ರಾಮರಾಯ ಐಶ್ವರ್ಯ ಮದದಿಂದ ಬಂಗಾರದ ಚಪ್ಪಲಿಗಳನ್ನು ಮಾಡಿಸಿಕೊಂಡು ತೊಡುತ್ತಿದ್ದರಿಂದಲೇ ಭಾಗ್ಯಲಕ್ಷ್ಮೀಯು ಕೋಪಿಸಿಕೊಂಡು ಯುದ್ದ ಮತ್ತು ಲೂಟಿಯ ನಂತರ ಎರಡು ವರ್ಷಗಳ ಮೇಲೆ ಹಂಪೆ ಮತ್ತು ಆನೆಗುಂದಿ ಬಿಕೋ ಎನ್ನತ್ತಿದ್ದವು. ಚರಿತ್ರಕಾರನೊಬ್ಬನ ಪ್ರಕಾರ ಸ್ಥಳದಲ್ಲಿ ಅರಣ್ಯ ವೃದ್ದಿಸಿ ಹುಲಿ ಚಿರತೆ ಕಾಡು ಪ್ರಾಣಿಗಳು ನಿರ್ಭಯದಿಂದ ಓಡಾಡುತ್ತಿದ್ದವು. ಇನ್ನು ಆನೆಗುಂದಿಯಲ್ಲಿರುವುದು ಯೋಗ್ಯವಲ್ಲವೆಂದು ಭಾಗ್ಯದೇವತೆಯು ಹಾಳುಬಿದ್ದ ವಿಜಯನಗರ ಸಾಮ್ರಾಜ್ಯದಿಂದ ಹೊರನಡೆದಳು. ಆದರೆ ಎಲ್ಲಿಗೆ …? ಈ ವಿಷಯದ ಬಗ್ಗೆ ಪ್ರಾಸಂಗಿಕವಾಗಿ ಯೋಚಿಸುವುದು ಸೂಕ್ತವೆನಿಸುತ್ತದೆ. ಆನೆಗುಂದಿಯಿಂದ ಲಕ್ಷ್ಮೀಯು ಘತ್ತರಗಿಗೆ ಹೇಗೆ ಬಂದಳು. ಹಿಂದೆ ಯುದ್ದದ ನಂತರ ಶಾಹಿ ಸೈನ್ಯವು ಲೂಟಿ ಮಾಡಿದ ವಸ್ತುಗಳನ್ನು ತರುತ್ತಿರುವಾಗ ಗಾಜಿನ ಕಂಬದ ರೂಪದಲ್ಲಿರುವ ಲಕ್ಷ್ಮೀಯನ್ನು ಅರ್ಚಕರು ಸಾಗಿಸಿರಬಹುದು ತಂದು ಭೀಮಾನದಿಯಲ್ಲಿ ತೇಲಿಬಿಟ್ಟಿರಬಹುದು. ಏಕೆಂದರೆ ಆನೆಗುಂದಿಯ ಬಳಿ ತುಂಗಾನದಿ ಹರಿಯುವುದು ಮತ್ತು ಆ ನದಿ ಎಲ್ಲಿಯೂ...