ಶ್ರೀ ರಂಗನಾಥಸ್ವಾಮಿ ದೇವಾಲಯ, ತಿರುಮಲೆ ಮಾಗಡಿ, ರಾಮನಗರ ಜಿಲ್ಲೆ - 562120, ರಾಮನಗರ .
Sri Ranganatha Swamy Temple, Thirumale, Ramanagar - 562120, Ramanagara District [TM000079]
×
Temple History
ಸ್ಥಳ ಪುರಾಣ
ಶ್ರೀ ರಂಗನಾಥ ಸ್ವಾಮಿ ದೇವಾಲಯದ ಇತಿಹಾಸ
ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ ಭಾರತೀಯ ಪುರಾತತ್ವ ಇಲಾಖೆಯ ಕರ್ನಾಟಕ ವಿಭಾಗದ ಸಂರಕ್ಷಿತ ಸ್ಮಾರಕಗಳಾಗಿವೆ. ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಂದಿನ ತಿರುಮಲೆ ಮಾಗಡಿ ಕ್ಷೇತ್ರ ಸ್ವರ್ಣಾಚಲ-ಸ್ವರ್ಣಾದ್ರಿ-ಮಾಂಡವ್ಯ ಕುಟಿ- ಮಾಕುಟಿ- ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಕ್ಷೇತ್ರ. ಶ್ರೀ ದೇಗುಲವು 12 ನೇ ಶತಮಾನದಲ್ಲಿ ಚೋಳರ ಕಾಲದಲಿ ನಿರ್ಮಾಣವಾಯಿತು ಎಂದು ತಿಳಿದುಕೊಂಡಿದೆ.ಹೊಯ್ಸಳರ ಕಾಲದ ಕಂಬಗಳು ಕೆಂಪೇಗೌಡ ಕಾಲದ ಪ್ರಕಾರ ಬಿತ್ತಿಚಿತ್ರಗಳು ದೇವಾಲಯದ ಪುರಾಣಕ್ಕೆ ಸಂಬಂಧ ಕಲ್ಪಿಸುತ್ತವೇ
ಈ ಕ್ಷೇತ್ರ ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಪುಣ್ಯನದಿ ಹಾಗೂ ಗಿರಿಕಾನನಗಳಿಂದ ಕೂಡಿದ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಪ್ರಹ್ಲಾದ ಮುಂತಾದವರ ತಪೋ ಕ್ಷೇತ್ರವಾಗಿದ್ದು, ತಿರುಪತಿ ಶ್ರೀನಿವಾಸನ ಆಜ್ನೆಯಂತೆ ಮಾಂಡವ್ಯ ಋಷಿಗಳು ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು...ಶ್ರೀ ರಂಗನಾಥ ಸ್ವಾಮಿ ದೇವಾಲಯದ ಇತಿಹಾಸ
ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ ಭಾರತೀಯ ಪುರಾತತ್ವ ಇಲಾಖೆಯ ಕರ್ನಾಟಕ ವಿಭಾಗದ ಸಂರಕ್ಷಿತ ಸ್ಮಾರಕಗಳಾಗಿವೆ. ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಂದಿನ ತಿರುಮಲೆ ಮಾಗಡಿ ಕ್ಷೇತ್ರ ಸ್ವರ್ಣಾಚಲ-ಸ್ವರ್ಣಾದ್ರಿ-ಮಾಂಡವ್ಯ ಕುಟಿ- ಮಾಕುಟಿ- ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಕ್ಷೇತ್ರ. ಶ್ರೀ ದೇಗುಲವು 12 ನೇ ಶತಮಾನದಲ್ಲಿ ಚೋಳರ ಕಾಲದಲಿ ನಿರ್ಮಾಣವಾಯಿತು ಎಂದು ತಿಳಿದುಕೊಂಡಿದೆ.ಹೊಯ್ಸಳರ ಕಾಲದ ಕಂಬಗಳು ಕೆಂಪೇಗೌಡ ಕಾಲದ ಪ್ರಕಾರ ಬಿತ್ತಿಚಿತ್ರಗಳು ದೇವಾಲಯದ ಪುರಾಣಕ್ಕೆ ಸಂಬಂಧ ಕಲ್ಪಿಸುತ್ತವೇ
ಈ ಕ್ಷೇತ್ರ ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಪುಣ್ಯನದಿ ಹಾಗೂ ಗಿರಿಕಾನನಗಳಿಂದ ಕೂಡಿದ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಪ್ರಹ್ಲಾದ ಮುಂತಾದವರ ತಪೋ ಕ್ಷೇತ್ರವಾಗಿದ್ದು, ತಿರುಪತಿ ಶ್ರೀನಿವಾಸನ ಆಜ್ನೆಯಂತೆ ಮಾಂಡವ್ಯ ಋಷಿಗಳು ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು ಮಾಡಿದರು. ಆಗ ಒಂದು ದಿನ ಸ್ವಪ್ನದಲ್ಲಿ ಶ್ರೀನಿವಾಸ ದೇವರು ಕಾಣಿಸಿಕೊಂಡು ಉದ್ಭವ ಸಾಲಿಗ್ರಾಮ ರೂಪದಲ್ಲಿರುವ ನನ್ನನ್ನು ನಿತ್ಯವೂ ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಯಾಗಿ ಮೋಕ್ಷ ಲಭಿಸುತ್ತದೆ ಎಂದು ಹೇಳಿದನಂತೆ ಅದಂರೆಯೇ ಮಾಂಡವ್ಯ ಋಷಿಗಳು ಉದ್ಭವ ಸಾಲಿಗ್ರಾಮವನ್ನು ನಂತರ ಅಲ್ಲಿ ವೇಂಕಟೇಶ್ವರ ಸ್ವಾಮಿಯ ವಿಗ್ರಹವನ್ನುಪ್ರತಿಷ್ಠಾಪನೆ ಮಾಡಿ ವಸಿಷ್ಠರ ಜೊತೆ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸಿ ಮುಕ್ತಿಯನ್ನು ಪಡೆದರೆಂದು ಹೇಳಲಾಗಿದೆ.
ಮಾಂಡವ್ಯ ಋಷಿಗಳು ತಪಸ್ಸನ್ನಾಚರಿಸಿದ ಕ್ಷೇತ್ರವಾದ್ದರಿಂದ ಇಲ್ಲಿರುವ ದೇವರನ್ನು ಮಾಂಡವ್ಯನಾಥನೆಂಬುದಾಗಿ ಹಾಗೂ ರೂಢಿಯಲ್ಲಿ ಮಾಗಡಿ ರಂಗನಾಥಸ್ವಾಮಿ ಎಂಬುದಾಗಿ ಪ್ರಸಿದ್ಧಿ ಪಡೆಯಿತು.
ದೇವಾಲಯದಲ್ಲಿರುವ ಉದ್ಭವ ಸಾಲಿಗ್ರಾಮಕ್ಕೆ ಎಷ್ಟೇ ನೀರಿನಿಂದ ಅಭಿಷೇಕ ಮಾಡಿದರೂ ಅದು ಒಂದು ಹನಿಯೂ ಇರದಂತೆ ಇಂಗಿ ಹೋಗುವುದು ಈ ಕ್ಷೇತ್ರದ ಮತ್ತೊಂದು ಮಹಿಮೆಯಾಗಿದ್ದು, ಆ ನೀರು ಎಲ್ಲಿಗೆ ಹೋಗುತ್ತದೆ ಎಂಬುದು ಈ ವರೆಗೂ ತಿಳಿಯದ ರಹಸ್ಯವಾಗಿದೆ. ಅರ್ಚನೆ,ಸುದರ್ಶನ ಹೋಮ,ಸಾಮೂಹಿಕ ಕಲ್ಯಾಣೋತ್ಸವ,ಪ್ರತ್ಯಕ ಕಲ್ಯಾಣೋತ್ಸವ ಶ್ರವಣ ಮಾಸದ ಪೂಜೆ ಹಗೂ ಧನುರ್ಮಾಸದ ಪೂಜೆ ಶ್ರೀ ದೇಗುಲದಲ್ಲಿ ವಿಶೇಷವಾಗಿದೆ.
ಸ್ವಾಮಿಯವರ ದರ್ಶನಕ್ಕೆ ಬರುವ ಭಕ್ತರಿಗೆ ಇಲ್ಲಿ ಪೂಜೆ ಸಲ್ಲಿಸುವುದರಿಂದ ಕಂಕಣ ಭಾಗ್ಯ,ಸಂತಾನ ಭಾಗ್ಯ,ಧನ ಪ್ರಾಪ್ತಿ, ದೃಷ್ಠಿ ದೋಷ ನಿವಾರಣೆ ಆಗುವುದೆಂದು ಭಕ್ತರಲ್ಲಿ ನಂಬಿಕೆ ಇದೆ.ತಿರುಪತಿಗೆ ಹೋಗಲಾಗದವರು ಈ ಕ್ಷೇತ್ರದಲ್ಲಿರುವ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸಿದರೆ ಇಷ್ಟಾರ್ಥ ಫಲ ಸಿಗುವುದೆಂಬ ನಂಬಿಕೆ ಇದೆ. ಮಾಗಡಿಯ ಸ್ವರ್ಣಾದ್ರಿಗಿರಿ ತಿರುಮಲೆಯಲ್ಲಿ ಶ್ರೀರಂಗನಿಗೆ ಧನುರ್ಮಾಸದ ವಿಶೇಷ ಪೊಜಾಕೈಂಕರ್ಯಗಳು ಶ್ರೀಸನ್ನಿಧಾನದಲ್ಲಿ ಧನುರ್ಮಾಸದ ಪೊಜಾಸೇವೆಗಳು ಬೆಳಿಗ್ಗೆ 4.30ರಿಂದಲೇ ಪ್ರಾರಂಭವಾಗುತ್ತದೆ. ಕಾಮಧೇನು ಗೋಪೊಜೆಯ ನಂತರ ಶ್ರೀರಂಗನಿಗೆ ಆಂತರಿಕವಾಗಿ ದೈನಂದಿನ ತಿರುವರಾಧನೆ ಸಮರ್ಪಣೆಯಾಗಲಿದೆ. ಇದಾದ ಬಳಿಗೆ ಶ್ರೀಯವರಿಗೆ ಅರ್ಚನೆ,ನಿವೇಧನೆ, ತಿರುಪ್ಪಾವೈ ಪಾರಯಣ ನೆರವೇರಲಿದೆ. ಶ್ರೀ ದೇಗುಲದಲಿ ವಿಶೇಷವಾಗಿ ವೈಕುಂಠ ಏಕಾದಶಿ ,ಕೋಟರೋತ್ಸವ, ಪವಿತ್ರೋತ್ಸವ, ವಿಶೇಷ ಧಾರ್ಮಿಕ ಕಾರ್ಯಗಳು ನೆರವೆರಿಸಲಗುತದೆ.
ಪ್ರತಿ ನಿತ್ಯ ತಿರುಪ್ಪವೈ ನಲ್ಲಿನ ಒಂದೊಂದು ಪಾಶುರಗಳ ಪಾರಾಯಣ ಆಂಡಾಳ್ ತಾಯಿಯ ಸಮ್ಮುಖದಲ್ಲಿ ಶ್ರೀರಂಗನಾಥಸ್ವಾಮಿಯ ಪಾದಕಮಲಗಳಿಗೆ ಅರ್ಪಣೆಯಾಗಲಿದೆ 6ರ ವರೆಗೆ ಶ್ರೀದೇಗುಲ ತೆರೆದಿರುತ್ತದೆ ಪುನಃ 9ಕ್ಕೆ ಶ್ರೀದೇಗುಲ ತೆರೆಯಲಾಗುತ್ತದೆ. ಶ್ರೀ ಸ್ವಾಮಿಯವರು ಪಶ್ಚಿಮಾವೆಂಕಟಾಚಲ ಎಂದು ನಾಮಾಂಕಿತವಾಗಿದೆ.