ಕರ್ನಾಟಕ ರಾಜ್ಯದ ಪಡುವಣ ಕಡಲ ತೀರದಲ್ಲಿ ಸಸ್ಯ ಸಂಪತ್ತಿನಿAದ ಮೆರೆಯುವ ದಕ್ಷಿಣ ಕನ್ನಡ ತೌಳ ರಾಜ್ಯ ಈ ತುಳುನಾಡು, ಆಸ್ತಿಕ ಜನಗಳು ಕೂಡಿ ಬದುಕಿ ಬಾಳುವ ನಾಡು, ದೇವರು, ದೈವಗಳು, ಗರಡಿಗಳು ತುಂಬಿರುವ ಬೀಡು, ದೇವಾಲಯ, ಭೂತಸ್ಥಾನ, ನಾಗಬನಗಳು ಕಂಗೊಳಿಸುವ ಚೆಂಗೂಡು, ಇಂತಹ ರಾಜ್ಯದಲ್ಲಿ ಶ್ರೀ ಆದಿನಾಥೇಶ್ವರ ದೇವಸ್ಥಾನವು ಮುಖ್ಯವಾದವುಗಳಲ್ಲಿ ಒಂದಾಗಿದೆ. ಈ ಮಂದಿರವು ಮಂಗಳೂರು ವಿಮಾನ ನಿಲ್ದಾಣದಿಂದ ದಕ್ಷಿಣಕ್ಕೆ ಮೂರು ಕಿಲೋಮೀಟರ್ ದೂರ ಇರುವ ಆದ್ಯಪಾಡಿ ಗ್ರಾಮದಲ್ಲಿದೆ. ಈ ದೇವಳದ ಉತ್ತರಕ್ಕೆ ದೊಡ್ಡ ಬೆಟ್ಟವಿದೆ. ದಕ್ಷಿಣಕ್ಕೆ ಕೊಡಪಾನದಲ್ಲಿ ತೆಗೆದು ಅಭಿಷೇಕ ಮಾಡಬೇಕು. “ಅಭಿಷೇಕ ಪ್ರಿಯ ಶಂಕರ” ಎಂಬAತೆ ಎಷ್ಟು ಅಭಿಷೇಕ ಮಾಡಿದೂ ಬಾವಿಯ ನೀರು ಒತ್ತುವುದಿಲ್ಲ. ದೇವಳಯದ ಅರ್ಚಕ ವರ್ಗದವರು ಕೂಡ ಸ್ನಾನ ಮಾಡದೆ ಆ ತೀರ್ಥ ಬಾವಿಯನ್ನು ಮುಟ್ಟುವಂತಿಲ್ಲ. ಅರ್ಚಕ...