ಬೆಂಗಳೂರು ಪೂರ್ವ ತಾಲ್ಲೂಕು, ದೊಡ್ಡಬಾಣಸವಾಡಿ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ಮಹಾನಗರದ ದಂಡಿನ ಭಾಗದಿಂದ ಐದು ಮೈಲಿನ ಅಂತರದಲ್ಲಿದೆ. ಇದೊಂದು ಪುರಾತನ ದೇವಾಲಯವೆನಿಸಿದೆ. 1962 ರಲ್ಲಿ ದೇವಾಲಯದ ವಿಮಾನ ಗೋಪುರ, ಗರ್ಭಗೃಹ ಹಾಗೂ ಮುಖ ಮಂಟಪಗಳ ಜೀರ್ಣೋದ್ಧಾರ ಕಾರ್ಯವನ್ನು ಮಾಡಲಾಗಿದೆ. ಸದರಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಶ್ರೀಯುತ ಮಣಿ ಅಯ್ಯರ್ ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿದ್ದು, ಇವರು ಹಾಗೂ ಗ್ರಾಮಸ್ಥರು ಮತ್ತು ಅರ್ಚಕರು ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುತ್ತಾರೆಂದು ಹಿರಿಯ ಅರ್ಚಕರು ಹಾಗೂ ಹಿರಿಯ ಗ್ರಾಮಸ್ಥರಿಂದ ಮಾಹಿತಿ ದೊರಕಿರುತ್ತದೆ. ಮೂಲ ವಿಗ್ರಹವು ವೀರಾಂಜನೇಯ ಭಂಗಿಯಲ್ಲಿದೆ. ಸ್ವಾಮಿಯು ಪೂರ್ವಾಭಿಮುಖವಾಗಿ ನಿಂತಿದ್ದಾರೆ. ವಿಗ್ರಹವು ಸಾಲಿಗ್ರಾಮ ಶಿಲೆಯಿಂದ ಕೂಡಿದ್ದು, ಶಿಲೆಯಲ್ಲಿ ಶಂಖ, ಚಕ್ರ, ಸೂರ್ಯಚಂದ್ರ, ಕಮಲ, ಕೈಯಲ್ಲಿ ಮಾವಿನ ಹಣ್ಣು ಹೊಂದಿದ್ದು, ಇದು ಏಕಶಿಲೆಯಾಗಿರುತ್ತದೆ. ಸ್ವಾಮಿಗೆ ವಿಶೇಷ ವಡೆಹಾರ...