ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನವು ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ನೆಲೆಸಿದೆ. ತುರುವೇಕೆರೆಯ ಹೃದಯಬಾಗದಲ್ಲಿರುವುದು ವಿಶೇಷವೇ ಸರಿ. ಈ ದೇವಾಲಯವು ಅದ್ಬುತವಾದ ಸ್ಮಾರಕವಾಗಿ ಬೆಳಗುತ್ತಿದೆ. ದ್ವಾಪರ ಯುಗಾಂತ್ಯಕ್ಕೆ ಬದರಿಕಾಶ್ರಮದವಾಸಿಗಳಾದ ಮೃಕುಂಡು ಮುನೀಶ್ವರರು ಮತ್ತು ಚಂದ್ರಚೂಡಾಮುನಿಗಳು ತೀರ್ಥಯಾತ್ರೆ ನಿಮಿತ್ತ ಸಂಚಾರ ಮಾಡಿಕೊಂಡು ಬರುವಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಇಲ್ಲಿಯೇ ತಪಸ್ಸು ಮಾಡಿಕೊಂಡಿದ್ದರು. ಹೀಗಿರುವಾಗ ಮಾಯಾವಿಗಳಾದ ರಾಕ್ಷಸರು ಮೃಗಿ ರೂಪವನ್ನು ಧರಿಸಿಕೊಂಡು ದೇವತೆಗಳನ್ನೂ, ತಪಸ್ವಿಗಳನ್ನೂ, ಪ್ರಜೆಗಳನ್ನೂ, ಹಿಂಸಿಸುತ್ತಿರಲಾಗಿ ದೇವತೆಗಳು ಭಗವಂತನಾದ ಶ್ರೀ ಮಹಾವಿಷ್ಣುವನ್ನು ಕುರಿತು ತಮಗೆ ಪ್ರಾಪ್ತವಾಗಿರುವ ಭಯ, ಕಷ್ಟಗಳನ್ನು ನಿವಾರಣೆ ಮಾಡಬೇಕೆಂದು ವಿಜ್ಞಾಪನೆ ಮಾಡಲಾಗಿ, ಶ್ರೀ ಮಹಾವಿಷ್ಣುವು ದುಷ್ಟ ನಿಗ್ರಹ ಶಿಷ್ಟಪರಿಪಾಲನೆಗಾಗಿ ಅಶ್ವಾರೂಡನಾಗಿ ಬಂದು ರಾಕ್ಷಸರನ್ನು ಸಂಹರಿಸಿದನು. ಆದ್ದರಿಂದಲೆ ಸ್ವಾಮಿಗೆ ಶ್ರೀ ಬೇಟೆರಾಯ ಎಂದು ಹೆಸರು ಬಂದಿದೆ. ನಂತರ ನಾಗನದಿ ತೀರದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಮೃಕಂಡು...