ಶ್ರೀ ಚಾಮುಂಡೇಶ್ವರಿ ದೇವಾಲಯ, ಚಾಮುಂಡಿಬೆಟ್ಟ, ಮೈಸೂರು - 570010, ಮೈಸೂರು .
Sri Chamundeshwari Temple, Chamundi Hill, Mysore - 570010, Mysuru District [TM000058]
×
Temple History
ಸ್ಥಳ ಪುರಾಣ
ಕರ್ಣಾಟಕ ಆಗುವ ಮೊದಲು ಮೈಸೂರು ರಾಜ್ಯವಾಗಿತ್ತು. ಯದುಕುಲ ವಂಶಸ್ಥರ ಒಡೆಯರ ರಾಜಧಾನಿಯಾಗಿದ್ದ ಮೈಸೂರು ನಗರವನ್ನು ಮಹಿಶೂರಪುರ ಎಂದು ಕರೆಯಲಾಗುತ್ತಿತ್ತು. ಈಗಿನ ಮೈಸೂರು ಪಟ್ಟಣವು ವೈಭವೋಪೇತವಾದ ಸುಂದರ ನಗರ, ಈ ಮೈಸೂರು ನಗರದಿಂದ ದಕ್ಷಿಣ ತಮಿಳುನಾಡಿಗೆ ಹೋಗುವ ಮೈಸೂರು ನಂಜನಗೂಡು , ಉದಕಮಂಡಲದ ಹೆದ್ದಾರಿಯ , ಎಡಭಾಗದಲ್ಲಿ ಮೈಸೂರು ನಗರವನ್ನು ಅಳೆಯುವ ಅಳತೆಯ ಕೋಲಿನೋಪಾದಿಯಲ್ಲಿ ನಿಂತಿರುವ ಮಹಾಬಲಾದ್ರಿ ಎಂಬ ಚಾಮುಂಡಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ ಸುಮಾರು 3489 ಅಡಿಗಳ ಎತ್ತರದಲ್ಲಿ ಕಂಗೊಳಿಸುತ್ತಾ ಮೈಸೂರು ನಗರಕ್ಕೆ ಶಿರಪ್ರಾಯವಾಗಿರುತ್ತೆ . ಈ ಬೆಟ್ಟದ ಪ್ರಕೃತಿ ಸ್ವಭಾವವು , ಇದರ ಸೊಬಗು, ವರ್ಣನಾತೀತವಾದುದು. ಈ ಚಾಮುಂಡಿ ಬೆಟ್ಟದ ತುದಿಯಲ್ಲಿ ಜಗನ್ಮಾತೆಯಾದ ಮಹಿಷಾಸುರ ಮರ್ದಿನಿ ಶ್ರೀ ಚಾಮುಂಡೇಶ್ವರಿ ದೇವಿಯು ಭಕ್ತಾಭೀಷ್ಟ ಪ್ರದಳಾಗಿ ಶೋಭಿಸುತ್ತಿರುವಳು ಜಗತಜ್ಜನನಿಯಾದ ಶ್ರೀ ವೈಷ್ಣವೀ ದೇವಿಯು ಶ್ರೀ...ಕರ್ಣಾಟಕ ಆಗುವ ಮೊದಲು ಮೈಸೂರು ರಾಜ್ಯವಾಗಿತ್ತು. ಯದುಕುಲ ವಂಶಸ್ಥರ ಒಡೆಯರ ರಾಜಧಾನಿಯಾಗಿದ್ದ ಮೈಸೂರು ನಗರವನ್ನು ಮಹಿಶೂರಪುರ ಎಂದು ಕರೆಯಲಾಗುತ್ತಿತ್ತು. ಈಗಿನ ಮೈಸೂರು ಪಟ್ಟಣವು ವೈಭವೋಪೇತವಾದ ಸುಂದರ ನಗರ, ಈ ಮೈಸೂರು ನಗರದಿಂದ ದಕ್ಷಿಣ ತಮಿಳುನಾಡಿಗೆ ಹೋಗುವ ಮೈಸೂರು ನಂಜನಗೂಡು , ಉದಕಮಂಡಲದ ಹೆದ್ದಾರಿಯ , ಎಡಭಾಗದಲ್ಲಿ ಮೈಸೂರು ನಗರವನ್ನು ಅಳೆಯುವ ಅಳತೆಯ ಕೋಲಿನೋಪಾದಿಯಲ್ಲಿ ನಿಂತಿರುವ ಮಹಾಬಲಾದ್ರಿ ಎಂಬ ಚಾಮುಂಡಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ ಸುಮಾರು 3489 ಅಡಿಗಳ ಎತ್ತರದಲ್ಲಿ ಕಂಗೊಳಿಸುತ್ತಾ ಮೈಸೂರು ನಗರಕ್ಕೆ ಶಿರಪ್ರಾಯವಾಗಿರುತ್ತೆ . ಈ ಬೆಟ್ಟದ ಪ್ರಕೃತಿ ಸ್ವಭಾವವು , ಇದರ ಸೊಬಗು, ವರ್ಣನಾತೀತವಾದುದು. ಈ ಚಾಮುಂಡಿ ಬೆಟ್ಟದ ತುದಿಯಲ್ಲಿ ಜಗನ್ಮಾತೆಯಾದ ಮಹಿಷಾಸುರ ಮರ್ದಿನಿ ಶ್ರೀ ಚಾಮುಂಡೇಶ್ವರಿ ದೇವಿಯು ಭಕ್ತಾಭೀಷ್ಟ ಪ್ರದಳಾಗಿ ಶೋಭಿಸುತ್ತಿರುವಳು ಜಗತಜ್ಜನನಿಯಾದ ಶ್ರೀ ವೈಷ್ಣವೀ ದೇವಿಯು ಶ್ರೀ ಚಾಮುಂಡೇಶ್ವರಿ ಎಂಬುದಾಗಿ ಪ್ರಖ್ಯಾತಳಾಗಿ ಈ ಪರ್ವತಾಗ್ರದಲ್ಲಿ ನೆಲೆಗೊಂಡು ಸಕಲ ಜೀವರಾಶಿಗಳನ್ನು ಅನುಗ್ರಹಿಸುತ್ತಿರುವ ಈ ದೇವಿಯನ್ನು ಸಂದರ್ಶಿಸಲು 1000 ಮೆಟ್ಟಿಲುಗಳನ್ನು ಹತ್ತಿ ಬರುವವರು ವಾಹನಗಳಲ್ಲಿ ಬಂದು ಸೇರುವವರು ಸಹ ದೇವಿಯ ಆಲಯವನ್ನು ಪ್ರವೇಶಿಸುತ್ತಿದ್ದಂತೆಯೇ ನಾಸ್ತಿಕರೂ ಸಹ ಅಸ್ತಿಕರಾಗಿ ಪರವಶರಾಗುತ್ತಾರೆ. ಅಲ್ಲದೇ ತಾವು ಪ್ರತ್ಯೇಕವಾದ ಲೋಕದಲ್ಲಿ ಇದ್ದೇವೆಯೋ ಎಂಬ ಅನುಭವವನ್ನು ಹೊಂದುವಂಥವರಾಗುತ್ತಾರೆ. ಮಾನಸಿಕವಾದ ಅಶಾಂತಿಗಳೆಲ್ಲವೂ ದೂರವಾಗಿ ಪ್ರಶಾಂತವಾದ ಮನಸ್ಸನ್ನು ಹೊಂದಲು ಈ ದೇವಿಯ ಸನ್ನಿಧಿಯಲ್ಲಿ ದರ್ಶನ ಮಾಡುವುದೇ ಉತ್ತಮವಾದದ್ದು. ಈ ಬೆಟ್ಟದ ನೈಸರ್ಗಿಕ ಸೊಬಗು ಪ್ರೇಕ್ಷಕರ ಕಣ್ಣು ಮತ್ತು ಮನಸ್ಸುಗಳಿಗೆ ಆನಂದವನ್ನುಂಟು ಮಾಡುವಂತಹದ್ದು, ಈ ರೀತಿಯ ಉತ್ಕೃಷ್ಟವಾದ ವಾತಾವರಣ ಇರುವುದರಿಂದಲೇ ಒಂದಾನೊಂದು ಕಾಲದಲ್ಲಿ ಮಾರ್ಕಂಡೇಯ ಮೊದಲಾದ ಮಹರ್ಷಿಗಳು, ದೇವತೆಗಳು , ಇಲ್ಲಿ ತಪಸ್ಸು ಮಾಡಿ ಫಲಪ್ರಾಪ್ತರಾದರೆಂದು ಪುರಾಣ ಇತಿಹಾಸಗಳು ಸಾರುತ್ತಿವೆ.
ಶ್ರೀ ಚಾಮುಂಡೇಶ್ವರಿ ದೇವಾಲಯವು 16 ನೇ ಶತಮಾನಕ್ಕೂ ಹಿಂದಿನ ಪುರಾತನ ದೇವಾಲಯವಾಗಿರುತ್ತದೆ. ಈ ದೇವಾಲಯವು ಪ್ರಸ್ತುತ 500 ವರ್ಷಗಳಿಗಿಂತಲೂ ಅಧಿಕ ಇತಿಹಾಸವನ್ನು ಹೊಂದಿರುತ್ತದೆ. ಮೈಸೂರು ರಾಜ ವಂಶಸ್ಥರು ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ನಿರ್ಮಿಸಿರುತ್ತಾರೆ.
ಶ್ರೀ ಚಾಮುಂಡೇಶ್ವರೀ ಅಮ್ಮನವರ ದರ್ಶನಕ್ಕೆ ನವರಂಗದಿಂದ ಒಳಗೆ ಪ್ರವೇಶಿಸಿದರೆ ದೇವಿಯ ಬಲ ಭಾಗದಲ್ಲಿ ಮುದ್ದಾದ ಗಣಪತಿ ವಿಗ್ರಹವೂ ಎಡಭಾಗದಲ್ಲಿ ಭೈರವ ದೇವರ ವಿಗ್ರಹಗಳು ಕಂಗೊಳಿಸುತ್ತವೆ . ಈ ಭೈರವ ದೇವರ ಎಡಭಾಗದಲ್ಲಿ ವಿಜೃಂಭಣೆಯಿಂದ ಹೊಳೆಯುವ ಪಂಚಲೋಹದ ಉತ್ಸವ ಮೂರ್ತಿಯ ವಿಗ್ರಹವಂತೂ ಅತೀ ಸುಂದರವಾಗಿ ಪ್ರಕಾಶಿಸುತ್ತಾ ದಕ್ಷಿಣಾಭಿಮುಖವಾಗಿ ಕಂಗೊಳಿಸುತ್ತದೆ. ಈ ಉತ್ಸವ ಮೂರ್ತಿಗೆ ಅಭಿಮುಖವಾಗಿ ಅಂದರೆ ಗಣಪತಿಯ ಬಲಭಾಗದಲ್ಲಿ ಉತ್ತರಾಭಿಮುಖವಾಗಿ ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ ಶಿಲಾ ಪ್ರತಿಮೆ ಮತ್ತು ರಾಣಿ ವಿಲಾಸದ ಪಟ್ಟಮಹಿಷಿಯ ಶಿಲಾ ಪ್ರತಿಮೆಗಳು ಭಕ್ತಿಭಾವಗಳಿಂದ ಕೂಡಿ ನಿಂತಿರುವ ವಿಗ್ರಹಗಳು ಕಂಗೊಳಿಸುತ್ತದೆ . ಗರ್ಭಗುಡಿಯಲ್ಲಿ ಮಹಿಷ ಮರ್ದಿನಿಯಾದ ಶ್ರೀಚಾಮುಂಡೇಶ್ವರಿಯು ಅಷ್ಟ ಭುಜಗಳಿಂದ ಕೂಡಿದವಳಾಗಿ ಆಸೀನಳಾಗಿ ವಿರಾಜಮಾನಳಾಗಿದ್ದಾಳೆ, ಈ ಶಿಲಾಮೂರ್ತಿಯನ್ನು ಮಾರ್ಕಂಡೇಯ ಋಷಿಗಳು ಸ್ಥಾಪಿಸಿದರೆಂದು ತಿಳಿಯಬರುತ್ತದೆ. ಈ ವಿಗ್ರಹವು ಬಹುಪುರಾತನವಾದದ್ದು, ಈ ದೇವಿಯ ದರ್ಶನಕ್ಕಾಗಿ ಬಹುದೂರದಿಂದ, ದೇಶವಿದೇಶಗಳಿಂದ ಭಕ್ತಾಧಿಗಳು ಬಂದು ತಮ್ಮ ಹರಕೆಗಳನ್ನು ಸಲ್ಲಿಸಿ ಇಷ್ಟಾರ್ಥಗಳನ್ನು ಹೊಂದುತ್ತಿರುತ್ತಾರೆ. ಈ ದೇವಿಯು ಹರಕೆದೇವತೆಯಾಗಿ ಆಗಮೋಕ್ತ ಪೂಜಾದಿ ಉತ್ಸವಗಳನ್ನು ಕೈಗೊಳ್ಳುತ್ತಾ ಪರ್ವತಾಗ್ರದಲ್ಲಿ ಕುಳಿತು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಸರ್ವರನ್ನು ರಕ್ಷಿಸುತ್ತಿರುತ್ತಾಳೆ . ಈ ದೇವಿಗೆ ಭಕ್ತಾಧಿಗಳು ಅಭಿಷೇಕ (ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ), ಕುಂಕುರ್ಮಾಚನೆ , ತ್ರಿಶತಿ , ಸಹಸ್ರನಾಮ , ಉತ್ಸವ (ಸಿಂಹವಾಹನೋತ್ಸವ, ಬೆಳ್ಳಿ ರಥೋತ್ಸವ,) ಸೀರೆ ಧರಿಸುವುದು, ಚಂಡಿಕಾ ಹೋಮ, ವಾಹನ ಪೂಜೆ ಮೊದಲಾದುವುಗಳನ್ನು ಮಾಡಿಸುತ್ತಾ ತಮ್ಮ ತಮ್ಮ ಕಷ್ಟಕಾರ್ಪಣ್ಯಗಳನ್ನು ದೇವಿಗೆ ಒಪ್ಪಿಸುತ್ತಾ ಅವಳ ಅನುಗ್ರಹ ಪಡೆಯಲು ಪ್ರಾರ್ಥನೆ ಮಾಡುತ್ತಾ ದರ್ಶನಮಾಡಿ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಿರುತ್ತಾರೆ. ಆಷಾಢ ಮಾಸದ ಶುಕ್ರವಾರಗಳು, ಚಾಮುಂಡೇಶ್ವರಿಯ ವರ್ಧಂತಿ, ಹಾಗೂ ನವರಾತ್ರಿಗಳಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷಾಂತರ ಭಕ್ತಾಧಿಗಳು ಭೇಟಿ ನೀಡಿ ವಿಶೇಷ ಫಲ ಸಿಗುವುದಾಗಿ ದರ್ಶನವನ್ನು ಪಡೆಯುತ್ತಾರೆ. ದೇವಾಲಯದ ಮಹಾದ್ವಾರದ ಗೋಪುರವು ಏಳು ಅಂತಸ್ತುಗಳಿಂದ ಕೂಡಿದ್ದು ಏಳು ಚಿನ್ನದ ಕಲಶಗಳಿಂದ ಕೂಡಿರುತ್ತದೆ. ಮಹಾದ್ವಾರದ ಕೆಳಭಾಗದಲ್ಲಿ ಇಂದ್ರಾದಿ ಅಷ್ಟದಿಕ್ಪಾಲಕರ ವಿಗ್ರಹಗಳು ಇರುತ್ತವೆ .
ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೃಷ್ಟಿದಾರ, ತೀರ್ಥ ಕಾಯಿ, ಯಂತ್ರ ತಾಯಿತಾ, ಮುಂತಾದ ಯಾವುದೇ ಪ್ರಸಿದ್ದಿ ಮತ್ತು ಪರಿಹಾರ ಪೂಜೆಗಳು ಇರುವುದಿಲ್ಲ. ಆದರೆ ಭಕ್ತಾಧಿಗಳು ತರುವಂತಹ ದಾರಗಳನ್ನು ಹಾಗೂ ತೀರ್ಥಕಾಯಿಗಳನ್ನು ಅರ್ಚಕರುಗಳು ಪೂಜೆ ಮಾಡಿ ಆರ್ಶೀವದಿಸಿ ನೀಡುತ್ತಾರೆ ಹಾಗೂ ಯಂತ್ರ ತಾಯಿತಗಳನ್ನು ಭಕ್ತಾಧಿಗಳ ಆಪೇಕ್ಷೆಯಂತೆ ಪ್ರಧಾನ ಅರ್ಚಕರುಗಳು ತಯಾರಿಸಿ ನೀಡುತ್ತಾರೆ ಇದು ಈ ದೇವಾಲಯದ ವಿಶೇಷವಾಗಿರುತ್ತದೆ.
Temple Opening & Closing Timings
07:30 AM IST - 06:00 PM IST
07:30 PM IST - 09:00 PM IST
02:00 PM IST - 03:30 PM IST
06:00 PM IST - 07:30 PM IST
30ರೂಗಳ ದರ್ಶನ ಗೇಟ್-2
100 ರೂಗಳ ದರ್ಶನ ಗೇಟ್-1
ಧರ್ಮ/ಉಚಿತ ದರ್ಶನ - ಗೇಟ್-3