ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯ, ದುರ್ಗಾಬಡಾವಣೆ, ವಿದ್ಯಾರಣ್ಯಪುರ - 560097, ಬೆಂಗಳೂರು .
Sri Kalika Durga Parmeshwari Temple, Durga Layout, Vidyaranyapura - 560097, Bengaluru Urban District [TM000009]
×
Temple History
ಸ್ಥಳ ಪುರಾಣ
ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. 1988ರಲ್ಲಿ ದಿವೇಬ್ರ| ರಾಮು ಶಾಸ್ತ್ರಿಯವರಿಂದ ಸ್ಥಾಪಿಸಲ್ಪಟ್ಟ ಈ ದೇವಾಲಯವು ಜಗದ್ವಿಖ್ಯಾತವಾಗಿದೆ. ಇದು ಬಹುದೇವತಾ ಸಂಕೀರ್ಣ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿಯೇ ಪ್ರಧಾನ ದೇವತೆ. ಶಕ್ತಿ ಗಣಪತಿ, ಕಾಳಿಂಗನರ್ತನ ಕೃಷ್ಣ, ವಿಜಯದುರ್ಗಿ, ಅಘೋರ ಕಾಳಿ, ಶಕ್ತಿ ಶರಭೇಶ್ವರ, ದಕ್ಷಿಣಾಮೂರ್ತಿ, ಯಜ್ಞಬ್ರಹ್ಮ, ವಲ್ಲಿದೇವಸೇನಾ ಸಮೇತ ಸುಬ್ರಹ್ಮಣ್ಯ ಸ್ವಾಮಿ, ಯೋಗಾನರಸಿಂಹ, ಅಭಯಾಂಜನೇಯಸ್ವಾಮಿ, ಸಪತ್ನಿಯುಕ್ತ ನವಗ್ರಹ ದೇವತೆಗಳು, ಸ್ಪಟಿಕಲಿಂಗ ಚಂದ್ರಮೌಳೇಶ್ವರಯುಕ್ತ ಶ್ರೀ ಶನೈಶ್ಚರ ಸ್ವಾಮಿ, ಲಕ್ಷ್ಮೀ ವೆಂಕಟರಮಣ ಸ್ವಾಮಿ, ಆರೋಗ್ಯ ದೇವತೆ, ಇಂದ್ರಾಕ್ಷ್ಮೀ ಇವರು ದೇಗುಲ ಸಂಕೀರ್ಣದಲ್ಲಿರುವ ಇತರೆ ದೇವತೆಗಳು. ಪೂಜೆ ಪುನಸ್ಕಾರಗಳು, ಹೋಮ ಹವನಗಳು, ವೇದ ಘೋಷಣೆಗಳು ಮತ್ತು ಅನ್ನ ದಾಸೋಹದಿಂದಾಗಿ ಈ ಕ್ಷೇತ್ರ ದೈವಿಕ ಶಕ್ತಿ ಕೇಂದ್ರವಾಗಿ...ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. 1988ರಲ್ಲಿ ದಿವೇಬ್ರ| ರಾಮು ಶಾಸ್ತ್ರಿಯವರಿಂದ ಸ್ಥಾಪಿಸಲ್ಪಟ್ಟ ಈ ದೇವಾಲಯವು ಜಗದ್ವಿಖ್ಯಾತವಾಗಿದೆ. ಇದು ಬಹುದೇವತಾ ಸಂಕೀರ್ಣ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿಯೇ ಪ್ರಧಾನ ದೇವತೆ. ಶಕ್ತಿ ಗಣಪತಿ, ಕಾಳಿಂಗನರ್ತನ ಕೃಷ್ಣ, ವಿಜಯದುರ್ಗಿ, ಅಘೋರ ಕಾಳಿ, ಶಕ್ತಿ ಶರಭೇಶ್ವರ, ದಕ್ಷಿಣಾಮೂರ್ತಿ, ಯಜ್ಞಬ್ರಹ್ಮ, ವಲ್ಲಿದೇವಸೇನಾ ಸಮೇತ ಸುಬ್ರಹ್ಮಣ್ಯ ಸ್ವಾಮಿ, ಯೋಗಾನರಸಿಂಹ, ಅಭಯಾಂಜನೇಯಸ್ವಾಮಿ, ಸಪತ್ನಿಯುಕ್ತ ನವಗ್ರಹ ದೇವತೆಗಳು, ಸ್ಪಟಿಕಲಿಂಗ ಚಂದ್ರಮೌಳೇಶ್ವರಯುಕ್ತ ಶ್ರೀ ಶನೈಶ್ಚರ ಸ್ವಾಮಿ, ಲಕ್ಷ್ಮೀ ವೆಂಕಟರಮಣ ಸ್ವಾಮಿ, ಆರೋಗ್ಯ ದೇವತೆ, ಇಂದ್ರಾಕ್ಷ್ಮೀ ಇವರು ದೇಗುಲ ಸಂಕೀರ್ಣದಲ್ಲಿರುವ ಇತರೆ ದೇವತೆಗಳು. ಪೂಜೆ ಪುನಸ್ಕಾರಗಳು, ಹೋಮ ಹವನಗಳು, ವೇದ ಘೋಷಣೆಗಳು ಮತ್ತು ಅನ್ನ ದಾಸೋಹದಿಂದಾಗಿ ಈ ಕ್ಷೇತ್ರ ದೈವಿಕ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ನೊಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ದುಃಖ ದುಮ್ಮಾನಗಳನ್ನು ಭಗವತಿ ನಿವಾರಿಸಿ ಅವರು ತಿಳಿಮನಸ್ಸಿನಿಂದ ಹಿಂತಿರುಗುವಂತೆ ಮಾಡುತ್ತಾಳೆ. ಇದಕ್ಕಾಗಿ ಈ ಕ್ಷೇತ್ರಕ್ಕೆ ಶ್ವೇತಕ್ಷೇತ್ರ ಎಂಬ ಹೆಸರು ಬಂದಿದೆ. ಪ್ರಧಾನ ದೇವತೆಯಾದ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಿಯ ಎಡಬಲ ಕೈಗಳಲ್ಲಿ ಶಂಖ ಚಕ್ರ ಇರುವುದರಿಂದ ವಿಷ್ಣು ದುರ್ಗಾ ಎಂದೂ ಸಹ ಕರೆಯುತ್ತಾರೆ. ತಿರುಪತಿ ಕ್ಷೇತ್ರಕ್ಕೂ ಶ್ವೇತಕ್ಷೇತ್ರವನ್ನುತ್ತಾರೆ. ಆದ್ದರಿಂದ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದರ್ಶನದ ಪುಣ್ಯಫಲ ಈ ದೇವಿಯ ದರ್ಶನದಿಂದ ಉಂಟಾಗುತ್ತದೆ ಎಂದು ಆಸ್ತಿಕರ ನಂಬಿಕೆ. ಇಲ್ಲಿ ಧ್ವಜಸ್ತಂಭ ಬಹಳ ಪ್ರಮುಖವಾದುದು. ದೇವಾಲಯದ ಪ್ರವೇಶವಾದ ಕೂಡಲೇ ಇಲ್ಲಿಂದಲೇ ದೇವಿಗೆ ನಮಸ್ಕಾರ ಮಾಡಬೇಕು. ಧ್ವಜಸ್ತಂಭದ ಪಕ್ಕ ರಾಹುಕಾಲದ ದೇವಿ ಮತ್ತು ದೇವಿಯ ಮುಂದೆ ಒಂದು ಉದ್ದನೆಯ ಕಲ್ಲು ಹಾಸು ಇದೆ. ಇಲ್ಲಿ ನಿಂಬೆಹಣ್ಣಿನ ದೀಪಗಳನ್ನು ತಟ್ಟೆಯಲ್ಲಿ ಇಟ್ಟು ಹಚ್ಚುವುದು ಒಂದು ವಿಶೇಷ. ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ಮತ್ತು ಶ್ರೀಚಕ್ರ ಹಾಗೂ ಸಪ್ತಮಾತೃಕಾ ದೇವರುಗಳ ಸಮಕ್ಷಮದಲ್ಲಿ ಈ ದೀಪಾರಾಧನೆ ಮಾಡುವುದರಿಂದ ಭಕ್ತರ ಅಭೀಷ್ಟಗಳು ತಪ್ಪದೆ ನೆರವೇರುತ್ತದೆ ಎಂಬ ಪ್ರತೀತಿ ಇದೆ.