ಶ್ರೀ ಗವಿಗಂಗಾಧರೇಶ್ವಸ್ವಾಮಿ ದೇವಾಲಯವನ್ನು ತ್ರೇತಾಯುಗದಲ್ಲಿ ಗೌತಮ ಭಾರದ್ವಜರು ಸ್ಥಾಪಿಸಿದ ಲಿಂಗೆಂದು ಪ್ರಸಿದ್ದಿಯಾಗಿದೆ.ಹಾಗೂ ದೇವಾಲಯವು ಬೆಂಗಳೂರು ನಗರ ಮಧ್ಯೆದಲ್ಲಿ ಬಂಡೆ ಒಳಭಾಗದಲ್ಲಿ ( ಗವಿ) ರೂಪದಲ್ಲಿ ಇರುವುದು ವಿಶೇಷ. ನಂತರಕಾಲದಲ್ಲಿ ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ಕಾಲದಲ್ಲಿ ದೇವಾಲಯವನ್ನು ಜೀಣೋದ್ದಾರ ಮಾಡಲಾಗಿರುತ್ತದೆ. ಶ್ರೀ ಹರಿಹರೇಶ್ವರಸ್ವಾಮಿ ದೇವಾಲಯವು ಸುಮಾರು ವರ್ಷಗಳ ಹಳೆಯದ್ದು. 6-6-1976 ರಲ್ಲಿ ಧೋಂಡಸ ಕುಟುಂಬದವರ್ಗದರು ಜೀಣೋದ್ದಾರಮಾಡಲಾಗಿರುತ್ತದೆ. ಶ್ರೀ ಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಚಿಕ್ಕ ಆಂಜನೇಯಸ್ವಾಮಿ ಮೂರ್ತಿಯು 200 ವರ್ಷಗಳ ಕಾಲ ಹಳೇಯದ್ದು ನಂತರ ಮಾನ್ಯ ಮುಖ್ಯ ಮಂತ್ರಿಯಾದ ದಿ:: ಕೇಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟುವ ವೇಳೆಯಲ್ಲಿ ಈ ದೇವಾಲಯವನ್ನು ಕಟ್ಟಿ 8 ಅಡಿಯ ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಗವಿಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ದಕ್ಷಿಣಯಾನದಿಂದ ಉತ್ತರಾಯಣಕ್ಕೆ ಹೋಗುವ...