ಶ್ರೀ ಬನಶಂಕರಿ ದೇವಾಲಯವು ಬೆಂಗಳೂರು ನಗರ ಎಸ್. ಕರಿಯಪ್ಪ ರಸ್ತೆಯಲ್ಲಿದ್ದು ರಾಜ್ಯದ ಪ್ರಸಿದ್ದವಾದ ದೇವಾಲಯಗಳಲ್ಲಿ ಒಂದಾಗಿರುತ್ತದೆ. ಈ ದೇವಾಲಯವು 20ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು, ಇದನ್ನು ನಿರ್ಮಿಸಿ 106 ವರ್ಷಗಳಾಗಿದೆ. ದೇವಾಲಯದ ಮೂಲ ಮೂರ್ತಿಯು ಶ್ರೀ ಬನಶಂಕರಿ ದೇವಿಯಾಗಿದ್ದು ಇದು ಮಾನುಷ್ಯ ಪ್ರತಿಷ್ಟೆಯಾಗಿರುತ್ತದೆ. ದೇವಾಲಯದ ಸಮೂಹಕ್ಕೆ ಸೇರಿದ ಶ್ರೀವರಪ್ರಸಾದ ಆಂಜನೇಯಸ್ವಾಮಿ ದೇವಾಲಯದ ಆಂಜನೇಯಸ್ವಾಮಿಯ ಮೂರ್ತಿಯು ಬಂಡೆ ಕಲ್ಲಿನ ಮೇಲೆ ಉದ್ಭವವಾಗಿರುತ್ತದೆ.
ಶ್ರೀ ಬನಶಂಕರಿ ದೇವಾಲಯವು ಬೆಂಗಳೂರು ನಗರದ ಮಧ್ಯ ಭಾಗದಲ್ಲಿದ್ದು, ಶ್ರೀ ಬನಶಂಕರಿ ದೇವಿಯ ಹೆಸರಿನಿಂದಲೇ (ಬನಶಂಕರಿ) ಈ ಸ್ಥಳವು ಕರೆಯಲ್ಪಡುತ್ತದೆ. ಈ ದೇವಾಲಯವನ್ನು...