ಪೂರ್ವ ಕಾಲದಲ್ಲಿ ಅಂದರೆ ಸುಮಾರು ಸಾವಿರ (1000) ವರ್ಷಗಳ ಹಿಂದೆ ಕೋಲಾಹಲಪುರವು ಅಂದರೆ ಈಗಿನ ಕೋಲಾರವು ಬಹಳ ದಟ್ಟವಾದ ಮತ್ತು ಭಯಂಕರವಾದ ಕಾಡಾಗಿತ್ತು. ನರಸಂಚಾರ ಇಲ್ಲದ ಮತ್ತು ಘೋರ ಮೃಗಗಳಿಂದ ಕೂಡಿತ್ತು. ಸಪ್ತ ಋಷಿಗಳಲ್ಲಿ ಒಬ್ಬರಾದ ಭಾರದ್ವಾಜ ಮಹಾಮುನಿಗಳು ತಪಸ್ವಿಗೆ ಅನುಕೂಲವಾದ ಈ ಪ್ರದೇಶದಲ್ಲಿ ಚಿಕ್ಕ ಗುಡಿಸಲು ಆಶ್ರಮವನ್ನು ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ (ಆಶ್ರಮವನ್ನು) ಸ್ಥಾಪಿಸಿ ಚಿಕ್ಕ ಶ್ರೀ ವೆಂಕಟರಮಣಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಠೆಯನ್ನು ಮಾಡಿ ಆರಾಧನೆಯನ್ನು ಮಾಡುತ್ತಿದ್ದರು. ಅವರು ಪ್ರತಿನಿತ್ಯ ಬೆಳಗಿನ ಜಾವ ಅಂದರೆ ಸುಮಾರು 3 ಗಂಟೆಗೆ ಎದ್ದು ಅಂತರಗAಗೆ ಹೋಗಿ ಗಂಗೆಯಲ್ಲಿ ಸ್ನಾನವನ್ನು ಮಾಡಿ ಶ್ರೀ ಕಾಶಿವಿಶ್ವೇಶ್ವರಸ್ವಾಮಿಯ ದರ್ಶನವನ್ನು ಮಾಡಿ...