ಬೆಂಗಳೂರಿನ ಶ್ರೀ ರಾಮಪುರ ಬಡಾವಣಿಗಳಿಗೆ ಸೇರಿದ ಒಕಳಿಪುರ ಕೆರೆಯ ದಂಡೆಯ ಮೇಲೆ ಈ ದೇವಾಲಯವು ಶ್ರೀ ರಾಮ ಲಿಂಗೇಶ್ವರಸ್ವಾಮಿ ಯೆಂಬ ಹೆಸರಿನಿಂದ ವೈದಿಕ ಸಂಪ್ರದಾಯದಲ್ಲಿ ಶಿವಪಂಚಾಯತನ ಪೂರ್ವಕವಾಗಿ ನಿರ್ಮಾಣಗೊಂಡು ಅಸಂಖ್ಯಾತ ಭಕ್ತಾಧಿಗಳ ಆರಾಧನಾ ಕೇಂದ್ರವಾಗಿತ್ತು. ಪ್ರಕೃತಿ ದಾಳಿಗೆ, ಜನರ ನಿರ್ಲಕ್ಷಕ್ಕೆ ಸಿಲುಕಿ ಈ ದೇವಾಲಯವು ಶಿಥಿಲಗೊಂಡು ಜೀರ್ಣಾವಸ್ಥೆಯಲ್ಲಿದ್ದು, ಪೂಜಾದಿಗಳು ನಿಲ್ಲುವ ಸಂದರ್ಭ ಇದ್ದಾಗ ಅಂದಿನ ದಿವಾನರಾಗಿದ್ದ ಶ್ರೀಮಿರ್ಜಾ ಇಸ್ಮಾಯಿಲ್, ಶ್ರೀ ಆಲೂರು ವೆಂಕಟರಾಯರು, ಶ್ರೀ ಕರ್ಪೂರದ ಶ್ರೀನಿವಾಸರಾಯರು, ಶ್ರೀ ಕೆ.ಎನ್. ಗರುಡಾಚಾರ್ಯರು ಮೊದಲಾದ ಗಣ್ಯರು ಪುರಾತನವಾದ ಸಂಸ್ಕೃತಿಯ ಪ್ರತೀಕವಾದ ದೇವಾಲಯವನ್ನು ಸಂರಕ್ಷಿಸಬೇಕೆಂದು ಕಾರ್ಯೋನ್ಮುಖರಾದಾಗ ಸರ್.ಎಂ.ವಿಶ್ವೇಶ್ವರಯ್ಯನವರ ಸೋದರ ಮಾವನವರಾದ ಶ್ರೀ ರಾಮರಾಯರು ತಮಗೆ ಸೇರಿದ ವಿಶಾಲ ನಿವೇಶನವನ್ನು ದೇವಾಲಯಕ್ಕೆ ನೀಡಲು ಮುಂದಾದರು. ಈ ಎಲ್ಲರ ಪರಿಶ್ರಮದಿಂದಾಗಿ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯವು ಅಂದಿನ ಮೈಸೂರಿನ ಅರಸರ...