋತ್ಪತ್ತಿಯಾಗಿದ್ದಾಗ ಸರ್ಪಗಳಿಗೆ ಗರುಡನಿಂದ ನೃಸಿಂಹ ಸ್ವರೂಪದಲ್ಲಿ ಅಭಯ ನೀಡಿದ ಸ್ಥಳ ಮತ್ತು ಮಾರ್ಕಂಡೇಯ ಮಹರ್ಷಿಗಳ ಮನವಿಗೆ ಮನ್ನಿಸಿ ಘಟಿಕಾಸುರ ರಾಕ್ಷಸನನ್ನು ಸಂಹರಿಸಿದಾಗ ಮಹರ್ಷಿಗಳ ಸ್ತುತಿಗೆ ಮೆಚ್ಚಿ ವರವನ್ನು ನೀಡಿದಾಗ ಮಹರ್ಷಿಗಳು ಯಾವ ದಕ್ಷಿಣ ಕ್ಷೇತ್ರದಲ್ಲಿ ಸರ್ಪ ರೂಪದಲ್ಲಿ ತಪಸ್ಸನ್ನು ಆಚರಿಸಿದೆಯೋ ಅದೇ ಕ್ಷೇತ್ರದಲ್ಲಿ ಸರ್ಪರೂಪದಲ್ಲಿ ಪೂರ್ವಾಭಿಮುಖವಾಗಿಯೂ ಯಾವ ದಕ್ಷಿಣ ಕ್ಷೇತ್ರದಲ್ಲಿ ಸರ್ಪಗಳಿಗೆ ಗರುಡನ ಭಾದೆಯಿಂದ ನೃಸಿಂಹ ಸ್ವರೂಪದಲ್ಲಿ ಅಭಯವನ್ನು ನೀಡಿದೆಯೋ ಅದೇ ನೃಸಿಂಹ ರೂಪದಲ್ಲಿ ಪಶ್ಚಿಮಾಭಿಮುಖವಾಗಿ ಏಕದೇಹನ್ಯವಾಗಿ ಷೋಡಶ ಕಲಾಸಂಭೂತನಾಗಿ ಅವಿರ್ಭವಿಸಬೇಕೆಂದು ಕೇಳಿದಾಗ ಮಹರ್ಷಿಗಳಿಗೆ ನೀಡಿದ ವರದಂತೆ ಶ್ರೀ ಸ್ವಾಮಿಯವರು ಉದ್ಭವವಾಗಿರುವುದು.