ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಉತ್ತರ ಪಿನಾಕಿನಿ ನದಿಯ ದಡದಲ್ಲಿ ಶ್ರೀ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ ಇದ್ದು ಪುರಾಣ ಪ್ರಸಿದ್ದವಾದ ಪುಣ್ಯಕ್ಷೇತ್ರವಾಗಿರುತ್ತದೆ. ಈ ಕ್ಷೇತ್ರದಲ್ಲಿರುವ ಪುರಾತನ ಅಶ್ವತ್ಥ ವೃಕ್ಷವು ದ್ವಾಪರಯುಗದ ಶ್ರೀ ಮೈತ್ರೇಯ ಮಹಾಋಷಿಗಳಿಂದ ಸ್ಥಾಪಿಸಲ್ಪಟ್ಟಿದ್ದಾಗಿ ಮತ್ತು ವಿದುರನಿಂದ ಸೇವಿಸಲ್ಪಟ್ಟ ವೃಕ್ಷವಾಗಿರುವುದರಿಂದ ಈ ಕ್ಷೇತ್ರಕ್ಕೆ ವಿದುರಾಶ್ವತ್ಥ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರವು ತ್ರಿಮೂರ್ತಿಗಳಾದ ಶ್ರೀ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತದೆ. ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಶ್ರೀ ಸ್ವಾಮಿಯವರ ದರ್ಶನಕ್ಕೆ ಬರುತ್ತಿರುತ್ತಾರೆ. ಬಂದಂತಹ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಪ್ರಮುಖವಾಗಿ ಭಕ್ತರ ಅಭೀಷ್ಠೆಯಂತೆ ಇಲ್ಲಿ ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ಆಶ್ಲೇಷ ಶಾಂತಿ, ನವಗ್ರಹ ಶಾಂತಿ, ನಕ್ಷತ್ರ ಶಾಂತಿ, ಪಂಚಾಮೃತ ಅಭಿಷೇಕ, ಕಲ್ಯಾಣೋತ್ಸವ, ಮತ್ತು...