ಬಳ್ಳಾರಿ ಜಿಲ್ಲೆಯ ಕುರುಗೋಡು ಶ್ರೀ ದೊಡ್ಡಬಸವೇಶ್ವರ ಸ್ವಾಮಿ ಕ್ಷೇತ್ರವು ಹಿಂದೆ ಕಿರುಗೋಡು ಎಂಬ ಹೆಸರಿನಿಂದ ನಾಮಕರಣವಾಗಿದ್ದು ಆನಂತರ ಈ ಕ್ಷೇತ್ರವು ಅಭಿವೃದ್ದಿಗೊಂಡ ನಂತರ ಕುರುಗೋಡು ಎಂದು ನಾಮಕರಣವಾಗಿರುತ್ತದೆ. ಕುರುಗೋಡು ಎಂದು ನಾಮಕರಣವಾಗಲು ಶ್ರೀ ದೊಡ್ಡಬಸವೇಶ್ವರ (ಬಸವಣ್ಣ, ಗೂಳಿ) ಸ್ವಾಮಿಯ ವಿಗ್ರಹದ ಕೋಡು (ಕೊಂಬು) ಕಿರಿದಾಗಿದ್ದು ಕೋಡನ್ನು ಅನುಸರಿಸಿ ಕುರುಗೋಡು ಎಂದು ನಾಮಕರಣ ಆಗಿದೆ. ಇದು 810 ವರ್ಷಗಳಷ್ಟು ಪುರಾತನವಾದ ದೇವಸ್ಥಾನ ಇದು ಅತ್ಯಂತ ಶಿಲಾಮಯವಾದ ದೇವಾಲಯವಾಗಿರುತ್ತದೆ. ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವರ ಮೂರ್ತಿಯು ದೊಡ್ಡ ಗಾತ್ರದಲ್ಲಿರುತ್ತದೆ, ಈ ಮೂರ್ತಿಯು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಅಭಿಮುಖವಾಗಿದ್ದು ಎದುರು ಬಸವಣ್ಣ ಎಂದು ಪ್ರಚಲಿತವಾಗಿದೆ. ಈ ದೇವಾಲಯವನ್ನು ಸಂಗಮ ವಂಶಸ್ಥರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರುತ್ತದೆ ನಂತರ ವಿಜಯನಗರ ಕಾಲದಲ್ಲಿ ಅಭಿವೃದ್ದಿ ಹೊಂದಿರುತ್ತದೆ. ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ...