ಶ್ರೀ ರೇಣುಕಾಂಬ ದೇವಸ್ಥಾನ, ಚಂದ್ರಗುತ್ತಿ, ಶಿವಮೊಗ್ಗ - 577429, ಶಿವಮೊಗ್ಗ .
Sri Renukamba Temple, Chandragutti, Shivamoga - 577429, Shivamogga District [TM000092]
×
Temple History
ಪೌರಾಣಿಕ ಹಿನ್ನೆಲೆ
ಚಂದ್ರಗುತ್ತಿ(ಪ್ರಾಚೀನ ಕಾಲದ ಚಂದ್ರಗುಪ್ತ ಪುರ) ಕ್ರೀ.ಶ 3 ರಿಂದ 6 ನೇ ಶತಮಾನದವರೆಗೆ ಬನವಾಸಿ ಕದಂಬರ ಕಾಲದ ಪ್ರಸಿದ್ದ ಪಟ್ಟಣವಾಗಿತ್ತು. ವಿಜಯನಗರ ರಾಜ ವೀರ ಹರಿಹರ(1377-1404) ರ ಕಾಲದಲ್ಲಿ ಬಾಚಣ್ಣ ಎಂಬ ಸ್ಥಳೀಯ ನಾಯಕ ಚಂದ್ರಗುತ್ತಿ ಮತ್ತು ಇತರೆ ಪ್ರದೇಶಗಳನ್ನು ಆಳುತಿದ್ದಾಗಿ, ಕ್ರೀ.ಶ 1396 ರ ಒಂದು ಶಾಸನದಿಂದ ತಿಳಿದು ಬಂದಿರುತ್ತದೆ ನಂತರ ಈ ಸ್ಥಳವು ಕೆಳದಿನಾಯಕರ ಆಳ್ವಿಕೆಗೆ ಒಳಪಟ್ಟಿತ್ತು.
ಕಿರಿದಾದ ಗುಡ್ಡದ ಮೇಲೆ ನಿರ್ಮಿತವಾಗಿರುವ ಶ್ರೀ ರೇಣುಕಾಂಬ ದೇವಾಲಯ ಒಂದು ವಿಶಾಲವಾದ ನೈಸರ್ಗಿಕ ಗುಹೆಯಾಗಿದ್ದು.ಅದರ ಸನಿಹತನಕ ಪಾವಟಿಕೆಗಳಿವೆ. ಒಳಭಾಗದಲ್ಲಿ ಒಂದು ಸಣ್ಣ ಶಿವಲಿಂಗವಿದ್ದು ದೊಡ್ಡ ಪೃಷ್ಟಾಕಾರದ ಎರಡು ಭಂಡೆಗಳಿದ್ದು ಪರಶುರಾಮನಿಂದ ಹೆದರಿ ಈ ಗುಹೆಯನ್ನು ಆಶ್ರಹಿಸಿದ ರೇಣುಕೆ ಎಂದು ಗುರುತಿಸಲಾಗಿದೆ. ಈ ಸ್ಥಳವು ಋಷಿ ಜಮದಗ್ನಿ ಹಾಗೂ ಆಥನ ಸತಿ...ಚಂದ್ರಗುತ್ತಿ(ಪ್ರಾಚೀನ ಕಾಲದ ಚಂದ್ರಗುಪ್ತ ಪುರ) ಕ್ರೀ.ಶ 3 ರಿಂದ 6 ನೇ ಶತಮಾನದವರೆಗೆ ಬನವಾಸಿ ಕದಂಬರ ಕಾಲದ ಪ್ರಸಿದ್ದ ಪಟ್ಟಣವಾಗಿತ್ತು. ವಿಜಯನಗರ ರಾಜ ವೀರ ಹರಿಹರ(1377-1404) ರ ಕಾಲದಲ್ಲಿ ಬಾಚಣ್ಣ ಎಂಬ ಸ್ಥಳೀಯ ನಾಯಕ ಚಂದ್ರಗುತ್ತಿ ಮತ್ತು ಇತರೆ ಪ್ರದೇಶಗಳನ್ನು ಆಳುತಿದ್ದಾಗಿ, ಕ್ರೀ.ಶ 1396 ರ ಒಂದು ಶಾಸನದಿಂದ ತಿಳಿದು ಬಂದಿರುತ್ತದೆ ನಂತರ ಈ ಸ್ಥಳವು ಕೆಳದಿನಾಯಕರ ಆಳ್ವಿಕೆಗೆ ಒಳಪಟ್ಟಿತ್ತು.
ಕಿರಿದಾದ ಗುಡ್ಡದ ಮೇಲೆ ನಿರ್ಮಿತವಾಗಿರುವ ಶ್ರೀ ರೇಣುಕಾಂಬ ದೇವಾಲಯ ಒಂದು ವಿಶಾಲವಾದ ನೈಸರ್ಗಿಕ ಗುಹೆಯಾಗಿದ್ದು.ಅದರ ಸನಿಹತನಕ ಪಾವಟಿಕೆಗಳಿವೆ. ಒಳಭಾಗದಲ್ಲಿ ಒಂದು ಸಣ್ಣ ಶಿವಲಿಂಗವಿದ್ದು ದೊಡ್ಡ ಪೃಷ್ಟಾಕಾರದ ಎರಡು ಭಂಡೆಗಳಿದ್ದು ಪರಶುರಾಮನಿಂದ ಹೆದರಿ ಈ ಗುಹೆಯನ್ನು ಆಶ್ರಹಿಸಿದ ರೇಣುಕೆ ಎಂದು ಗುರುತಿಸಲಾಗಿದೆ. ಈ ಸ್ಥಳವು ಋಷಿ ಜಮದಗ್ನಿ ಹಾಗೂ ಆಥನ ಸತಿ ರೇಣುಕೆ ಎಂದು ಪ್ರತೀತಿ ಇದೆ. ಈ ಗುಹೆಯ ಮುಂಬಾಗವು ಚಾಳುಕ್ಯ ಶೈಲಿಯ ಅಂತರಾಳವನ್ನು ಹೊಂದಿದ್ದು ಅದಕ್ಕು ಮುಂದೆ ವಿಜಯನಗರ ಕಾಲದ ಸಭಾ ಮಂಟಪವನ್ನು ಅಳವಡಿಸಲಾಗಿದೆ. ಈ ಗುಡ್ಡದ ತಪ್ಪಲಿನಲ್ಲಿ ಪಶ್ವಿಮಾಭಿಮುಖವಾಗಿರುವ ಒಂದು ಭೈರವನ ಗುಡಿ ಇದೆ. ಎಂದು (ಕೇಂದ್ರ ಪುರಾತತ್ವ ಇಲಾಖೆಯವರು ಉಲ್ಲೇಖಿಸಿರುವತ್ತಾರೆ).