ಪಿರಿಯಾಪಟ್ಟಣದ ಮಸಣಿಕಮ್ಮ ದೇವಸ್ಥಾನವು ತುಮಕೂರು ಹಾಸನ ಕೊಡಗು, ಮೈಸೂರು ಮಂಡ್ಯ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯ ಕೇರಳ ಮುಂತಾದ ಸ್ಥಳಗಳ ಭಕ್ತಾದಿಗಳಿಗೆ ಒಲಿದ ದೇವತೆಯಾದ, ಅವರುಗಳ ಮನೋಕಾಮನೆಗಳನ್ನು ಈಡೇರಿಸುವ ದೇವತೆಯಾದ್ದರಿಂದ ದೂರದೃಷ್ಟಿಯುಳ್ಳ ಶ್ರೀ ಮಸಣಿಕಮ್ಮ ದೆವ್ವಗಳ ಕಾಟವನ್ನು ತಪ್ಪಿಸುವ ದೇವತೆಯಾಗಿದ್ದಾಳೆ. ಶ್ರೀ ಮಸಣಿಕಮ್ಮ ಪಿರಿಯಾಪಟ್ಟಣದ ಹಿರೀ ದೇವತೆಯಾಗಿದ್ದು ಉಜ್ಜಯಿನೀ ದೇಶದ ಬಿಜ್ಜಳ ರಾಜನ 7 ಜನ ಹೆಣ್ಣುಮಕ್ಕಳಲ್ಲಿ ಹಿರಿಯವಳಾಗಿದ್ದು ಚಾಮುಂಡಿ ಕಿರಿಯವಳೆಂಬ ಪ್ರತೀತಿಯಿದೆ. ಈಕೆ ಪಿರಿಯಾಪಟ್ಟಣದ ಹಿರಿದೇವತೆ. ಚೆಂಗಾಳ್ವ ರಾಜ್ಯ ದೇವತೆ, ಇಷ್ಟದೇವತೆ, ಮನೆದೇವರು ಆಗಿದ್ದು, ಉರಿಮಸಣಿ, ಕೊಡಗಿನ ಮಮ್ಮಾಯಿ ಎಂಬ ಹೆಸರಿದ್ದು ಚೆಂಗಾಳ್ವ ಪ್ರಭುಗಳ ಕುಲದೇವತೆಯಾಗಿದ್ದು ಈಕೆ ಸ್ಮಶಾನದೇವಿಯೂ ಆಗಿದ್ದು, ಮೂಲತ: ಬ್ರಾಹ್ಮಣ ಕುವರಿಯಾಗಿದ್ದಳೆಂದು ತಿಳಿದು ಬರುತ್ತದೆ. ಮಸಣಿಕಮ್ಮನನ್ನು ಪೂಜಿಸುವ ಪೂಜಾರಿಗಳು ಬೆಸ್ತರು, ಅಲ್ಲದೆ ಎಲ್ಲಾ ಜಾತಿಯವರೂ ಈ ದೇವಿಯನ್ನು ಪೂಜಿಸಿ ಹರಕೆ ಸಲ್ಲಿಸುವ...