ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದಾಗಿದ್ದು, 800 ವರ್ಷಗಳಾಗಿವೆ. ಮರ್ದ ಹೆಗ್ಗಡೆಯವರು ತನ್ನ ಸೀಮೆಯಲ್ಲಿ ದೇವಾಲಯ ಇಲ್ಲದನ್ನು ಪರಿಗಣಿಸಿ ದೇವಾಲಯ ನಿರ್ಮಿಸಿದರು. ಪೂರ್ಣ ಶಿಲಾಮಯ ದೇವಾಲಯವಾಗಿದೆ. ಮೂಲಮೂರ್ತಿ ಮಾನುಷ ಪ್ರತಿಷ್ಠೆಯಾಗಿರುತ್ತದೆ. ದೇವಾಲಯದ ಮುಂದೆ ನದಿಯೊಂದು ಹರಿಯುತ್ತಿತ್ತು. ಮರ್ದ ಹೆಗ್ಗಡೆ ಅರಸು ಮನೆತನದಿಂದ ಸ್ಥಾಪಿಸಲ್ಪಟ್ಟಿದೆ. ದೇವಾಲಯದ ಕೆರೆಯ ಹತ್ತಿರ ಹಳೆಗನ್ನಡ ಲಿಪಿಯಲ್ಲಿ ಒಪ್ಪಂದ ಶಾಸನ ಇದೆ. ದೇವಾಲಯವು ಹೂವಿನ ಅಲಂಕಾರ ಅಲಂಕಾರಕ್ಕೆ ಪ್ರಸಿದ್ಧಿಯಾಗಿದೆ, ದೇವಾಲಯದ ಉತ್ಸವ ಆಗುವಾಗ ಅರಶಿನ ಕುಂಕುಮ ಎರಚುವುದು ಪ್ರತೀ ವರ್ಷ ಉತ್ಸವದ ಮರುದಿನ ಓಕುಳಿ ಸ್ನಾನ ಮಾಡುವ ಕ್ರಮ ಇದೆ.. ಕಲ್ಯಾಣಿ ಕೊಳಗಳಲ್ಲಿನ ನೀರಿನ ಸ್ನಾನದಿಂದ ಮಕ್ಕಳ ಸಂಕಲ್ಪ ಪರಿಹಾರವಾಗುತ್ತದೆ. ವಿದ್ಯಾ ನೆನಪು, ಭಯ ಭೀತಿ ಸ್ವಪ್ನ ಇತರೆ ದೋಷ ಪರಿಹಾರವಾಗುತ್ತದೆ. ತೀರ್ಥ ಮತ್ತು ಹಣ್ಣು ಕಾಯಿಯಿಂದ ಪ್ರಸಿದ್ದಿಯಾಗಿದೆ ಇಲ್ಲಿಯ ತೀರ್ಥ...