ಇತಿಹಾಸ

ಎತ್ತ ನೋಡಿದರತ್ತ ಮರಳರಾಶಿ, ಗಗನಚುಂಬಿಸುವ೦ಥ ಮರಳಗುಡ್ಡೆಗಳು, ಊರು ತುಂಬ ಮರಳಿನದೇ ರಂಗವಲ್ಲಿ. ಗುಡಿ-ಗೋಪುರಗಳು, ಮನೆಮಠಗಳು, ಕಾಡು-ಮೇಡುಗಳು, ನಡೆವ ರಸ್ತೆ ಎಲ್ಲಕ್ಕೂ ಮರಳಿನದೇ ನಂಟು. ಇದು ತಲಕಾಡಿನ ಪರಿ. ಕಾಲಿಟ್ಟಲ್ಲಿ ಮರಳು ಕೈಚಾಚಿದಲ್ಲಿ ಮರಳು! ಇದು ತಲಕಾಡು ಇರುವ ರೀತಿ. ಇದರ ಹಿಂದೊಂದು ಶಾಪದ ಕಥೆ ಹೀಗಿದೆ. ಶ್ರೀರಂಗರಾಯ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ಆಳುತ್ತಿದ್ದ ಕಾಲದಲ್ಲಿ ಆತನಿಗೆ ಬೆನ್ನುಫಣಿ ರೋಗ ಬರುತ್ತದೆ. ಅದರ ನಿವಾರಣೆಗಾಗಿ ಆತ ತನ್ನ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ಬರುತ್ತಾನೆ. ಆ ಸಂದರ್ಭದಲ್ಲಿ ರೋಗ ಉಲ್ಬಣಗೊಂಡು ಶ್ರೀರಂಗರಾಯ ತಲಕಾಡಿನಲ್ಲೇ ಸಾವಿಗೀಡಾಗುತ್ತಾನೆ. ಈ ಸಂದರ್ಭ ಉಪಯೋಗಿಸಿಕೊಂಡು ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ...ಎತ್ತ ನೋಡಿದರತ್ತ ಮರಳರಾಶಿ, ಗಗನಚುಂಬಿಸುವ೦ಥ ಮರಳಗುಡ್ಡೆಗಳು, ಊರು ತುಂಬ ಮರಳಿನದೇ ರಂಗವಲ್ಲಿ. ಗುಡಿ-ಗೋಪುರಗಳು, ಮನೆಮಠಗಳು, ಕಾಡು-ಮೇಡುಗಳು, ನಡೆವ ರಸ್ತೆ ಎಲ್ಲಕ್ಕೂ ಮರಳಿನದೇ ನಂಟು. ಇದು ತಲಕಾಡಿನ ಪರಿ. ಕಾಲಿಟ್ಟಲ್ಲಿ ಮರಳು ಕೈಚಾಚಿದಲ್ಲಿ ಮರಳು! ಇದು ತಲಕಾಡು ಇರುವ ರೀತಿ. ಇದರ ಹಿಂದೊಂದು ಶಾಪದ ಕಥೆ ಹೀಗಿದೆ. ಶ್ರೀರಂಗರಾಯ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ಆಳುತ್ತಿದ್ದ ಕಾಲದಲ್ಲಿ ಆತನಿಗೆ ಬೆನ್ನುಫಣಿ ರೋಗ ಬರುತ್ತದೆ. ಅದರ ನಿವಾರಣೆಗಾಗಿ ಆತ ತನ್ನ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ಬರುತ್ತಾನೆ. ಆ ಸಂದರ್ಭದಲ್ಲಿ ರೋಗ ಉಲ್ಬಣಗೊಂಡು ಶ್ರೀರಂಗರಾಯ ತಲಕಾಡಿನಲ್ಲೇ ಸಾವಿಗೀಡಾಗುತ್ತಾನೆ. ಈ ಸಂದರ್ಭ ಉಪಯೋಗಿಸಿಕೊಂಡು ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ಮುತ್ತಿನ ಮೂಗುತಿಯೊಂದು ಸೇರಿದಂತೆ ಎಲ್ಲಾ ಒಡವೆಗಳನ್ನು ಕಿತ್ತುಕೊಳ್ಳಲು ರಾಜಒಡೆಯರು ಪ್ರಯತ್ನಿಸಿದಾಗ ಕೋಪಗೊಂಡ ಅಲಮೇಲಮ್ಮ ತಲಕಾಡು ಮರಳಾಗಿ ಮಾಲಂಗಿ ಮಡುವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿ ಒಡವೆಗಳೊಡನೆ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ. ತಲಕಾಡು ಪೌರಾಣಿಕವಾಗಿ, ಚಾರಿತ್ರಿಕವಾಗಿ, ಜಾನಪದವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಬಹು ಮಹತ್ವದ ಸ್ಥಳ. ಸಿದ್ದಾರಣ್ಯಕ್ಷೇತ್ರ, ಗಜಾರಣ್ಯಕ್ಷೇತ್ರ, ತಲವನಪುರ, ರಾಜಪುರ ಮುಂತಾದ ಹೆಸರುಗಳಿಂದಲೂ ಪುರಾಣದಲ್ಲಿ, ಇತಿಹಾಸದಲ್ಲಿ ಕರೆಸಿಕೊಂಡಿರುವ ತಲಕಾಡು ಕ್ರಿ.ಶ.247ರ ಕಾಲದಲ್ಲೇ ಗಂಗರಸರ ಸಾಮ್ರಾಜ್ಯದ ರಾಜಧಾನಿಯಾಗಿ ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಾಗಿತ್ತು. ಗಂಗರಲ್ಲದೆ ಹೊಯ್ಸಳರು, ಚೋಳರು, ರಾಷ್ಟ್ರಕೂಟರು, ವಿಜಯನಗರದರಸರು, ಮೈಸೂರಿನ ಒಡೆಯರು ಮುಂತಾದ ರಾಜ ವಂಶಸ್ಥರ ನಾಡಾಗಿತ್ತು. ಪಂಚಲಿಂಗಗಳ ಪುಣ್ಯಧಾಮ ದಕ್ಷಿಣಕಾಶಿ ಎಂದೂ ಹೆಸರಾಗಿರುವ ತಲಕಾಡಿನಲ್ಲಿ ಜರುಗುವ ಪಂಚಲಿಂಗದರ್ಶನವು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಷ್ಟೇ ಪ್ರಸಿದ್ದಿ ಪಡೆದಿದೆ. ಈ ಸಂಭ್ರಮ ಸಂದರ್ಭದಲ್ಲಿ ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿ ಪರಶಿವನ ಐದು ಮುಖಗಳು ಸ್ವತಃ ಉದ್ಭವವಾಗಿರುವುದನ್ನು ನೋಡಬಹುದು. ಈ ಐದು ಶಿವಲಿಂಗಗಳನ್ನು ಪಂಚಲಿಂಗದರ್ಶನ ಮಹೋತ್ಸವದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ತತ್ಪುರುಷ ಮುಖದಿಂದ ಕಾವೇರಿಯ ಉತ್ತರವಾಹಿನಿಯ ಬಳಿ ರಕ್ತೇಶ್ವರನಾಗಿ, ಪೂರ್ವ ವಾಹಿನಿಯ ಬಳಿ ಅಘೋರ ಮುಖದಿಂದ ಪಾತಾಳೇಶ್ವರನಾಗಿ, ದಕ್ಷಿಣವಾಹಿನಿಯ ಬಳಿ ಸದ್ಯೋಜಾತ ಮುಖದಿಂದ ಮರಳೇಶ್ವರನಾಗಿ, ಪಶ್ಚಿಮವಾಹಿನಿಯ ಬಳಿ ವಾಮದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿ ಮತ್ತು ಮಧ್ಯದಲ್ಲಿ ಈಶಾನ್ಯ ಮುಖದಿಂದ ವೈದ್ಯನಾಥೇಶ್ವರನಾಗಿ ಪಂಚ ಬ್ರಹ್ಮಮಯನಾದ ಪರಶಿವನು ತಲಕಾಡಿನಲ್ಲಿ ನೆಲೆಸಿದ್ದಾನೆ ಎಂಬ ವಿಚಾರವನ್ನು ಪುರಾಣದಿಂದ ತಿಳಿಯಬಹುದು. ವೈದ್ಯನಾಥೇಶ್ವರ ಸೋಮದತ್ತ ಮರ್ಹಷಿ ಮತ್ತು ಅವರ ಶಿಷ್ಯರಿಗೆ ಹಾಗೂ ತಲ ಮತ್ತು ಕಾಡ ಎಂಬ ಬೇಡರಿಗೆ ಮೋಕ್ಷ ಪ್ರಧಾನಿಸಿದ ಪರಮೇಶ್ವರ ತಾನೇ ಸ್ವಯಂ ವೈದ್ಯ ಮಾಡಿಕೊಂಡು ವೈದ್ಯನಾಥೇಶ್ವರನಾಗಿರುವುದೇ ಈ ದೇವಾಲಯದ ವಿಶೇಷ. ಇಲ್ಲಿ ಪೂಜೆ ಮಾಡಿಸಿದರೆ ಸಕಲ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ವೈಶಾಖಶುದ್ಧ ಪೌರ್ಣಮಿ ದಿವಸವು ವೈದ್ಯನಾಥೇಶ್ವರನ ಪೂಜೆಗೆ ಶ್ರೇಷ್ಠವಾಗಿರುತ್ತದೆ. ರಕ್ತನಾಥೇಶ್ವರ ಗ್ರಹಗಳಿಗೆಲ್ಲಾ ಅಧಿಪತಿಯಾಗಲು ಪುರಾಣದಲ್ಲಿ ಸೂರ್ಯನಿಂದ ಪೂಜಿಸಲ್ಪಟ್ಟ ಶಿವಲಿಂಗವೇ ರಕ್ತನಾಥೇಶ್ವರನೆಂದು ಪ್ರಸಿದ್ಧಿಯಾಗಿದೆ. ಇದು ವೈದ್ಯನಾಥೇಶ್ವರ ದೇಗುಲದ ಪೂರ್ವ ದಿಕ್ಕಿಗೆ ಮೂರು ಮೈಲಿ ದೂರದ ವಿಜಯಪುರದಲ್ಲಿದ್ದು ಸಕಲ ಸಂಕಷ್ಟ ನಿವಾರಕ ಲಿಂಗವೆನಿಸಿದೆ. ರಕ್ತನಾಥೇಶ್ವರನ ಪೂಜೆಗೆ ಮಾಘ ಶುದ್ದಸಪ್ತಮಿ ದಿನವು ಬಹಳ ಶ್ರೇಷ್ಠವಾಗಿದೆ. ಪಾತಾಳೇಶ್ವರ ನಾಗಲೋಕದ ಚಕ್ರಾಧಿಪತ್ಯಕ್ಕಾಗಿ ವಾಸುಕಿಯಿಂದ ಪೂಜಿತಗೊಂಡಿರುವ ಈ ಶಿವಲಿಂಗವೇ ಪಾತಾಳೇಶ್ವರ. ವಾಸುಕೀಶ್ವರನೆಂಬುದು ಇದರ ಮತ್ತೊಂದು ಹೆಸರು. ಈ ದೇಗುಲ ವೈದ್ಯನಾಥೇಶ್ವರ ದೇಗುಲದ ಪೂರ್ವ ದಿಕ್ಕಿನಲ್ಲಿದೆ. ಇದು ಬಹಳ ಹಳ್ಳದಲ್ಲಿರುವುದರಿಂದ ಪಾತಾಳೇಶ್ವರನೆಂದೇ ಹೆಸರಾಗಿದೆ. ಇದರ ಪೂಜೆಗೆ ಶ್ರಾವಣ ಶುದ್ಧಪಂಚಮಿ ಅತ್ಯಂತ ಶ್ರೇಷ್ಠ ದಿವಸವಾಗಿದೆ. ಈ ಲಿಂಗವು ಪ್ರತಿದಿನ ಐದು ಬಣ್ಣಗಳಲ್ಲಿ ಹೊಳೆಯುತ್ತದೆಂದು ಹೇಳಲಾಗಿದೆ. ಮರಳೇಶ್ವರ ಈ ದೇಗುಲದಲ್ಲಿ ಬ್ರಹ್ಮದೇವನನ್ನು ಪೂಜಿಸುತ್ತಾರೆ. ಸೈಕತೇಶ್ವರನೆಂಬ ಇನ್ನೊಂದು ಹೆಸರೂ ಉಂಟು. ಈ ದೇವಾಲಯ ಭಕ್ತರಿಗೆ ವರನೀಡುವುದರಲ್ಲಿ ಹೆಚ್ಚು ಪ್ರಸಿದ್ಧ. ಮರಳೇಶ್ವರನ ದರ್ಶನಕ್ಕೆ ಮಾಘಮಾಸ ಬಹುಳ ಚರ್ತುದರ್ಶಿಯ ದಿನ ಹೆಚ್ಚು ಶ್ರೇಷ್ಠ. ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನೇಶ್ವರ ಕೇಳಿದ್ದು ಕೊಂಡುವಂತಹ ಶಕ್ತಿಯನ್ನು ಪಡೆಯುವುದಕ್ಕಾಗಿ ಕಾಮಧೇನುವಿನಿಂದ ಪೂಜೆಗೊಳ್ಳುತ್ತಿದ್ದ ಶಿವಲಿಂಗವೇ ಮಲ್ಲಿಕಾರ್ಜುನೇಶ್ವರ. ವೈದ್ಯನಾಥೇಶ್ವರನ ಉತ್ತರಕ್ಕೆ ಮೂರು-ನಾಲ್ಕು ಮೈಲಿಗಳ ದೂರದಲ್ಲಿ ಮುನ್ನೂರು ಅಡಿ ಎತ್ತರದ ಮುಡುಕುತೊರೆ ಬೆಟ್ಟದಲ್ಲಿರುವ ಈ ಶಿವಲಿಂಗನ ದರ್ಶನಕ್ಕೆ ಕಾರ್ತಿಕಶುದ್ಧ ಅಷ್ಟಮಿ ದಿವಸವು ಶ್ರೇಷ್ಠವಾಗಿರುತ್ತದೆ. ಇದು ದಕ್ಷಿಣದ ಶ್ರೀಶೈಲವೆಂದೇ ಖ್ಯಾತಿಯಾಗಿದೆ. ಇಲ್ಲಿ ಕಾವೇರಿ ನದಿಯು ನಾಲ್ಕು ದಿಕ್ಕುಗಳಲ್ಲಿಯೂ ಹರಿಯುವುದರಿಂದ ಈ ಸ್ಥಳದಲ್ಲಿಯೇ ಪಂಚಲಿಂಗ ದರ್ಶನ ಘಟಿಸುತ್ತದೆ. ಇದು ದೇವಾಲಯದ ವಿಶೇಷತೆಯಾಗಿದ್ದು, ಬೇರೆಲ್ಲೂ ಇಂಥಹ ವಿಶೇಷತೆಯನ್ನು ಕಾಣಲು ಸಾಧ್ಯವಿಲ್ಲ. ಪಂಚಲಿಂಗ ದರ್ಶನಕ್ಕೆ ಕಾರ್ತಿಕ ಮಾಸದ ಅಮಾವಾಸ್ಯೆಯ ಸೋಮವಾರ ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಆ ದಿನ ಉಷಃ ಕಾಲದಲ್ಲಿ ಬರುವ ಕುಹೂಯೋಗ/ಪದ್ಮಕಯೋಗವು ಅತ್ಯಂತ ಫಲಪ್ರದವಾದ ಪರ್ವಕಾಲ. ಇಂಥ ದಿನ ಸುಮಾರು 3 ರಿಂದ 14 ವರ್ಷಗಳಲ್ಲಿ ಸಂಭವಿಸುತ್ತದೆ. ಆಗ ತಲಕಾಡು ಕ್ಷೇತ್ರದಲ್ಲಿ ಸಂಭವಿಸುವ ಪಂಚಲಿಂಗದರ್ಶನ ಮಹೋತ್ಸವದಲ್ಲಿ ಯಾರು ನಿರ್ಮಲ ಮನಸ್ಸಿನಿಂದ ಪೂಜಿಸುವರೋ ಅವರು ಮುಂದೆ ಶಿವಸಾಯುಜ್ಯವನ್ನು ಪಡೆಯುತ್ತಾರೆಂದು ಸ್ಕಾಂದ ಪುರಾಣದಲ್ಲಿ ಹೇಳಲಾಗಿದೆ. ಪಂಚಲಿಂಗದರ್ಶನದ ಪೂಜಾವಿಧಾನ ಮೊದಲಿಗೆ ಇಲ್ಲಿರುವ ಕಾವೇರಿ ನದಿಗಿಂತಲೂ ಅನಾದಿಯಾಗಿರತಕ್ಕಂತಹ ಗೋಕರ್ಣ ಸರೋವರದಲ್ಲಿ ಮಿಂದು ಗೋಕರ್ಣೇಶ್ವರನ ದರ್ಶನ ಮಾಡಿ, ಅಲ್ಲಿಂದ ಉತ್ತರಕ್ಕಿರುವ ಚೌಡೇಶ್ವರಿ ದೇವಿಯನ್ನು ಪೂಜಿಸಿ ನಂತರ ವೈದ್ಯನಾಥೇಶ್ವರ ಸನ್ನಿಧಿಗೆ ಬಂದು ಪಂಚಲಿಂಗದರ್ಶನ ಯಾತ್ರೆಗೆ ಅಪ್ಪಣೆ ಕೋರಿ, ಉತ್ತರವಾಹಿನಿಯಲ್ಲಿ ಮಿಂದು, ರಕ್ತೇಶ್ವರ ದರ್ಶನ ಮಾಡಿ ಮತ್ತೆ ವೈದ್ಯನಾಥೇಶ್ವರನಲ್ಲಿಗೆ ಬಂದು ವರದಿ ಸಲ್ಲಿಸಬೇಕು. ಆನಂತರ ದಕ್ಷಿಣ ವಾಹಿನಿಯಲ್ಲಿ ಮಿಂದು ಮರಳೇಶ್ವರನ ದರ್ಶನ ಮಾಡಿ ಯಥಾ ಪ್ರಕಾರ ವೈದ್ಯನಾಥೇಶ್ವರನಲ್ಲಿಗೆ ಬಂದು ವರದಿ ಒಪ್ಪಿಸಿ ಭಕ್ತ್ತಿಯಿಂದ ಪೂಜಿಸಿ ಪುನೀತರಾಗುವುದು. ಎಲ್ಲಕಡೆ ಸುತ್ತಿ ಇವಿಷ್ಟನ್ನು ಮಾಡಲು ಸಾಧ್ಯವಾಗದವರು ಗೋಕರ್ಣ ಸರೋವರದಲ್ಲಿ ಸ್ನಾನಮಾಡಿ ಗೋಕರ್ಣೇಶ್ವರ, ಚೌಡೇಶ್ವರಿ ಮತ್ತು ಪಂಚಲಿಂಗಗಳಲ್ಲಿ ಪ್ರಧಾನವಾದ ವೈದ್ಯನಾಥೇಶ್ವರನ ದರ್ಶನ ಮಾಡಿ ಪ್ರಸಾದ ಪಡೆದರೂ ಪಂಚಲಿಂಗ ದರ್ಶನದ ಪುಣ್ಯ ಫಲ ದೊರೆಯುತ್ತದೆ. ಗೋಕರ್ಣ ಸರೋವರ ಪಂಚಲಿಂಗದರ್ಶನ ಪೂಜೆಗೆ ಇದೇ ಮೂಲವಾಗಿದ್ದು ಮೊದಲು ಇಲ್ಲಿ ಮಿಂದು ಆನಂತರ ಮುಂದಿನ ಪೂಜಾಕೈಂಕರ್ಯಕ್ಕೆ ಅಣಿಯಾಗಬೇಕು. ಸಕಲ ಪಾಪ ತೊಳೆಯುವ ಪುಣ್ಯಪುಷ್ಕರಣಿ ಇದು. ಪ್ರತಿ ವರ್ಷ ತುಲಾಸಂಕ್ರಮಣ ಕಾಲದಲ್ಲಿ ಅಂದರೆ ಅಕ್ಟೋಬರ್-ನವೆಂಬರ್ ಮಾಸದಲ್ಲಿ ಕಾಶಿಯಿಂದ ಪವಿತ್ರಗಂಗೆ ಇಲ್ಲಿಗೆ ಹರಿದು ಬರುತ್ತಾಳೆಂದು ಪ್ರತೀತಿ ಇದೆ. ಹಾಗಾಗಿ ಗೋಕರ್ಣ ಸರೋವರ ಸ್ನಾನ ಅತ್ಯಂತ ಶ್ರೇಷ್ಠವೆನಿಸಿದೆ. ಇಲ್ಲಿ ಮಿಂದು/ಸ್ನಾನ ಮಾಡಿ ಪುನೀತರಾಗಲು ಭಕ್ತಸಮೂಹ ತುದಿಗಾಲಲ್ಲಿ ನಿಂತಿರುತ್ತದೆ. ಇದುವರೆಗಿನ ಪಂಚಲಿಂಗ ದರ್ಶನಗಳು ಕ್ರಿ.ಶ.247 ರಿಂದ 266ರವರೆಗೆ ತಲಕಾಡನ್ನು ಆಳಿದ ಗಂಗರ ದೊರೆ ಹರಿವರ್ಮನ ಕಾಲದಲ್ಲೇ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆಚರಣೆಯಲ್ಲಿತ್ತೆಂಬುದು ಇತಿಹಾಸವಾದರು ಇದರ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಿಲ್ಲ. ಆದರೆ ಕಳೆದ 20ನೇ ಶತಮಾನದಿಂದೀಚೆಗೆ 1908, 1915, 1925, 1938, 1952, 1959, 1966, 1979, 1986, 1993 ರಲ್ಲಿ ಪಂಚಲಿಂಗ ದರ್ಶನ ನಡೆದಿದ್ದು ೨೧ನೇ ಶತಮಾನದ ಮೊದಲ ಪಂಚಲಿಂಗದರ್ಶನವಾಗಿ 2006 ನವೆಂಬರ್ 20 ರಂದು ಆ ನಂತರ 2009ನೇ ನವೆಂಬರ್ 16ರಂದು, 2013ರಲ್ಲಿ ಡಿಸೆಂಬರ್ 2 ರಂದು, 2020ರ ಡಿಸೆಂಬರ್ 10 ರಂದು ಪಂಚಲಿಂಗದರ್ಶನ ಜರುಗಿದೆ. ಕಾರ್ತಿಕಮಾಸ, ಅಮಾವಾಸ್ಯೆ, ಐದು ಸೋಮವಾರ, ವೃಶ್ಚಿಕರಾಶಿ, ಕುಹೂಯೋಗ /ಪದ್ಮಕಯೋಗ ಈ ಅಂಶಗಳು ಒಟ್ಟಾಗಿ ಬಂದಾಗ ಎಷ್ಟು ವರ್ಷಗಳಿಗೆ ಬೇಕಾದರೂ ಪಂಚಲಿಂಗದರ್ಶನ ಬರಬಹುದು. ಇದುವರೆಗೆ ನಡೆದುಕೊಂಡು ಬಂದಿರುವ ಪಂಚಲಿಂಗದರ್ಶನಗಳಲ್ಲಿ ಇದನ್ನು ಕಾಣಬಹುದಾಗಿದೆ. ತಲಕಾಡಿನ ಪೌರಾಣಿಕ ಹಿನ್ನಲೆ ಹಿಂದೊಮ್ಮೆ ವಸಿಷ್ಠ ಕುಲದ ಸೋಮದತ್ತನೆಂಬ ಋಷಿಯು ಸಶರೀರ ಮೋಕ್ಷ ಬಯಸಿ ವಾರಣಾಸಿಯಲ್ಲಿ ತಪಸ್ಸು ಮಾಡುತ್ತಿದ್ದಾಗ ಕಾಶಿವಿಶ್ವೇಶ್ವರ ಪ್ರತ್ಯಕ್ಷನಾಗಿ ನಿನ್ನ ಉದ್ದೇಶ ಫಲಿಸಬೇಕೆಂದರೆ ಕಾಶಿಗಿಂತಲೂ ಮಿಗಿಲಾದ ದಕ್ಷಿಣ ಗಂಗೆಯೆಂದು ಹೆಸರಾಗಿರುವ ಕಾವೇರಿ ನದಿತೀರದ ತಲವನಪುರದ ಸಿದ್ದಾರಣ್ಯ ಕ್ಷೇತ್ರಕ್ಕೆ ಹೋಗುವಂತೆ ಹೇಳುತ್ತಾನೆ. ಆಗ ಸೋಮದತ್ತನು ತನ್ನ ಶಿಷ್ಯರೊಡಗೂಡಿ ಸಿದ್ದಾರಣ್ಯ ಕ್ಷೇತ್ರಕ್ಕೆ ಬರುತ್ತಿದ್ದಂತೆಯೇ ಆನೆಗಳ ಹಿಂಡಿಗೆ ಸಿಲುಕಿ ಭಯಭೀತರಾಗಿ. ಆನೆ...ಆನೆ... ಎಂದು ಕೂಗಿಕೊಂಡೇ ಗುರು ಶಿಷ್ಯರೆಲ್ಲಾ ಸಾವಿಗೀಡಾಗುತ್ತಾರೆ. ಸಾಯುವ ಸಮಯದಲ್ಲಿ ಆನೆಯ ಸ್ಮರಣೆಗೈದ ಅವರು ಮುಂದೆ ಸಿದ್ದಾರಣ್ಯ ಕ್ಷೇತ್ರದಲ್ಲೇ ಆನೆಗಳಾಗಿ ಜನ್ಮತಾಳುತ್ತಾರೆ. ಈ ಆನೆಗಳು ಪ್ರತಿದಿನ ಗೋಕರ್ಣ ಸರೋವರದಲ್ಲಿ ಮಿಂದು ಕಮಲಪುಷ್ಪಗಳನ್ನು ಸೊಂಡಿಲಿನಿಂದ ತೆಗೆದುಕೊಂಡು ಹೋಗಿ ಅಲ್ಲಿಯೇ ಸಮೀಪದಲ್ಲಿದ್ದ ಶಾಲ್ಮಲ ವೃಕ್ಷ(ಬೂರಗದಮರ)ದ ಪೊದೆಯೊಂದಕ್ಕೆ ನಿತ್ಯ ಪೂಜೆ ಮಾಡುತ್ತಿರುತ್ತವೆ. ಇದನ್ನು ಕಂಡು ಕುತೂಹಲಗೊಂಡ ತಲ ಮತ್ತು ಕಾಡ ಎಂಬ ಬೇಡರು ತಮ್ಮ ಕೊಡಲಿಗಳಿಂದ ಬೂರಗದ ಮರದ ಪೊದೆಯನ್ನು ಕತ್ತರಿಸಿದಾಗ ಕೊಡಲಿ ತಾಗಿ ಅಲ್ಲಿದ್ದ ಲಿಂಗದಿಂದ ರಕ್ತ ಚಿಮ್ಮುತ್ತದೆ. ಇದರಿಂದ ಭಯಗೊಂಡ ಬೇಡರು ನಡುಗತೊಡಗುತ್ತಾರೆ. ಆಗ ಅಶರೀರವಾಣಿಯೊಂದು ಕೇಳಿಬರುತ್ತದೆ. ಆಶರೀರವಾಣಿಯ ಆಣತಿಯಂತೆ ಆ ಬೇಡರು ಬೂರಗದ ಮರದ ಎಲೆ ಮತ್ತು ಕಾಯಿಗಳನ್ನು ಜಜ್ಜಿ ಅರೆದು ಲಿಂಗಕ್ಕೆ ಹಚ್ಚಿದಾಗ ರಕ್ತ ಚಿಮ್ಮುತ್ತದೆ. ಅದನ್ನು ಕುಡಿದ ತಲ ಮತ್ತು ಕಾಡರು ಹಾಗೂ ಆನೆ ಜನ್ಮ ತಾಳಿದ ಸೋಮದತ್ತ ಋಷಿ ಮತ್ತು ಅವನ ಶಿಷ್ಯರು ಮೋಕ್ಷ ಪಡೆಯುತ್ತಾರೆ. ಅಂದಿನಿಂದ ತಲ-ಕಾಡರೆಂಬ ಬೇಡರಿಂದಾಗಿ ತಲವನಪುರ ತಲಕಾಡು ಎಂದು ಹೆಸರಾದರೆ ಆನೆ ಜನ್ಮತಾಳಿ ಇಲ್ಲಿ ಮುಕ್ತ್ತಿಹೊಂದಿದ ಸೋಮದತ್ತ ಋಷಿಯಿಂದ ಸಿದ್ದಾರಣ್ಯ ಕ್ಷೇತ್ರವು ಗಜಾರಣ್ಯ ಕ್ಷೇತ್ರವಾಗಿ ಪ್ರಸಿದ್ಧಿಯಾಗುತ್ತದೆ. ಹಾಗೆಯೇ ತನಗೆ ತಾನೆ ವೈದ್ಯ ಮಾಡಿಕೊಂಡ ಪರಶಿವನು ವೈದ್ಯನಾಥೇಶ್ವರನಾಗಿ ಇಲ್ಲಿ ನೆಲೆಗೊಂಡಿದ್ದಾನೆಂಬುದು ಪುರಾಣ ಪ್ರಸಿದ್ಧ ಕಥೆ. ತಲಕಾಡಿನ ಚಾರಿತ್ರಿಕ ಒಳನೋಟ ತಲಕಾಡಿನ ವಿಷಯವಾಗಿ ವಿಶೇಷವಾಗಿ ಗಂಗರಿಗೆ ಹೆಚ್ಚಿನ ಪ್ರಾಧಾನ್ಯವಿದೆ. ಇವರು ತಲಕಾಡಿನ ಗಂಗರೆಂದೇ ಪ್ರಸಿದ್ಧರು. ತಲಕಾಡನ್ನು ಬಹು ವೈಭವದಿಂದ ಮೆರೆಸಿದ ಕೀರ್ತಿ ಕೂಡ ಇವರದೇ. ಕ್ರಿ.ಶ. 247-266ರಲ್ಲಿ ಗಂಗರಸ ಹರಿವರ್ಮನು ಇಂದಿನ ತಲಕಾಡನ್ನು ತಲವನಪುರ ಹೆಸರಿನಲ್ಲಿ ಆಳ್ವಿಕೆ ನಡೆಸಿದ್ದು ಮುಂದೆ ಈತನ ವಂಶಕ್ಕೆ ತಲಕಾಡು ರಾಜಧಾನಿಯಾಗಿ ಮುಂದುವರಿದು 8ನೇ ಶತಮಾನದಲ್ಲಿ ಗಂಗರಾಜ ಶ್ರೀಪುರುಷನು ಅತ್ಯಂತ ವೈಭವದಿಂದ ತಲಕಾಡನ್ನು ಆಳಿದ್ದನೆಂದು ಚರಿತ್ರೆ ಸಾರುತ್ತದೆ. ನಂತರ ಗಂಗರು, ರಾಷ್ಟ್ರಕೂಟರ ಸಾಮಂತರಾಗಬೇಕಾಗುತ್ತದೆ. 10ನೇ ಶತಮಾನದ ಆರಂಭದಲ್ಲಿ ಗಂಗರ ಕೈಬಿಟ್ಟು ತಲಕಾಡು ಚೋಳರ ಕೈವಶವಾಗಿ ರಾಜಪುರ ಎಂಬ ಹೊಸ ಹೆಸರು ಹೊಂದುತ್ತದೆ. ಆದರೆ ಹೆಚ್ಚು ಕಾಲ ಚೋಳರು ಇಲ್ಲಿ ನೆಲೆಗೊಳ್ಳಲು ಹೊಯ್ಸಳರು ಅವಕಾಶ ಕೊಡುವುದಿಲ್ಲ. ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಚೋಳರ ಮೇಲೆ ಯುದ್ಧ ಮಾಡಿ ಅವರನ್ನು ತಮಿಳುನಾಡಿಗೆ ಅಟ್ಟಿ ತಲಕಾಡಿನ್ನು ವಶಪಡಿಸಿಕೊಂಡು `ತಲಕಾಡುಗೊಂಡ` ಎಂಬ ಅಭಿದಾನಕ್ಕೆ ಪಾತ್ರನಾಗುತ್ತಾನೆ. ಅದೇ ಸಮಯಕ್ಕೆ ಕೀರ್ತಿನಾರಾಯಣ ದೇವಸ್ಥಾನವನ್ನು ಅದ್ಭುತವಾಗಿ ನಿರ್ಮಿಸುತ್ತಾನೆ. ಈಗಲೂ ತಲಕಾಡಿನಲ್ಲಿ ಎಲ್ಲಾ ದೇವಾಲಯಗಳಿಗಿಂತಲೂ, ಹೊಯ್ಸಳ ಶೈಲಿಯ ದೇವಾಲಯಗಳು ಹೆಚ್ಚು ಆರ್ಕಷಣೀಯ. 14ನೇ ಶತಮಾನದ ತನಕವೂ ತಲಕಾಡು ಹೊಯ್ಸಳರ ಆಳ್ವಿಕೆಯಲ್ಲಿ ಮೆರೆದು ತದನಂತರ ವಿಜಯನಗರದ ಅರಸರ ಆಧಿಪತ್ಯಕ್ಕೆ ಒಳಪಡುತ್ತದೆ. ಮುಂದೆ ಕ್ರಿ.ಶ.1634ರಲ್ಲಿ ಇದು ಮೈಸೂರು ಅರಸರ ಪಾಲಾಗುತ್ತದೆ. ಕ್ರಿ.ಶ.1868ರ ವರೆಗು ತಲಕಾಡು ತಾಲ್ಲೂಕು ಕೇಂದ್ರವಾಗಿತ್ತು. 1882ರಲ್ಲಿ ತಾಲ್ಲೂಕು ಕೇಂದ್ರ ಟಿ.ನರಸೀಪುರಕ್ಕೆ ವರ್ಗಾವಣೆಯಾಗಿದೆ.
ಸ್ಥಳ ಪುರಾಣ