ಕರ್ಣಾಟಕ ಆಗುವ ಮೊದಲು ಮೈಸೂರು ರಾಜ್ಯವಾಗಿತ್ತು. ಯದುಕುಲ ವಂಶಸ್ಥರ ಒಡೆಯರ ರಾಜಧಾನಿಯಾಗಿದ್ದ ಮೈಸೂರು ನಗರವನ್ನು ಮಹಿಶೂರಪುರ ಎಂದು ಕರೆಯಲಾಗುತ್ತಿತ್ತು. ಈಗಿನ ಮೈಸೂರು ಪಟ್ಟಣವು ವೈಭವೋಪೇತವಾದ ಸುಂದರ ನಗರ, ಈ ಮೈಸೂರು ನಗರದಿಂದ ದಕ್ಷಿಣ ತಮಿಳುನಾಡಿಗೆ ಹೋಗುವ ಮೈಸೂರು ನಂಜನಗೂಡು , ಉದಕಮಂಡಲದ ಹೆದ್ದಾರಿಯ , ಎಡಭಾಗದಲ್ಲಿ ಮೈಸೂರು ನಗರವನ್ನು ಅಳೆಯುವ ಅಳತೆಯ ಕೋಲಿನೋಪಾದಿಯಲ್ಲಿ ನಿಂತಿರುವ ಮಹಾಬಲಾದ್ರಿ ಎಂಬ ಚಾಮುಂಡಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ ಸುಮಾರು 3489 ಅಡಿಗಳ ಎತ್ತರದಲ್ಲಿ ಕಂಗೊಳಿಸುತ್ತಾ ಮೈಸೂರು ನಗರಕ್ಕೆ ಶಿರಪ್ರಾಯವಾಗಿರುತ್ತೆ . ಈ ಬೆಟ್ಟದ ಪ್ರಕೃತಿ ಸ್ವಭಾವವು...