ಉಪ್ಪುಂದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಒಂದು ಪುರಾತನ ದೇವಸ್ಥಾನವಾಗಿದ್ದು, ಕ್ರಿ.ಶ. 8ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗಿದೆಯಂಬ ಇತಿಹಾಸವಿದೆ. ಸ್ಕಂದ ಪುರಾಣದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಸನತ್ ಕುಮಾರರಿಗೆ ಸಹ್ಯಾದ್ರಿ ಖಂಡದ ಪಶ್ಚಿಮ ಭಾಗದಿಂದ ಪಶ್ಚಿಮ ಸಮುದ್ರ ತೀರದವರೆಗಿನ ಪುಣ್ಯಕ್ಷೇತ್ರಗಳ ಕುರಿತು ಮಾಹಿತಿಯನ್ನು ಭೋದಿಸಿರುವರು. ಇದೇ ಸ್ಕಂದ ಪುರಾಣದಲ್ಲಿ ಮಾತಂಗ ಮುನಿಶ್ರೇಷ್ಠರು ಇಲ್ಲಿಗೆ ಆಗಮಿಸಿದ್ದು ಸುಮನಾ ನದಿ ದಂಡೆಯ ದುರ್ಗಾ ದೇವಿಯನ್ನು ಆರಾಧಿಸಿದ ಉಲ್ಲೇಖವಿದೆ. ರಾಮಾಯಣದಲ್ಲಿ ಸೈಂಧವರಾಜನು ಈ ಪ್ರದೇಶವನ್ನು ಆಳುತ್ತಿದ್ದುದ್ದಾಗಿಯೂ ಆಗ ಇದಕ್ಕೆ ಲವಣಪುರಿ, ಸೈಂಧವ ಪುರಿ ಎಂಬ ಹೆಸರಿದ್ದಿತ್ತು ಎಂದು ಹೇಳಲಾಗುತ್ತದೆ. ಅಗಸ್ತ್ಯ ಮುನಿಗಳು ವಿಂಧ್ಯ ಪರ್ವತವನ್ನು ದಾಟಿ ದಕ್ಷಿಣ ಭೂಭಾಗಕ್ಕೆ ಬಂದವರು ಸಿಂಹಳ, ಕಾಂಬೋಡಿಯಾಗಳನ್ನು ಸುತ್ತಿ ಪುನಃ ಈಶ್ವರ ಪಾರ್ವತಿಯರ ವಿವಾಹ ಸಮಯದಲ್ಲಿ ಹಾಜರಿರಲು ಉತ್ತರದ ತ್ರಿಯುಗೀ ನಾರಾಯಣವನ್ನು ತಲುಪಲು ಸದಾ...