ಋಷ್ಯಶೃಂಗರ ತಂದೆ ವಿಭಾಂಡಕರು: ಕಶ್ಯಪ ಬ್ರಹ್ಮ್ಮನ ಸುಕುಮಾರ ವಿಭಾಂಡಕರು ತಂದೆಯ ಸಲಹೆಯಂತೆ ಪರಮೇಶ್ವರನ ವರದಾನಕ್ಕಾಗಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡುತ್ತಾರೆ. ವಿಭಾಂಡಕರ ಗನಘೋರ ತಪಸ್ಸಿನ ಪರಿಣಾಮವಾಗಿ ಅವರ ಶಿರಸ್ಸಿನಿಂದ ಭುಗಿಲೆದ್ದ ತಪೋಜ್ವಾಲೆಯು ಕಾಡ್ಗಿಚ್ಚಿನಂತೆ ಇಡೀ ಪ್ರಪಂಚವನ್ನೇ ವ್ಯಾಪಿಸುತ್ತದೆ. ಈ ಜ್ವಾಲೆಯನ್ನು ನಿಯಂತ್ರಿಸಲು ದೇವತೆಗಳು ವಿಭಾಂಡಕರ ತಪೋಭಂಗ ಮಾಡಲು ಉಪಾಯದ ಹಿನ್ನೆಲೆಯಲ್ಲಿ ಅಪ್ಸರೆಯರನ್ನು ಭೂಲೋಕಕ್ಕೆ ಕಳಿಸಿ ಕೊಡುತ್ತಾರೆ. ಋಷ್ಯಶೃಂಗರ ಜನನ: ವಿಭಾಂಡಕರು ತಪಸ್ಸಾನ್ನಾಚರಿಸುವ ಪರ್ವತವನ್ನೇರಲು ಸಾಧ್ಯವಾಗದ ಕಾರಣದಿಂದ ಅಪ್ಸರೆಯರು ತುಂಗಾ ನದಿಯ ತಟದಲ್ಲಿ ಅಲೆಯುತ್ತಿರುತ್ತಾರೆ. ಹೀಗಿರುವಲ್ಲಿ ಒಂದು ದಿನ ವಿಭಾಂಡಕರು ತುಂಗಾ ನದಿಗೆ ಸ್ನಾನಕ್ಕೆ ಬಂದಾಗ ಅಪ್ಸರೆಯರು ಜಲಕ್ರೀಡೆ ಆಡುವ ನೆಪದಲ್ಲಿ ಮಹರ್ಷಿಗಳ ಚಿತ್ತಚಾಂಚಲ್ಯಗೊಳಿಸುವ ಪ್ರಯತ್ನ ಮಾಡುತ್ತಾರೆ. ದೈವನಿಯಮವೋ ಏನೋ ವಿಭಾಂಡಕರು ಕ್ಷಣಕಾಲ ವಿಚಲಿತರಾಗುತ್ತಾರೆ. ಆಕ್ಷಣಿಕ ಚಂಚಲತೆಯ ಪರಿಣಾಮವಾಗಿ ತಪಸ್ವಿಗಳ ಸ್ಖಲನಗೊಂಡ ರೇತಸ್ಸು...