ಶ್ರೀ ರಂಗನಾಥ ಸ್ವಾಮಿ ದೇವಾಲಯದ ಇತಿಹಾಸ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ ಭಾರತೀಯ ಪುರಾತತ್ವ ಇಲಾಖೆಯ ಕರ್ನಾಟಕ ವಿಭಾಗದ ಸಂರಕ್ಷಿತ ಸ್ಮಾರಕಗಳಾಗಿವೆ. ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಂದಿನ ತಿರುಮಲೆ ಮಾಗಡಿ ಕ್ಷೇತ್ರ ಸ್ವರ್ಣಾಚಲ-ಸ್ವರ್ಣಾದ್ರಿ-ಮಾಂಡವ್ಯ ಕುಟಿ- ಮಾಕುಟಿ- ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಕ್ಷೇತ್ರ. ಶ್ರೀ ದೇಗುಲವು 12 ನೇ ಶತಮಾನದಲ್ಲಿ ಚೋಳರ ಕಾಲದಲಿ ನಿರ್ಮಾಣವಾಯಿತು ಎಂದು ತಿಳಿದುಕೊಂಡಿದೆ.ಹೊಯ್ಸಳರ ಕಾಲದ ಕಂಬಗಳು ಕೆಂಪೇಗೌಡ ಕಾಲದ ಪ್ರಕಾರ ಬಿತ್ತಿಚಿತ್ರಗಳು ದೇವಾಲಯದ ಪುರಾಣಕ್ಕೆ ಸಂಬಂಧ ಕಲ್ಪಿಸುತ್ತವೇ ಈ ಕ್ಷೇತ್ರ ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಪುಣ್ಯನದಿ ಹಾಗೂ ಗಿರಿಕಾನನಗಳಿಂದ ಕೂಡಿದ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಪ್ರಹ್ಲಾದ ಮುಂತಾದವರ ತಪೋ ಕ್ಷೇತ್ರವಾಗಿದ್ದು, ತಿರುಪತಿ ಶ್ರೀನಿವಾಸನ ಆಜ್ನೆಯಂತೆ ಮಾಂಡವ್ಯ ಋಷಿಗಳು ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು...