ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ, ಕೊಡಗು - 571201, ಕೊಡಗು .
Sri Omkareshwara Temple, Madikeri, Kodagu - 571201, Kodagu District [TM000088]
×
Temple History
ಸ್ಥಳ ಪುರಾಣ
ದೇವಾಲಯ ನಿರ್ಮಾಣ ಹಿನ್ನಲೆ : ಶ್ರೀ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಲು ಲಿಂಗರಾಜೇಂದ್ರ ಒಡೆಯನ ಮನೋವಾಂಛಿತ ಸಂಕಲ್ಪ ಕಾರಣವೆಂದು ತಿಳಿದುಬರುತ್ತದೆ. ಈ ಸಂಬಂಧ ಮೂರು ರೀತಿಯ ಕಾರಣಗಳನ್ನು ಹೇಳುವವರಿದ್ದಾರೆ. ಆದರೆ ನಿಖರ ಅಥವಾ ಸತ್ಯ ಯಾವುದು ತಿಳಿಯುವುದಿಲ್ಲ ಮತ್ತು ರಾಜಶಾಸನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ.
ಮೊದಲನೆಯದಾಗಿ ಲಿಂಗರಾಜೇಂದ್ರ ಒಡೆಯನಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣನೊಬ್ಬ ತನ್ನ ಬಡತನವನ್ನು ನಿವಾರಿಸಿಕೊಳ್ಳಲು ಮಗಳನ್ನೇ ಒಪ್ಪಿಸಲು ಬಂದಿದ್ದನಂತೆ. ಅರಮನೆಗೆ ಬ್ರಾಹ್ಮಣ ತನ್ನ ಮಗಳೊಂದಿಗೆ ಬಂದಾಗ, ಆ ವೇಳೆ ರಾಜ ಹೊರಹೋಗಿದ್ದ. ಅರಮನೆಯ ಕರಣಿಕ ಸುಬ್ಬರಸಯ್ಯ ಎಂಬಾತ (ಈತನೂ ಬ್ರಾಹ್ಮಣ) ಆ ಯುವತಿ ರಾಜನಿಗೆ ಲಭಿಸದಂತೆ ತಪ್ಪಿಸಿದ ಆರೋಪವಿದೆ. ಅರಮನೆಯ ಗೂಢಚಾರರಿಂದ ವಿಷಯ ತಿಳಿದು ರಾಜನು ಸುಬ್ಬರಸಯ್ಯನನ್ನು ರಾಜದ್ರೋಹಕ್ಕಾಗಿ ಕ್ರೂರ ರೀತಿಯಲ್ಲಿ ಕೊಲ್ಲಿಸಿದ ಕತೆಯಿದೆ. ಈ ಸುಬ್ಬರಸಯ್ಯ ಬ್ರಹ್ಮ ರಾಕ್ಷಸನಾಗಿ ಕಾಡತೊಡಗಿದ್ದನಂತೆ. ಆ...ದೇವಾಲಯ ನಿರ್ಮಾಣ ಹಿನ್ನಲೆ : ಶ್ರೀ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಲು ಲಿಂಗರಾಜೇಂದ್ರ ಒಡೆಯನ ಮನೋವಾಂಛಿತ ಸಂಕಲ್ಪ ಕಾರಣವೆಂದು ತಿಳಿದುಬರುತ್ತದೆ. ಈ ಸಂಬಂಧ ಮೂರು ರೀತಿಯ ಕಾರಣಗಳನ್ನು ಹೇಳುವವರಿದ್ದಾರೆ. ಆದರೆ ನಿಖರ ಅಥವಾ ಸತ್ಯ ಯಾವುದು ತಿಳಿಯುವುದಿಲ್ಲ ಮತ್ತು ರಾಜಶಾಸನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ.
ಮೊದಲನೆಯದಾಗಿ ಲಿಂಗರಾಜೇಂದ್ರ ಒಡೆಯನಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣನೊಬ್ಬ ತನ್ನ ಬಡತನವನ್ನು ನಿವಾರಿಸಿಕೊಳ್ಳಲು ಮಗಳನ್ನೇ ಒಪ್ಪಿಸಲು ಬಂದಿದ್ದನಂತೆ. ಅರಮನೆಗೆ ಬ್ರಾಹ್ಮಣ ತನ್ನ ಮಗಳೊಂದಿಗೆ ಬಂದಾಗ, ಆ ವೇಳೆ ರಾಜ ಹೊರಹೋಗಿದ್ದ. ಅರಮನೆಯ ಕರಣಿಕ ಸುಬ್ಬರಸಯ್ಯ ಎಂಬಾತ (ಈತನೂ ಬ್ರಾಹ್ಮಣ) ಆ ಯುವತಿ ರಾಜನಿಗೆ ಲಭಿಸದಂತೆ ತಪ್ಪಿಸಿದ ಆರೋಪವಿದೆ. ಅರಮನೆಯ ಗೂಢಚಾರರಿಂದ ವಿಷಯ ತಿಳಿದು ರಾಜನು ಸುಬ್ಬರಸಯ್ಯನನ್ನು ರಾಜದ್ರೋಹಕ್ಕಾಗಿ ಕ್ರೂರ ರೀತಿಯಲ್ಲಿ ಕೊಲ್ಲಿಸಿದ ಕತೆಯಿದೆ. ಈ ಸುಬ್ಬರಸಯ್ಯ ಬ್ರಹ್ಮ ರಾಕ್ಷಸನಾಗಿ ಕಾಡತೊಡಗಿದ್ದನಂತೆ. ಆ ದಿಸೆಯಲ್ಲಿ ಶಿವದೇವಾಲಯ ಕಟ್ಟಿದ್ದಾಗಿ ಹೇಳುವವರಿದ್ದಾರೆ.
ಇನ್ನೊಂದು ಕತೆ ಪ್ರಕಾರ ಲಿಂಗರಾಜನಿಗೆ ಒಂದು ಕೈ ಬೆರಳು ಇರಲಿಲ್ಲವಂತೆ. ಈ ಕಾರಣ ಅರಮನೆಗೆ ಬಂದ ವೀರಶೈವ ಜಂಗಮನೊಬ್ಬ ಭಿಕ್ಷೆ ಸ್ವೀಕರಿಸಲು ನಿರಾಕರಿಸಿದಾಗ, ಸಿಟ್ಟುಗೊಂಡ ರಾಜ ಆ ಜಂಗಮನನ್ನು ನಿಂದಿಸಿದನಂತೆ. ಜಂಗಮ ಪ್ರತಿಯಾಗಿ ಶಾಪವಿತ್ತು ಕುಲನಾಶದ ಸುಳಿವು ನೀಡಿದ್ದನಂತೆ. ಆ ಪ್ರಾಯಶ್ಚಿತವಾಗಿ ರಾಜ ದೇವಾಲಯ ಕಟ್ಟಿಸಿದನಂತೆ. ಇಂಥ ವಿಭಿನ್ನ ಕತೆಗಳನ್ನು ರಾಜಾಸೂಯೆಯಿಂದ ಹೆಣೆಯುವವರಿದ್ದರೂ ನಿಖರ ದಾಖಲೆಯಿಲ್ಲ.
ನಿರ್ಮಾಣ ಕಾಲ : ಶ್ರೀ ಓಂಕಾರೇಶ್ವರ ದೇವಾಲಯವನ್ನು 2ನೇ ಲಿಂಗರಾಜನು 1.6.1817ರಲ್ಲಿ ನಿರ್ಮಿಸಲು ಆರಂಭಿಸಿದ್ದಾಗಿ ತಿಳಿದು ಬರುತ್ತದೆ. ಹೀಗೆ ಈಶ್ವರನಾಮ ಸಂವತ್ಸರದಲ್ಲಿ ಪ್ರಾರಂಭಿಸಿದ ದೇವಾಲಯವನ್ನು ಚೈತ್ರಶುದ್ಧ ದ್ವಾದಶಿಯ ಭಾನುವಾರದಂದು ಎರಡು ವರ್ಷ ಒಂಭತ್ತು ತಿಂಗಳು ಹಾಗೂ ಇಪ್ಪತ್ತೈದು ದಿನಗಳಲ್ಲಿ ಕೆಲಸ ಪೂರೈಸಿದ್ದಾಗಿ ತಿಳಿದು ಬರುತ್ತದೆ. ವಿನೂತನ ಶೈಲಿಯ ಕಾಮಗಾರಿಯ ಕೆಲಸ ಪೂರ್ಣಗೊಳಿಸಿ, ದಿನಾಂಕ 26.3.1820ರ ವಿಕ್ರಮ ಸಂವತ್ಸರದಲ್ಲಿ ಪ್ರತಿಷ್ಠಾಪಿಸಿದ್ದಾಗಿದೆ.