ಈ ದೇವಾಲಯವು 17ನೇ ಶತಮಾವನಕ್ಕೆ ಸೇರಿದ್ದು, ಸುಮಾರು 400 ವರ್ಷಗಳಾಷ್ಟು ಪುರಾತನವಾಗಿರುತ್ತದೆ ಎಂದು ತಿಳಿದುಬರುತ್ತದೆ. ಈ ವಿಗ್ರಹವು ಸ್ವಾತಂತ್ರ್ಯ ಪೂರ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಕಟ್ಟಲು ಸುತ್ತಮುತ್ತಿನ ಕೋಟಡಯನ್ನು ಉರುಳಿಸುತ್ತಿದ್ದಾಗ, ನಿರ್ಮಾಣಕಾರ ಸೊಣ್ಣಪ್ಪನವರಿಗೆ ಈ ವಿಗ್ರಹವು ದೊರೆಯಿತು. ಸದರಿ ವಿಗ್ರಹಕ್ಕೆ ಮಿಂಟೋ ಕಣ್ಣಿನ ಆಸ್ಪತ್ರೆಯ ಮುಂಭಾಗದಲ್ಲಿ ಮಣ್ಣಿನಿಂದ ಪುಟ್ಟ ಗೂಡೊಂದನ್ನು ನಿರ್ಮಿಸಲಾಗಿತ್ತು, ಉಡುಪಿ ನಿವಾಸಿ ಆದಮಾರು ಮಠದ ಶಿಷ್ಯರಾದ ವಿದ್ವಾನ್ ವಿಠ್ಠಲದಾಸಾಚಾರ್ಯರು 1922ರಲ್ಲಿ ಪೂಜೆ ಪುರಸ್ಕಾರಗಳನ್ನು ನಡೆಸುತ್ತಿದ್ದರು. ಶಿಥಿಲಗೊಂಡಿದ್ದ ಈ ದೇವಾಲಯವನ್ನು ಆಗಿನ ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜೀರ್ಣೋದ್ಧಾರ ಮಾಡಿದರು. ನಂತರದಲ್ಲಿ ತರಗುಪೇಟೆಯ ವರ್ತಕರು ಗೋಪುರವನ್ನು ನಿರ್ಮಿಸಿದ್ದು, ದಿವಾನ್ ಎನ್ ಮಾಧವರಾಯರು ದೇವಾಲಯಕ್ಕೆ ಕಟಾಂಜನವನ್ನು ಹಾಕಿಸಿದರು. ಹೀಗೆ ಹಲವಾರು ಅಂತರಂಗ ಭಕ್ತರು ಶ್ರೀ ಸ್ವಾಮಿಯವರ...