ಶ್ರೀ ಸಾಯಿ ಮಂದಿರ ಟಿಳಕವಾಡಿ ಬೆಳಗಾವಿ ಸದರಿ ದೇವಸ್ಥಾನದಲ್ಲಿ ಕೆ.ಆರ್. ದೇಶಪಾಂಡೆ ಇವರು ಸಾಯಿಬಾಬಾ ಮೂರ್ತಿಯನ್ನು ದಿನಾಂಕ: 28.06.194 ರಲ್ಲಿ ಸಿ.ಟಿ.ಎಸ್. ನಂ 218/ಬಿ ಯಲ್ಲಿ ನಿರ್ಮಿಸಿದ್ದು, ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದರು. ಈ ಹಿಂದೆ ಟಿಳಕವಾಡಿ ಪುರಸಭೆ ಭಾಜಿ ಮಾರ್ಕೆಟ್ ಮಳಿಗೆಯಲ್ಲಿ ಬಾಬಾ ರವರ ಭಾವಚಿತ್ರ ಇಟ್ಟು 20 ವರ್ಷಗಳ ಹಿಂದೆ ಪೂಜೆ ಮಾಡುತ್ತಿದ್ದ ಬಗ್ಗೆ ವದಂತಿ ಇದೆ. ಭಕ್ತಾದಿಗಳ ಸಹಕಾರ ಹಾಗೂ ದೇಣಿಗೆಯಿಂದ ದೇವಸ್ಥಾನವು ನಿರ್ಮಾಣವಾಗಿರುತ್ತದೆ. ಸಾಯಿ ಮಂದಿರವು ಪ್ರಶಾಂತ ಪ್ರಕ್ಋತಿ ಸೌಂದರ್ಯದಲ್ಲಿ, ಅರಳಿ ಮರ ಾಲದ ಮತ್ತು ಬೇವಿನ ಮರ ಇವುಗಳ ಪೂರ್ವಕ್ಕೆ ಇದ್ದು, ಬಾಬಾರವರಿಗೆ ಭಕ್ತರು, ಅಭಿಶೇಕ ಪಲ್ಲಕ್ಕಿ ಸೇವೆ ಇತರೆ ಸೇವೆಗಳನ್ನು ನಿರ್ವಹಿಸುತ್ತಾರೆ. ಉಚಿತ ದೇವರ ದರ್ಶನ ಕಲ್ಪಿಸಲಾಗಿರುತ್ತದೆ. ಶ್ರೀ ಸಾಯಿ ಬಾಬಾ, ಮತ್ತು ಪರಿವಾರ ದೇವರುಗಳಾದ...