ದೇವಾಲಯವು 15ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಸರಿಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಪೂರ್ವದಲ್ಲಿ ವಿಳೇದೆಲೆ ಮಾರುವ ವರ್ತಕನು ಪಟ್ಟಣಕ್ಕೆ ವಿಳೇದೆಲೆಯನ್ನು ಮಾರಲು ಹೋಗುವ ದಾರಿ ಮಧ್ಯದಲ್ಲಿ, ಪ್ರತಿದಿನವೂ ಈ ಪುಣ್ಯಸ್ಥಳದಲ್ಲಿ (ಘಾಟಿ ಸುಬ್ರಹ್ಮಣ್ಯ) ವಿಶ್ರಮಿಸಿಕೊಂಡು ಹೊರಡುತ್ತಿದ್ದನು. ಒಂದು ದಿನ ಇದೇ ರೀತಿ ದಾರಿ ಮಧ್ಯದಲ್ಲಿ ಈ ಸ್ಥಳದಲ್ಲಿ ವಿಶ್ರಮಿಸುವಾಗ ಅವನ ಸ್ವಪ್ನದಲ್ಲಿ ಶ್ರೀ ಸ್ವಾಮಿಯವರು ಬಂದು ಈ ಸ್ಥಳದಲ್ಲಿ ಸರ್ಪ ರೂಪದಲ್ಲಿ ಶಿವನ ಸುತನಾದ ನಾನು ಹಾಗು ಅದೇ ಶಿಲೆಯಲ್ಲೆ ಲಕ್ಷ್ಮಿ ಸಹಿತವಾಗಿ ಶ್ರೀ ನೃಸಿಂಹಸ್ವಾಮಿಯು ಯುಗಾಂತರದಲ್ಲಿ ಮಾರ್ಕಾಂಡೇಯ ಮಹರ್ಷಿಗಳಿಗೆ ನಾನು ಕೊಟ್ಟ ವರಪ್ರಧಾನದಿಂದ, ಷೋಡೋಶಕಲಾಸಂಭೂತನಾಗಿ ಉದ್ಭವವಾಗಿದ್ದು, ನನ್ನ ಭಕ್ತನಾದಂತಹ ಸೊಂಡೂರು ಮಹಾರಾಜರಿಗೆ ಈ...