ಶ್ರೀ ಮಲ್ಲಿಕಾರ್ಜುನ ಮತ್ತು ಬಸವೇಶ್ವರ ಸ್ವಾಮಿ ದೇವಾಲಯ, ಕುರುವತ್ತಿ, ವಿಜಯನಗರ - 583217, ಬಳ್ಳಾರಿ .
Sri Mallikarjuna Swamy and Basaveshwara Swamy Temple, Kuruvatti, Vijayanagara - 583217, Ballari District [TM000071]
×
Temple History
ಇತಿಹಾಸ
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಶ್ರೀಕ್ಷೇತ್ರ ಕುರುವತ್ತಿ ಗ್ರಾಮವು ಐತಿಹಾಸಿಕವಾಗಿಯೂ ಪಾರಂಪರಿಕವಾಗಿಯೂ ಪರಮ ಪ್ರಸಿದ್ದವೆನಿಸಿದ ಪಶ್ಚಿಮ ವಾಹಿನಿ ದಕ್ಷಿಣ ಕಾಶಿ ತುಂಗಾಭದ್ರಾ ತೀರದಲ್ಲಿ ರಾರಾಜಿಸುತ್ತಾ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳನ್ನು ಹೊಂದಿರುತ್ತದೆ.
ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವನ್ನು ಕ್ರಿ.ಶ 1190ರಲ್ಲಿ ಚಾಲುಕ್ಯರ ದೊರೆ ಅಹವಮಲ್ಲನು ಕಟ್ಟಿಸಿರುತ್ತಾನೆ. ಈ ದೇವಾಲಯವನ್ನು ಶಾಸನದ ಪ್ರಕಾರ ಈ ದೇವಾಲಯಕ್ಕೆ “ ಅಹವಮಲ್ಲೇಶ್ವರ” ಎಂದು ಉಕ್ತವಾಗಿದೆ. ನಂತರ ಹೊಯ್ಸಳರಿಂದ ದೇವಸ್ಥಾನವು ಅಭಿವೃದ್ದಿ ಹೊಂದಿದೆ. ಇಲ್ಲಿಯೇ ವಾಸವಿದ್ದ ಶಿಲ್ಪಿ ಚಾವುಂಡೋಜನಿಂದ ನಿರ್ಮಿತವಾಗಿದೆ. ಚಾಲುಕ್ಯ ಮತ್ತು ಹೊಯ್ಸಳದ ವಾಸ್ತು ಶಿಲ್ಪ ಹೊಂದಿದ್ದು ಗೋಪುರವು ವೇಸರ ಪದ್ದತಿಯಲ್ಲಿ ಕಟ್ಟಲಾಗಿದೆ ಮತ್ತು ಗರ್ಭಗುಡಿಯ ಶುಕನಾಶಿ ನವರಂಗವನ್ನು ಹೊಂದಿದೆ. ಉತ್ತರ ದಕ್ಷಿಣ ಮತ್ತು ಪೂರ್ವಕ್ಕೆ ಮಹಾದ್ವಾರಗಳಿದ್ದು, ಶಿಲ್ಪಕಲೆ ಯಿಂದ ಕೂಡಿದೆ. ಲಿಂಗದ ತಳ ಪೀಠ...ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಶ್ರೀಕ್ಷೇತ್ರ ಕುರುವತ್ತಿ ಗ್ರಾಮವು ಐತಿಹಾಸಿಕವಾಗಿಯೂ ಪಾರಂಪರಿಕವಾಗಿಯೂ ಪರಮ ಪ್ರಸಿದ್ದವೆನಿಸಿದ ಪಶ್ಚಿಮ ವಾಹಿನಿ ದಕ್ಷಿಣ ಕಾಶಿ ತುಂಗಾಭದ್ರಾ ತೀರದಲ್ಲಿ ರಾರಾಜಿಸುತ್ತಾ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳನ್ನು ಹೊಂದಿರುತ್ತದೆ.
ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವನ್ನು ಕ್ರಿ.ಶ 1190ರಲ್ಲಿ ಚಾಲುಕ್ಯರ ದೊರೆ ಅಹವಮಲ್ಲನು ಕಟ್ಟಿಸಿರುತ್ತಾನೆ. ಈ ದೇವಾಲಯವನ್ನು ಶಾಸನದ ಪ್ರಕಾರ ಈ ದೇವಾಲಯಕ್ಕೆ “ ಅಹವಮಲ್ಲೇಶ್ವರ” ಎಂದು ಉಕ್ತವಾಗಿದೆ. ನಂತರ ಹೊಯ್ಸಳರಿಂದ ದೇವಸ್ಥಾನವು ಅಭಿವೃದ್ದಿ ಹೊಂದಿದೆ. ಇಲ್ಲಿಯೇ ವಾಸವಿದ್ದ ಶಿಲ್ಪಿ ಚಾವುಂಡೋಜನಿಂದ ನಿರ್ಮಿತವಾಗಿದೆ. ಚಾಲುಕ್ಯ ಮತ್ತು ಹೊಯ್ಸಳದ ವಾಸ್ತು ಶಿಲ್ಪ ಹೊಂದಿದ್ದು ಗೋಪುರವು ವೇಸರ ಪದ್ದತಿಯಲ್ಲಿ ಕಟ್ಟಲಾಗಿದೆ ಮತ್ತು ಗರ್ಭಗುಡಿಯ ಶುಕನಾಶಿ ನವರಂಗವನ್ನು ಹೊಂದಿದೆ. ಉತ್ತರ ದಕ್ಷಿಣ ಮತ್ತು ಪೂರ್ವಕ್ಕೆ ಮಹಾದ್ವಾರಗಳಿದ್ದು, ಶಿಲ್ಪಕಲೆ ಯಿಂದ ಕೂಡಿದೆ. ಲಿಂಗದ ತಳ ಪೀಠ ಐದು ಸ್ಥಳಗಳನ್ನು ಹೊಂದಿದ್ದು, ಕಮಲಾಕೃತಿಯಂತೆ ಕೆತ್ತಲಾಗಿದೆ.
ಗರ್ಭಗುಡಿಯ ಬಾಗಿಲ ಮೇಲೆ ಸಮೃದ್ದಿಯ ಸಂಕೇತವಾದ ಗಜಲಕ್ಷ್ಮೀ ಅಮ್ಮನ ವಿಗ್ರಹ ಕೆತ್ತಲಾಗಿದ್ದು ಗುಡಿಯ ಸುತ್ತ ತಳಬಾಗದಲ್ಲಿ ಸಿಂಹ ಪ್ರತಿಮೆಗಳು ಮತ್ತು ಉಬ್ಬು ಶಿಲ್ಪ ಸಿರಿಯಿಂದ ಸಿಂಗರಿಸಿದೆ. ದೇವಾಲಯದಲ್ಲಿ ಸೊಮೇಶ್ವರ ಅರಸನ ನಾಲ್ವರು ಪತ್ನಿಯರ ವಿಗ್ರಹವಿದೆ. ಅಕ್ಕ ತಂಗಿಯರ ರಾಜರಾಣಿಯರ ಸೂರ್ಯನಾರಾಯಣ ವೀರಭದ್ರ ವಿನಾಯಕ, ಸಪ್ತ ಮಾತೃಕೆ ಹೋಳಿ ಬಸಪ್ಪಳ ಮತ್ತು ಸಿಂಹದ ವಿಗ್ರಹಗಳನ್ನು ಕಾಣಬಹುದಾಗಿದೆ.
ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ಕುರುವತ್ತಿ ತ್ರಿಪುರ ದಹನ ಕ್ಷೇತ್ರ ಎನ್ನುತ್ತಾರೆ. ಪುರಾಣ ಕಾಲದಲ್ಲಿ ತರಕಾಸುರನೆಂಬ ರಾಕ್ಷಸ ಲೋಕ ಕಂಟಕನಾಗಿದ್ದರಿಂದ ಷಣ್ಮುಖನು ಅತನನ್ನು ಸಂಹರಿಸಿ ಲೋಕವನ್ನು ಉದ್ದರಿಸುತ್ತಾನೆ. ತಾರಾ ಪಾರಾಕ್ಷಾ ಕಮಲಾಕ್ಷ ಮತ್ತು ವಿದ್ಯುನ್ಮಾಬಿ ಎಂಬ ಮೂವರು ಪುತ್ರರು ತಾರಾಕನಿಗೆ ಇದ್ದರು, ಬ್ರಹ್ಮನಿಂದ ಅಜೇಯ ಅಪ್ರತಿಮ ವರ ಪಡೆದು ಕುರುವತ್ತಿಯ ಸೀಮೆಯಲ್ಲಿ ವಾಸವಾಗಿದ್ದನು. ಸ್ವರ್ಗ ಆಕಾಶ ಭೂಮಿಗಳಲ್ಲಿ ಸುವರ್ಣ ಬೆಳ್ಳಿ ಮತ್ತು ಕಬ್ಬಿಣದ ನವರಸಗಳನ್ನು ಕಟ್ಟಿಕೊಂಡು ಅಹಂಕಾರದಿಂದ ಮೆರೆಯುತ್ತಾರೆಂಬ ಪ್ರತೀತಿ ಇದೆ. ಲೋಕ ಕಂಟಕರಾದ ಇವರ ಸಂಹಾರಕ್ಕೆ “ ಕೈಲಾಸದಿಂದ ಶಿವನೊಂದಿಗೆ ಬಂದು ನಂದೀಶ್ವರನ ಇಂದಿನ ಕುರುವತ್ತಿ ಬಸವೇಶ್ವರನಾಗಿ” ನೆಲೆ ನಿಂತರೆ ಶಿವನು ಮಲ್ಲಿಕಾರ್ಜುನ ದೇವನಾಗಿ ಸ್ಥಾಪಿತರಾಗಿ ಭಕ್ತ ಕುಲಕ್ಕೆ ಆರಾಧ್ಯ ದೈವವಾಗಿ ಜನಮಾಸದಲ್ಲಿ ಮನೆ ಮಾಡಿದ್ದಾನೆ. ಶಿವ ಮತ್ತು ತ್ರಿಪುರದ ಭೀಕರ ಯುದ್ದದ ಘಟನೆಗೆ ಭೂದೇವಿ ನಡುಗಿ ಕುರುಹು ತೋರಿ ಪಾತಾಳಕ್ಕೆ ಇಳಿಯ ತೊಡಗಿದಳು.
ಆಗ ನಂದೀಶ್ವರನು ಭೂದೇವಿಗೆ ಹೆಗಲು ನೀಡಿ ಎತ್ತಿ ಹಿಡಿದನು, ಆ ಕುರುವಿನ ಸಂಕೇತವೇ ಕುರುವತ್ತಿಯಾದ ನಿಷ್ಟತ್ತಿಯಾಗಿರಬಹುದು. ಅಲ್ಲದೆ ಹೀರೆಕುರುವತ್ತಿಯ ತುಂಗಾಭದ್ರ ನದಿ ಡಂಡೆಯ ಮೇಲೆ ಸೋಮೇಶ್ವರ ಲಿಂಗವು ಸ್ವಯಂ ಭೂಲಿಂಗವಾಗಿ ಉದ್ಬವಿಸಿದ್ದರಿಂದ ಲಿಂಗದ ರೂಪದಲ್ಲಿ ಶಿವನು ಕುರುವು ತೋರಿಸಿದ್ದರಿಂದಲು ಅಲ್ಲಿ ವರತಿ ಅಥವಾ ವರ್ತಿ ಇದ್ದುದರಿಂದಲು ಆ ಊರಿಗೆ ಕುರುವಿನ ವರ್ತಿಯಾಗಿ ನಂತರ ಕುರುವರ್ತಿ, ಕ್ರಮೇಣ ಕುರುವತ್ತಿಯಾಗಿರಬೇಕೆಂದು ವಿದ್ವಾಂಸರ ಅಭಿಮತವಾಗಿದೆ. ಇಂದಿಗೂ ಕುರುವತ್ತಿ ಎಂದೇ ಶಾಸನಗಳಲ್ಲಿ ದಾಖಲಾಗಿದೆ.
ಶ್ರೀ ಮಲ್ಲಿಕಾರ್ಜುನಸ್ವಾಮಿ ಶ್ರೀ ಬಸವೇಶ್ವರಸ್ವಾಮಿಗೆ ವರ್ಷ ಪೂರ್ತಿ ಪ್ರತಿದಿನ ರುದ್ರಾಭೀಷೇಕ ನಡೆಯುತ್ತದೆ. ಹಾಗೂ ಪ್ರತಿ ಅಮವಾಸ್ಯೆ ಮತ್ತು ವಿಶೇಷ ಸಂಧರ್ಭಗಳಲ್ಲಿ ಹಾಗೂ ಅಮವಾಸ್ಯೆಯಂದು ಉತ್ಸವ ಮೂರ್ತಿಯನ್ನು ವಂಶಪಾರಂಪರ್ಯ ಅರ್ಚಕರುಗಳು ಭೋವಿಜನಾಂಗ ಸನಾದಿವಾದ್ಯದವರು ಹೊರಡಿಸುತ್ತಾರೆ ಹಾಗೂ ಪ್ರತಿ ಸೋಮವಾರ ಮತ್ತು ಅಮವಾಸ್ಯೆಯಂದು ದೇವಸ್ಥಾನದಲ್ಲಿ ನಿರಂತರವಾಗಿ ದಾಸೋಹ ನೆಡೆಯುತ್ತದೆ. ಶ್ರೀ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾಧಿಗಳು “ ಕುರುವತ್ತಿ ದೊರೆಯೇ ನಿನಗಾರು ಸರಿಯೇ ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪಾರಕ್” ಎಂಬ ಘೋಷಗಳೊಂದಿಗೆ ಬಂದು ತಮ್ಮ ಬೇಡಿಕೆಗಳಾದ ಅಭಿಷೇಕ ಡೀಡು ನಮಸ್ಕಾರ ಹಾಗೂ ಜವಳದ ಕಾರ್ಯಕ್ರಮಗಳನ್ನು ಮಾಡಿಸಿಕೊಂಡು ಹೋಗುತ್ತಾರೆ. ಹಾಗೂ ತಮ್ಮ ಹರಕೆಯ ಕಾಣಿಕೆಯನ್ನು ದೇವರಿಗೆ ಹಾಕುತ್ತಾರೆ. ಭಕ್ತರು ತಮ್ಮ ಲೌಕಿಕ ಫಲಗಳು ಇಷ್ಟಾರ್ಥಸಿದ್ದಿಗಾಗಿ ತಮ್ಮ ಹರಕೆಗಾಗಿ ಮನಸ್ಸಿನ ಬೇಡಿಕೆಗಾಗಿ ತಮ್ಮ ಕಷ್ಟ ನಿವಾರಣೆಯಾಗಿ ಶ್ರೀ ಸ್ವಾಮಿಯ ದರ್ಶನವನ್ನು ಪಡೆದು ಶ್ರೀ ಸ್ವಾಮಿಯ ಅಂಗಾರವನ್ನು/ಭಸ್ಮವನ್ನು ಒಯ್ಯುತ್ತಾರೆ ಹಾಗೂ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಸುಕ್ಷೇತ್ರ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಾದ ರಥೋತ್ಸವ ಅತ್ಯಂತ ಮುಖ್ಯ ಕಾರ್ಯಕ್ರಮವಾಗಿದ್ದು, ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ ತಿಂಗಳಲ್ಲಿ ಬರುವ ಶಿವರಾತ್ರಿ ಅಮವಾಸ್ಯೆಯ ಮುಂಚಿನ ಮೂಲಾ ನಕ್ಷತ್ರದಂದು ಶ್ರೀ ಸ್ವಾಮಿಗೆ ಕಂಕಣದಾರಣವನ್ನು ಮಾಡುವುದು ಹಾಗೂ ಮಹಾಶಿವರಾತ್ರಿ ಅಮವಾಸ್ಯೆಯಂದು ವಂಶಪಾರಂಪಾರ್ಯ ಧರ್ಮಕರ್ತರ ಮನೆಯಲ್ಲಿ ಮೂಲ ಉತ್ಸವ ಮೂರ್ತಿಯ ಬಂಗಾರದ ಆಭರಣಗಳೊಂದಿಗೆ ಪೂಜೆಯನ್ನು ಮಾಡಿ ತೇರಿಗೆ ಕಳಸವನ್ನು ಇಡುವುದು. ಶಿವರಾತ್ರಿ ಅಮವಾಸ್ಯೆಯಂದು ಧರ್ಮಕರ್ತರ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಉತ್ಸವ ಮೂರ್ತಿಗೆ ಆಭರಣಗಳನ್ನು ಹಾಕಿ ಉತ್ಸವ ಮೂರ್ತಿಯ ಪ್ರಭಾವಳಿಯಲ್ಲಿ ವಂಶಪಾರಂಪಾರ್ಯ ಅರ್ಚಕರುಗಳು ಬೋದೇರು ಸುನೇದಾರರು ಮುಖಾಂತರ ರಥದ ವರೆಗೆ ಸಾಗಿ ರಥ ಅವರೋಹಣ ಮಾಡಿ ರಥೋತ್ಸವ ಸಾಯಂಕಾಲ ಜರುಗುವುದು. ಮರುದಿನ ಸಾಯಂಕಾಲ ಓಕುಳಿ ಉತ್ಸವ ಜರುಗುವುದು. ಜಾತ್ರೆಯ ಈ ಸಂಧರ್ಭದಲ್ಲಿ ಸುಮಾರು 7 ರಿಂದ 9 ದಿನಗಳ ಕಾಲ ವಂಶಪಾರಂಪಾರ್ಯ ಅರ್ಚಕರುಗಳು ಮನೆಯಿಂದ ಹಾಗೂ ಊರಿನ ಗ್ರಾಮಸ್ಥರ ಮನೆಯಿಂದ ಆರತಿ ಹಾಗೂ ನೈವೇದ್ಯ ಸೇವೆಯು ವಿಜೃಂಭಣೆಯಿಂದ ಜರುಗುವುದು.
ಯುಗಾದಿ ಪಾಡ್ಯಕ್ಕೆ ತೇರು ಗಾಲಿಯನ್ನು ಒಳ:ಗೆ ಹಾಕುವುದು ಶ್ರೀ ಸ್ವಾಮಿಗೆ ಒಡವೆಗಳನ್ನು ಹಾಕುವುದು ಹಾಗೂ ವಂಶಪಾರಂಪಾರ್ಯ ಅರ್ಚಕರುಗಳ ಮನೆಯಿಂದ ಶ್ರೀ ಸ್ವಾಮಿಗೆ ಅಗ್ನಿ ಹಾಗೂ ನೈವ್ಯದ್ಯ ಕೊಡುವುದು. ಬಸವೇಶ್ವರ ಜಯಂತಿಯಂದು ಶ್ರೀ ಸ್ವಾಮಿಗೆ ಒಡವೆಗಳನ್ನು ಹಾಕುವುದು. ಶ್ರಾವಣಮಾಸದಲ್ಲಿ ಪ್ರತಿದಿನ ವಂಶಪಾರಂಪಾರ್ಯ ಅರ್ಚಕರುಗಳ ಮನೆಯಿಂದ ಶ್ರೀ ಸ್ವಾಮಿಗೆ ನೈವೇಧ್ಯ ಕೊಡುವುದು ಹಾಗೂ ಪ್ರತಿ ಸೋಮವಾರದವರೆಗೆ ಒಡವೆಗಳನ್ನು ಹಾಕುವುದು. ದಸರಾದಲ್ಲಿ ವಂಶಪಾರಂಪಾರ್ಯ ಅರ್ಚಕರು ಹಾಗೂ ಊರಿನ ಗ್ರಾಮಸ್ಥರ ಮನೆಯಿಂದ ಅನ್ನ, ಆರತಿ ನೈವೈದ್ಯವನ್ನು ನವರಾತ್ರಿ ವರೆಗೂ ಒಯ್ಯುವುದು ಹಾಗೂ ವಿಜಯದಶಮಿಯಂದು ಶ್ರೀ ಉದ್ಭವ ಗಣಪತಿ ದೇವಾಸ್ಥಾನದಲ್ಲಿ ಬನ್ನಿ ಮುಡಿಯುವುದು.
ದೀಪಾವಳಿ ಪಾಡ್ಯಕ್ಕೆ ವಂಶಪಾರಂಪಾರ್ಯ ಅರ್ಚಕರುಗಳ ಮನೆಯಿಂದ ಅಗ್ನಿ ಹೊರುವುದು ಹಾಗೂ ಶ್ರೀ ಸ್ವಾಮಿಗೆ ಒಡವೆಗಳನ್ನು ಹಾಕುವುದು. ಛಟ್ಟಿ ಅಮವಾಸ್ಯೆಯಂದು ಶ್ರೀ ಮಲ್ಲಿಕಾರ್ಜುನಸ್ವಾಮಿ ಕಾತೀಕೊತ್ಸವ ಹಾಗೂ ಬರುವ ಮುಂದಿನ ಸೋಮವಾರ ಶ್ರೀ ಬಸವೇಸ್ವರಸ್ವಾಮಿ ಕಾರ್ತೀಕೊತ್ಸವವು ಜರುಗುವುದು ಹಾಗೂ ಶ್ರೀ ಸ್ವಾಮಿಗೆ ಒಡವೆಗಳನ್ನು ಹಾಕುವುದು ಎಂಬ ಪ್ರತೀತಿ ತಿಳಿದುಬಂದಿದೆ.