ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವು ಇತಿಹಾಸ ಪ್ರಸಿದ್ದ ದೇವಾಲಯವಾಗಿರುತ್ತದೆ. ದೇವರ ಮೂಲ ವಿಗ್ರಹವು ವಿಶೇಷ ಮೂರ್ತಿಯಾಗಿರುತ್ತದೆ. 10 ಭುಜಗಳನ್ನು ಹೊಂದಿದ್ದು, 10 ರೀತಿಯ ಆಯುಧಗಳನ್ನು ಹಿಡಿದಿದೆ. ಶ್ರೀ ಲಕ್ಷ್ಮಿನರಸಿಂಹದೇವರು ಉಗ್ರ ಅವತಾರವನ್ನು ತಾಳಿ ತನ್ನ ಕೈಗಳಿಂದ ಹಿರಣ್ಯಕಶ್ಯಪನ ಹೊಟ್ಟೆಯನ್ನು ಸೀಳಿ ಕರುಳುಗಳನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಉಗ್ರ ಅವತಾರವನ್ನು ಹೊಂದಿ ನೋಡಲು ಭಯಂಕರ ಮತ್ತು ವಿಸ್ಮಯಕರವಾದ ರೂಪದಲ್ಲಿರುತ್ತದೆ. ಇಂತಹ ಮೂರ್ತಿಯು ಕರ್ನಾಟಕ ರಾಜ್ಯದ ಯಾವ ದೇವಾಲಯದಲ್ಲಿಯೂ ಕಾಣಸಿಗುವುದಿಲ್ಲ. ಈ ದೇವಾಲಯವು ಬೆಟ್ಟದ ಮೇಲೆ ಇದ್ದು ಸುಮಾರು 2000 ಅಡಿಗಳಷ್ಟು ಎತ್ತರದಲ್ಲಿದೆ. ಸುತ್ತಲು ಮರಗಿಡಗಳಿರುವುದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ದೇವಾಲಯದ ಸುತ್ತಮುತ್ತಲೂ ತೆಂಗಿನ ತೋಟ, ಮರಗಿಡಗಳಿಂದ ಕೂಡಿದ್ದು, ಪ್ರಕೃತಿ ಸೌಂದರ್ಯದಿಂದ ರಮಣೀಯವಾಗಿ ಕಂಗೊಳಿಸುತ್ತದೆ ಮತ್ತು ಬೆಟ್ಟ ಗುಡ್ಡಗಳಿಂದ ಕೂಡಿದ್ದು ನೋಡುಗರ ಕಣ್ಮನ...