ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ, ಸಾವನದುರ್ಗ, ರಾಮನಗರ - 561201, ರಾಮನಗರ .
Sri Lakshmi Narasimha Swamy Temple, Savanadurga, Ramanagar - 561201, Ramanagara District [TM000080]
×
Temple History
ಸ್ಥಳ ಪುರಾಣ
ಸಾವನದುರ್ಗ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ವಿಶೇಷತೆ, ಪುರಾಣ ,ವಿಶೇಷ ಪೂಜೆ,ಇನ್ನಿತರ ಮಾಹಿತಿ ವ ಮಾಗಡಿ ತಾಲೂಕು ರಾಮನಗರ ಜಿಲ್ಲೆ 562120
ದೇಗುಲದ ಇತಿಹಾಸ
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲವನ್ನು ಸಿಮಂತ ಮಹಾರಾಜ (ಕೆಂಪೇಗೌಡರ ಅಡಿಯಾಳು) ಆಳ್ವಿಕೆ ಕಾಲದಲಿ ಅಂದರೇ ಸುಮರು 220 ವರ್ಷಗಳ ಹಿಂದೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ನಿರ್ಮಾಣವಾಯಿತು.ಸಿಮಂತ ರಾಜರ ಮಗಳಿಗೇ ಬ್ರಹ್ಮ ಪಿಶಾಚಿ ಶಾಪ ವಿಮೋಚನೆಯಾಗಿ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಈ ದೇಗುಲವನ್ನು ನಿರ್ಮಾಣ ಮಾಡಿದರು ಎಂದು ತಿಳಿಯಲಾಗಿದೆ, ರಾಮನಗರ ಜಿಲ್ಲೆ ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಿಂದ ಶ್ರೀ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ನಿತ್ಯ ಪೂಜೆ ಆರಾಧನೆಗಾಗಿ ಕೊಂಡ್ಲಯ್ಯ ಎಂಬುವರು ಮೊದಲು ಕರೆತರಲಾಯ್ತು, ಈವರ ಮರಣ ನಂತರ ಇವರ ಮಕ್ಕಳಾದ ಅಳಸಿಂಗಯ್ಯ ,ಕೆ ನರಸಿಂಹಯ್ಯ...ಸಾವನದುರ್ಗ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ವಿಶೇಷತೆ, ಪುರಾಣ ,ವಿಶೇಷ ಪೂಜೆ,ಇನ್ನಿತರ ಮಾಹಿತಿ ವ ಮಾಗಡಿ ತಾಲೂಕು ರಾಮನಗರ ಜಿಲ್ಲೆ 562120
ದೇಗುಲದ ಇತಿಹಾಸ
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲವನ್ನು ಸಿಮಂತ ಮಹಾರಾಜ (ಕೆಂಪೇಗೌಡರ ಅಡಿಯಾಳು) ಆಳ್ವಿಕೆ ಕಾಲದಲಿ ಅಂದರೇ ಸುಮರು 220 ವರ್ಷಗಳ ಹಿಂದೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ನಿರ್ಮಾಣವಾಯಿತು.ಸಿಮಂತ ರಾಜರ ಮಗಳಿಗೇ ಬ್ರಹ್ಮ ಪಿಶಾಚಿ ಶಾಪ ವಿಮೋಚನೆಯಾಗಿ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಈ ದೇಗುಲವನ್ನು ನಿರ್ಮಾಣ ಮಾಡಿದರು ಎಂದು ತಿಳಿಯಲಾಗಿದೆ, ರಾಮನಗರ ಜಿಲ್ಲೆ ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಿಂದ ಶ್ರೀ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ನಿತ್ಯ ಪೂಜೆ ಆರಾಧನೆಗಾಗಿ ಕೊಂಡ್ಲಯ್ಯ ಎಂಬುವರು ಮೊದಲು ಕರೆತರಲಾಯ್ತು, ಈವರ ಮರಣ ನಂತರ ಇವರ ಮಕ್ಕಳಾದ ಅಳಸಿಂಗಯ್ಯ ,ಕೆ ನರಸಿಂಹಯ್ಯ ಎಂಬುವರು ದೇಗುಲದ ಪೂಜೆ ಮುಂದುವರೆಸಿಕೊಂಡು ಬಂದಿದ್ದಾರೆ.1931 ಮೊದಲ ಬಾರಿಗೆ ಬ್ರಹ್ಮ ರಥೋತ್ಸವ ಶುರುವಾಗಿ ಇಲ್ಲಿಯವರೆಗು ಪ್ರತಿ ವರ್ಷ ವೈಶಾಕ ಮಾಸದ ವಿಶಾಖ ನಕ್ಷತ್ರ ದಿನ ಸುಮರು 5 ದಿನಗಳ ಕಾಲ ಶ್ರೀ ಲಕ್ಷ್ಮೀನರಸಿಂಹ ಸ್ವಾಮೀಗೆ ಜಾತ್ರೆ ನೆಡುವುದು.1955 ರಂದು ಅಂದಿನ ಮಾನ್ಯ ಮುಖ್ಯಮಂತ್ರಿಯದ ಕೆಂಗಲ್ ಹನುಮಂತಯ್ಯ ನವರು ದೇಗುಲವನ್ನು ನೂತನವಾಗಿ ನಿರ್ಮಿಸಲು ಶಂಕುಸ್ಥಾಪನೆ ನೆರೆವೆರಿಸಿದರು,ನ0ತರದಲ್ಲಿ ಹೂವಾಡಿಗ ಸಮುದಾಯದವರ ಹೆಚ್ಚಿನ ಸಹಕಾರದಿಂದ ದೇವಾಲಯ ನಿರ್ಮಾಣವಾಯಿತು.
1961 ರಂದು ಟಿ ಚೆನ್ನಯ್ಯ ಎಂಬುವರು ದೇಗುಲಕ್ಕೆ ಮೊಟ್ಟಮೊಡಲ ಬಾರಿಗೆ ದೇಗುಲಕ್ಕೆ ವಿದ್ಯುತ್ ಬೆಳಕಿನ ವ್ಯವಸ್ತೆ ಚಾಲೆನೆ ನಿಡಿದರು.
ವಿಶೇಷ ಪೂಜೆ ದಿನಗಳು .
ಶ್ರೀ ದೇವಾಲಯದಲಿ ಕುಜದೋಷ,ಶತ್ರು ನಾಶ,ಮರೆಹಾಕು,ಪ್ರಕಾರ ಉತ್ಸವ ಪ್ರತಿ ಮಂಗಳವರದಂದು ಸ್ವಾಮಿಗಳಿಗೆ ಅರಿಶಿನ ಅಲಂಕಾರ ಹಾಲು ಪೂಜೆ ಈ ದೇಗುಲದಲ್ಲಿ ನಡೆಯುತ್ತವೇ . ಪ್ರತಿ ಮಾಹೆ ಅಮವಾಸ್ಯೆ ಹುಣ್ಣಿಮೆ ಮಂಗಳವರ ಶುಕ್ರವಾರದಂದು ಶನಿವಾರ,ಭಾನುವರ,ಸಾರ್ವಜನಿಕ ಭಕ್ತಾದಿಗಳು ದೇಗುಲಕ್ಕೆ ಭೇಟಿ ನೀಡುವುದು ವಿಶೇಷವಾಗಿದೆ.
ಸಾವನದುರ್ಗ ಬೆಟ್ಟದ ಇತಿಹಾಸ
ಸಾವನದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೩ ಕಿಮೀ ಪಶ್ಚಿಮದಲ್ಲಿರುವ ಮಾಗಡಿ ರಸ್ತೆಯ 12.919654°N 77.292881°E ಎದುರಿಗಿರುವ ಒಂದು ಬೆಟ್ಟವಾಗಿದೆ. ಆ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರಪಂಚದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ೧೨೨೬ ಮೀಟರ್ಗಳಷ್ಟು ಎತ್ತರದಲ್ಲಿದೆ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿ ರೂಪುಕೊಡುತ್ತದೆ. ಇದು ಪರ್ಯಾಯ ದ್ವೀಪದ ನೈಸ್ಗಳು, ಮೂಲ ಸ್ತರಪ್ರವಿಷ್ಟಾಗ್ನಿಶಿಲೆಗಳು ಮತ್ತು ಲ್ಯಾಟರೈಟ್ಗಳನ್ನು ಒಳಗೊಂಡಿದೆ. ಹತ್ತಿರದಲ್ಲಿ ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮತ್ತು ಮಂಚನಬೆಲೆ ಅಣೆಕಟ್ಟಿನತ್ತ ಹರಿಯುತ್ತದೆ.
ಸಾವನದುರ್ಗ ಬೆಟ್ಟಗಳಿಗೆ ಯಾತ್ರಾರ್ಥಿಗಳು ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಇವರು ಬೆಟ್ಟದ ಬುಡದಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಾರೆ. ವಿಹಾರ ಪ್ರವಾಸಿಗಳು ಬೆಟ್ಟದ ನಿರ್ಮಲವೂ ಪ್ರಶಾಂತವೂ ಆದ ಪರಿಸರದಲ್ಲಿ ಸಮಯ ಕಳೆಯಲು ಬರುತ್ತಾರೆ. ಶಿಲಾ ಆರೋಹಿ, ಗುಹೆ ಅನ್ವೇಷಕರು ಮತ್ತು ಸಾಹಿಸಗಳು ಈ ಸ್ಥಳಕ್ಕೆ ಆಗಾಗ್ಗೆ ಬರುವ ಇತರರಾಗಿದ್ದಾರೆ.
ಬಸ್ ಮಾರ್ಗ: ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ರಸ್ತೆಗೆ ಹೋಗುವ ಬಸ್ ಹಿಡಿಯಬೇಕು. ಈ ಬಸ್ ಸಾಮಾನ್ಯವಾಗಿ ನಿಮ್ಮನ್ನು ನಗರದ ಮಿತಿಯೊಳಗೆ ಮಾಗಡಿ ರಸ್ತೆಯ ಒಂದು ಖಚಿತವಾದ ಸ್ಥಳದಲ್ಲಿ ಬಿಡುತ್ತದೆ. ಅಲ್ಲಿಂದ ನೀವು ಮಾಗಡಿ ರಸ್ತೆ ಜಂಕ್ಷನ್ಗೆ ಮತ್ತೊಂದು ಬಸ್ ಹಿಡಿಯಬೇಕು. ಅಲ್ಲಿಂದ ನೀವು ಸಾವನದುರ್ಗಕ್ಕೆ ಹೋಗಲು ಎಡಕ್ಕೆ ತಿರುಗಬೇಕು (ಆ ಸ್ಥಳದಿಂದ ೧೨ ಕಿಮೀ ದೂರವಿದೆ), ಇಲ್ಲಿಂದ ಹೊಸಪೇಟೆ ಗೇಟ್ಗೆ (ಸಾವನದುರ್ಗವು ಇಲ್ಲಿದೆಯೆಂದು ಹೇಳಬಹುದು) ಹೋಗಲು ಖಾಸಗಿ ಮತ್ತು KSRTC ಬಸ್ಗಳು ಲಭ್ಯಯಿವೆ.ಬೆಂಗಳೂರಿನಿಂದ ಇಲ್ಲಿಗೆ ಹೋಗಲು ಒಟ್ಟು ಪ್ರಯಾಣ ಅವಧಿ ೨ ಗಂಟೆ ೧೫ ನಿಮಿಷಗಳು. (ನಿಮಗೆ ಬಸ್ ಸಿಗದಿದ್ದರೆ, ಈ ೧೨ ಕಿಮೀ ದೂರವನ್ನು ತಲುಪಲು ಆಟೊವನ್ನು ಬಳಸಬಹುದು).
ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. ೧೩೪೦ ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ III ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗ ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. ೧೬೩೮ ರಿಂದ ೧೭೨೮ ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. ೧೭೯೧ ರಲ್ಲಿ ಲಾರ್ಡ್ ಕಾರ್ನ್ವಾಲಿಸ್ ಮೂರನೇ ಆಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು. ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್ ನಲ್ಲಿ (೧೭೯೪) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ.[೩] ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು.