ಎತ್ತ ನೋಡಿದರತ್ತ ಮರಳರಾಶಿ, ಗಗನಚುಂಬಿಸುವ೦ಥ ಮರಳಗುಡ್ಡೆಗಳು, ಊರು ತುಂಬ ಮರಳಿನದೇ ರಂಗವಲ್ಲಿ. ಗುಡಿ-ಗೋಪುರಗಳು, ಮನೆಮಠಗಳು, ಕಾಡು-ಮೇಡುಗಳು, ನಡೆವ ರಸ್ತೆ ಎಲ್ಲಕ್ಕೂ ಮರಳಿನದೇ ನಂಟು. ಇದು ತಲಕಾಡಿನ ಪರಿ. ಕಾಲಿಟ್ಟಲ್ಲಿ ಮರಳು ಕೈಚಾಚಿದಲ್ಲಿ ಮರಳು! ಇದು ತಲಕಾಡು ಇರುವ ರೀತಿ. ಇದರ ಹಿಂದೊಂದು ಶಾಪದ ಕಥೆ ಹೀಗಿದೆ. ಶ್ರೀರಂಗರಾಯ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ಆಳುತ್ತಿದ್ದ ಕಾಲದಲ್ಲಿ ಆತನಿಗೆ ಬೆನ್ನುಫಣಿ ರೋಗ ಬರುತ್ತದೆ. ಅದರ ನಿವಾರಣೆಗಾಗಿ ಆತ ತನ್ನ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ಬರುತ್ತಾನೆ. ಆ ಸಂದರ್ಭದಲ್ಲಿ ರೋಗ ಉಲ್ಬಣಗೊಂಡು ಶ್ರೀರಂಗರಾಯ ತಲಕಾಡಿನಲ್ಲೇ ಸಾವಿಗೀಡಾಗುತ್ತಾನೆ. ಈ ಸಂದರ್ಭ ಉಪಯೋಗಿಸಿಕೊಂಡು ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ...