ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. 1988ರಲ್ಲಿ ದಿವೇಬ್ರ|| ರಾಮು ಶಾಸ್ತ್ರಿಯವರಿಂದ ಸ್ಥಾಪಿಸಲ್ಪಟ್ಟ ಈ ದೇವಾಲಯವು ಜಗದ್ವಿಖ್ಯಾತವಾಗಿದೆ. ಇದು ಬಹುದೇವತಾ ಸಂಕೀರ್ಣ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿಯೇ ಪ್ರಧಾನ ದೇವತೆ. ಶಕ್ತಿ ಗಣಪತಿ, ಕಾಳಿಂಗನರ್ತನ ಕೃಷ್ಣ, ವಿಜಯದುರ್ಗಿ, ಅಘೋರ ಕಾಳಿ, ಶಕ್ತಿ ಶರಭೇಶ್ವರ, ದಕ್ಷಿಣಾಮೂರ್ತಿ, ಯಜ್ಞಬ್ರಹ್ಮ, ವಲ್ಲಿದೇವಸೇನಾ ಸಮೇತ ಸುಬ್ರಹ್ಮಣ್ಯ ಸ್ವಾಮಿ, ಯೋಗಾನರಸಿಂಹ, ಅಭಯಾಂಜನೇಯಸ್ವಾಮಿ, ಸಪತ್ನಿಯುಕ್ತ ನವಗ್ರಹ ದೇವತೆಗಳು, ಸ್ಪಟಿಕಲಿಂಗ ಚಂದ್ರಮೌಳೇಶ್ವರಯುಕ್ತ ಶ್ರೀ ಶನೈಶ್ಚರ ಸ್ವಾಮಿ, ಲಕ್ಷ್ಮೀ ವೆಂಕಟರಮಣ ಸ್ವಾಮಿ, ಆರೋಗ್ಯ ದೇವತೆ, ಇಂದ್ರಾಕ್ಷ್ಮೀ...