


ಇತಿಹಾಸ

ಶ್ರೀ ಹುಲಿಗೆಮ್ಮ ದೇವಿಯವರ ಈ ದೇವಸ್ಥಾನವು ಶಕ್ತಿಯ ಪೀಠವಾಗಿದ್ದು, ಸುಮಾರು ಎಂಟು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಗ್ರಾಮದವರಾದ ಶ್ರೀ ನಾಗಜೋಗಿ ಮತ್ತು ಶ್ರೀ ಬಸವಜೋಗಿ ಇವರು ಇಲ್ಲಿಯ ಶಿವಾಲಯದ ಅರ್ಚಕರಾದ ಶ್ರೀ ಸೋಮನಾಥಭಟ್ಟರ ಶಿಷ್ಯರಾಗಿದ್ದು, ಶ್ರೀ ದೇವಿಯ ಭಾಗವತದ ಮಹಿಮೆಯನ್ನು ಈರ್ವರಿಗೂ ಉಪದೇಶಿಸುತ್ತಿದ್ದರು. ಜೋಗಿಯರೀರ್ವರು ಪ್ರತಿ ಹುಣ್ಣಿಮೆಯಂದು ಸವದತ್ತಿಯ ಶ್ರೀ ಎಲ್ಲಮ್ಮನ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದರು. ಮಳೆಗಾಲದ ಪೂರ್ಣಿಮೆಯ ಒಂದು ದಿನ ಶ್ರೀ...ಶ್ರೀ ಹುಲಿಗೆಮ್ಮ ದೇವಿಯವರ ಈ ದೇವಸ್ಥಾನವು ಶಕ್ತಿಯ ಪೀಠವಾಗಿದ್ದು, ಸುಮಾರು ಎಂಟು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಗ್ರಾಮದವರಾದ ಶ್ರೀ ನಾಗಜೋಗಿ ಮತ್ತು ಶ್ರೀ ಬಸವಜೋಗಿ ಇವರು ಇಲ್ಲಿಯ ಶಿವಾಲಯದ ಅರ್ಚಕರಾದ ಶ್ರೀ ಸೋಮನಾಥಭಟ್ಟರ ಶಿಷ್ಯರಾಗಿದ್ದು, ಶ್ರೀ ದೇವಿಯ ಭಾಗವತದ ಮಹಿಮೆಯನ್ನು ಈರ್ವರಿಗೂ ಉಪದೇಶಿಸುತ್ತಿದ್ದರು. ಜೋಗಿಯರೀರ್ವರು ಪ್ರತಿ ಹುಣ್ಣಿಮೆಯಂದು ಸವದತ್ತಿಯ ಶ್ರೀ ಎಲ್ಲಮ್ಮನ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದರು. ಮಳೆಗಾಲದ ಪೂರ್ಣಿಮೆಯ ಒಂದು ದಿನ ಶ್ರೀ ದೇವಿ ಎಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದಾಗ ಮಳೆಯಿಂದ ಪ್ರಯಾಣಕ್ಕೆ ಅಡಚಣೆಯಾಗಿ ತೊಂದರೆಗೊಳಗಾದರು. ಶ್ರೀ ದೇವಿ ಎಲ್ಲಮ್ಮನ ಸ್ಮರಣೆ ಮಾಡುತ್ತ ಇಡೀ ರಾತ್ರಿ ಮಳೆಯಲ್ಲಿ ಕಳೆಯುವಂತಾಯಿತು. ಉಷ:ಕಾಲದ ಸಮಯದಲ್ಲಿ ಶ್ರೀ ದೇವಿ ಎಲ್ಲಮ್ಮನೇ ಸ್ವಪ್ನದಲ್ಲಿ ಬಂದು “ಇನ್ನು ಮುಂದೆ ನೀವು ಕಷ್ಟಪಟ್ಟು ಇಲ್ಲಿಯವರೆಗೆ ಬರಬೇಕಾಗಿಲ್ಲ-ನಿಮ್ಮೂರಿನ ಶಿವದೇವಾಲಯದ ಪಶ್ಚಿಮದಲ್ಲಿ ನನ್ನ ಸಾನಿಧ್ಯವಿದೆ” ಎಂದು ಉಪದೇಶ ಮಾಡಿದಂತಾಯಿತು. ಜೋಗಿಯರೀರ್ವರು ಶ್ರೀ ಸೋಮನಾಥಭಟ್ಟರೊಡಗೂಡಿ ಶ್ರೀ ಸೋಮೇಶ್ವರ ದೇವಾಲಯದ ಪಶ್ಚಿಮದಲ್ಲಿ ಶೋಧಿಸಿದಾಗ ಸಾಲಿಗ್ರಾಮ ಮತ್ತು ಶ್ರೀಚಕ್ರ ದೊರೆತವು. ಅದೇ ಸ್ಥಾನದಲ್ಲಿ ಶ್ರೀ ದೇವಿಯವರ ಪ್ರತಿಷ್ಠಾಪನೆಯಾಯಿತು. ಈ ರೀತಿಯಲ್ಲಿ ಪ್ರತಿಷ್ಠಾಪನೆಗೊಂಡ ಸ್ಥಳವೇ ಈಗಿನ ಶ್ರೀ ಹುಲಿಗೆಮ್ಮ ದೇವಿಯ ಗರ್ಭಗುಡಿಯು. ಹೀಗೆ ಸವದತ್ತಿಯಲ್ಲಿ ಶ್ರೀ ದೇವಿಯು ಎಲ್ಲಮ್ಮ ಎನಿಸಿದರೆ, ಹುಲಿಗಿಯಲ್ಲಿ ಈ ಆದಿಶಕ್ತಿ ದೇವಿಯು ಶ್ರೀ ಹುಲಿಗೆಮ್ಮಎಂದು ಹೆಸರುವಾಸಿಯಾಗಿದ್ದಾಳೆ.
ಸ್ಥಳ ಪುರಾಣ

ಶ್ರೀ ಹುಲಿಗೆಮ್ಮ ದೇವಿಯವರ ಈ ದೇವಸ್ಥಾನವು ಶಕ್ತಿಯ ಪೀಠವಾಗಿದ್ದು, ಸುಮಾರು ಎಂಟು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಗ್ರಾಮದವರಾದ ಶ್ರೀ ನಾಗಜೋಗಿ ಮತ್ತು ಶ್ರೀ ಬಸವಜೋಗಿ ಇವರು ಇಲ್ಲಿಯ ಶಿವಾಲಯದ ಅರ್ಚಕರಾದ ಶ್ರೀ ಸೋಮನಾಥ ಭಟ್ಟರ ಶಿಷ್ಯರಾಗಿದ್ದು, ಶ್ರೀ ದೇವಿಯ ಭಾಗವತದ ಮಹಿಮೆಯನ್ನು ಈರ್ವರಿಗೂ ಉಪದೇಶಿಸುತ್ತಿದ್ದರು. ಜೋಗಿಯರೀರ್ವರು ಪ್ರತಿ ಹುಣ್ಣಿಮೆಯಂದು ಸವದತ್ತಿಯ ಶ್ರೀ ಯಲ್ಲಮ್ಮ ದೇವಿಯ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದರು. ಮಳೆಗಾಲದ ಪೂರ್ಣಿಮೆಯಂದು ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದಾಗ ಮಳೆಯಿಂದ ಪ್ರಯಾಣಕ್ಕೆ ಅಡಚಣೆಯಾಗಿ ತೊಂದರೆಗೊಳಗಾದರು. ಶ್ರೀ ದೇವಿ ಎಲ್ಲಮ್ಮನ ಸ್ಮರಣೆ ಮಾಡುತ್ತ ಇಡೀ ರಾತ್ರಿ ಮಳೆಯಲ್ಲಿ ಕಳೆಯುವಂತಾಯಿತು. ಉಷಾಃಕಾಲದ ಸಮಯದಲ್ಲಿ ಶ್ರೀ ದೇವಿ ಎಲ್ಲಮ್ಮ ದೇವಿಯು ಸ್ವಪ್ನದಲ್ಲಿ ಬಂದು :ಇನ್ನು ಮುಂದೆ ನೀವು ಕಷ್ಟಪಟ್ಟು ಇಲ್ಲಿಯವರೆಗೆ ಬರಬೇಕಾಗಿಲ್ಲ. ನಿಮ್ಮೂರಿನ...ಶ್ರೀ ಹುಲಿಗೆಮ್ಮ ದೇವಿಯವರ ಈ ದೇವಸ್ಥಾನವು ಶಕ್ತಿಯ ಪೀಠವಾಗಿದ್ದು, ಸುಮಾರು ಎಂಟು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಗ್ರಾಮದವರಾದ ಶ್ರೀ ನಾಗಜೋಗಿ ಮತ್ತು ಶ್ರೀ ಬಸವಜೋಗಿ ಇವರು ಇಲ್ಲಿಯ ಶಿವಾಲಯದ ಅರ್ಚಕರಾದ ಶ್ರೀ ಸೋಮನಾಥ ಭಟ್ಟರ ಶಿಷ್ಯರಾಗಿದ್ದು, ಶ್ರೀ ದೇವಿಯ ಭಾಗವತದ ಮಹಿಮೆಯನ್ನು ಈರ್ವರಿಗೂ ಉಪದೇಶಿಸುತ್ತಿದ್ದರು. ಜೋಗಿಯರೀರ್ವರು ಪ್ರತಿ ಹುಣ್ಣಿಮೆಯಂದು ಸವದತ್ತಿಯ ಶ್ರೀ ಯಲ್ಲಮ್ಮ ದೇವಿಯ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದರು. ಮಳೆಗಾಲದ ಪೂರ್ಣಿಮೆಯಂದು ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದಾಗ ಮಳೆಯಿಂದ ಪ್ರಯಾಣಕ್ಕೆ ಅಡಚಣೆಯಾಗಿ ತೊಂದರೆಗೊಳಗಾದರು. ಶ್ರೀ ದೇವಿ ಎಲ್ಲಮ್ಮನ ಸ್ಮರಣೆ ಮಾಡುತ್ತ ಇಡೀ ರಾತ್ರಿ ಮಳೆಯಲ್ಲಿ ಕಳೆಯುವಂತಾಯಿತು. ಉಷಾಃಕಾಲದ ಸಮಯದಲ್ಲಿ ಶ್ರೀ ದೇವಿ ಎಲ್ಲಮ್ಮ ದೇವಿಯು ಸ್ವಪ್ನದಲ್ಲಿ ಬಂದು :ಇನ್ನು ಮುಂದೆ ನೀವು ಕಷ್ಟಪಟ್ಟು ಇಲ್ಲಿಯವರೆಗೆ ಬರಬೇಕಾಗಿಲ್ಲ. ನಿಮ್ಮೂರಿನ ಶಿವ ದೇವಾಲಯದ ಪಶ್ಚಿಮದಲ್ಲಿ ನನ್ನ ಸಾನ್ನಿಧ್ಯವಿದೆ ಎಂದು ಉಪದೇಶ ಮಾಡಿದಂತಾಯಿತು. ಜೋಗಿಯರೀರ್ವರು ಶ್ರೀ ಸೋಮನಾಥಭಟ್ಟರೊಡಗೂಡಿ ಶ್ರೀ ಸೋಮೇಶ್ವರ ದೇವಾಲಯದ ಪಶ್ಚಿಮದಲ್ಲಿ ಶೋಧಿಸಿದಾಗ ಸಾಲಿಗ್ರಾಮ ಮತ್ತು ಶ್ರೀ ಚಕ್ರ ದೊರೆತವು. ಅದೇ ಸ್ಥಾನದಲ್ಲಿ ಶ್ರೀ ದೇವಿಯವರು ಪ್ರತಿಷ್ಠಾಪನೆಯಾಯಿತು. ಈ ರೀತಿಯಲ್ಲಿ ಪ್ರತಿಷ್ಠಾಪನೆಗೊಂಡ ಸ್ಥಳವೇ ಈಗಿನ ಶ್ರೀ ಹುಲಿಗೆಮ್ಮ ದೇವಿಯ ಗರ್ಭಗುಡಿಯು. ಹೀಗೆ ಸವದತ್ತಿಯಲ್ಲಿ ಎಲ್ಲಮ್ಮ ಎನಿಸಿದರೆ, ಹುಲಿಗಿಯಲ್ಲಿ ಈ ಆದಿಶಕ್ತಿ ದೇವಿಯು ಶ್ರೀ ಹುಲಿಗೆಮ್ಮ ದೇವಿ ಎಂದು ಹೆಸರುವಾಸಿಯಾಗಿದ್ದಾಳೆ.
ಸಾಹಿತ್ಯದ ಹಿನ್ನೆಲೆ
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಹುಲಿಗಿ ತಾ:ಜಿ:ಕೊಪ್ಪಳ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಇತಿಹಾಸ, ಸ್ಥಳಪುರಾಣ, ವಿಶೇಷತೆ ಹಾಗೂ ವಿಶೇಷ ಪೂಜೆಯ ಮಹತ್ವದ ವಿವರ ಈ ದೇವಾಲಯವು 13ನೇ ಶತಮಾನಕ್ಕೆ ಸೇರಿದಾಗಿದೆ. ಎಂಟುನೂರು ವರ್ಷಗಳಿಂದ ಈ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು ಎಂಟು ನೂರು ವರ್ಷಗಳಿಂದ ಹುಲಿಗಿ ಗ್ರಾಮವು ಒಂದು ಪುಣ್ಯಕ್ಷೇತ್ರ ಎಂದೆನಿಸಿಕೊಂಡು ಬಂದಿದೆ. ಗ್ರಾಮದ ಪೂರ್ವ ಭಾಗಕ್ಕೆ ತುಂಗಭದ್ರಾ ನದಿಯು ಉತ್ತರ ವಾಹಿನಿಯಾಗಿ ಹರಿಯುತ್ತಿದೆ. ನದಿಯ ತಟಾಕದಲ್ಲಿ ಶ್ರೀ ಸೋಮೇಶ್ವರ ಲಿಂಗವು ವಿರಾಜಮಾನವಾಗಿ ಅನೇಕ ಶಿವಭಕ್ತರ ಆರಾಧ್ಯ ದೇವತೆಯಾಗಿ ಪೂಜೆಗೊಳ್ಳುತ್ತಲಿದೆ. ಶ್ರೀ ಹುಲಿಗೆಮ್ಮ ದೇವರು ಉದ್ಭವ ಮೂರ್ತಿಯಾಗಿದೆ. ತುಂಗಭದ್ರಾ ನದಿ ತೀರದಲ್ಲಿದೆ ಮತ್ತು ದೇವಾಲಯದ ಸುತ್ತ...ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಹುಲಿಗಿ ತಾ:ಜಿ:ಕೊಪ್ಪಳ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಇತಿಹಾಸ, ಸ್ಥಳಪುರಾಣ, ವಿಶೇಷತೆ ಹಾಗೂ ವಿಶೇಷ ಪೂಜೆಯ ಮಹತ್ವದ ವಿವರ ಈ ದೇವಾಲಯವು 13ನೇ ಶತಮಾನಕ್ಕೆ ಸೇರಿದಾಗಿದೆ. ಎಂಟುನೂರು ವರ್ಷಗಳಿಂದ ಈ ಕ್ಷೇತ್ರ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು ಎಂಟು ನೂರು ವರ್ಷಗಳಿಂದ ಹುಲಿಗಿ ಗ್ರಾಮವು ಒಂದು ಪುಣ್ಯಕ್ಷೇತ್ರ ಎಂದೆನಿಸಿಕೊಂಡು ಬಂದಿದೆ. ಗ್ರಾಮದ ಪೂರ್ವ ಭಾಗಕ್ಕೆ ತುಂಗಭದ್ರಾ ನದಿಯು ಉತ್ತರ ವಾಹಿನಿಯಾಗಿ ಹರಿಯುತ್ತಿದೆ. ನದಿಯ ತಟಾಕದಲ್ಲಿ ಶ್ರೀ ಸೋಮೇಶ್ವರ ಲಿಂಗವು ವಿರಾಜಮಾನವಾಗಿ ಅನೇಕ ಶಿವಭಕ್ತರ ಆರಾಧ್ಯ ದೇವತೆಯಾಗಿ ಪೂಜೆಗೊಳ್ಳುತ್ತಲಿದೆ. ಶ್ರೀ ಹುಲಿಗೆಮ್ಮ ದೇವರು ಉದ್ಭವ ಮೂರ್ತಿಯಾಗಿದೆ. ತುಂಗಭದ್ರಾ ನದಿ ತೀರದಲ್ಲಿದೆ ಮತ್ತು ದೇವಾಲಯದ ಸುತ್ತ ಹಾಗೂ ನದಿ ತೀರದ ವರೆಗೆ ಬಯಲು ಪ್ರದೇಶವಿದೆ. ದೇವಾಲಯವು ಗೋಡೆಗಳು, ಕಲ್ಲಿನಿಂದ ಮಾಡಿದ ಕಂಬಗಳನ್ನು ಮಾತ್ರ ಹೊಂದಿದೆ. ಶಿಲ್ಪಕಲೆ ಇರುವುದಿಲ್ಲ, ದೇವಾಲಯದ ಸಮೀಪ ಉತ್ತರ ವಾಹಿನಿಯಾಗಿ ತುಂಗಭದ್ರಾ ನದಿ ಹರಿಯುತ್ತಿದೆ. ಇದು ದೋಷ ಪರಿಹಾರಕವಾಗಿದೆ. “ತುಂಗಾಪಾನ ಗಂಗಾಸ್ನಾನ” ಎಂಬಂತೆ ವಿಶೇಷತೆಯನ್ನು ಪಡೆದಿದೆ ತ್ರಿಲೋಕ ಕಲ್ಯಾಣಕ್ಕಾಗಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮದುವೆ, ಸಂತಾನ, ಚರ್ಮರೋಗ, ವ್ಯಾಪಾರ ವಹಿವಾಟು, ರಾಜಕೀಯ ಇನ್ನು ಮುಂತಾದ ಕಾಮನಗೆಳು ಸಿದ್ಧಿಸಿವೆ ಮತ್ತು ಶರನ್ನವರಾತ್ರಿ ವಿಶೇಷ ದಿನಗಳಲ್ಲಿ ಮದುವೆ, ಸಂತಾನ ಪ್ರಾಪ್ತಿಗಾಗಿ ಹಾಗೂ ಇಷ್ಟಾರ್ಥಗಳು ಬೇಗ ಪ್ರಾಪ್ತಿಯಾಗುವುವು. ಬಹಳ ವರ್ಷಗಳಿಂದ ಕನ್ಯೆಗೆ ವರ ಸಿಗದಿದ್ದರೆ, ದೇವಾಲಯದಲ್ಲಿ ಶ್ರೀ ದೇವಿಗೆ ಹಾಕಿದ ದಂಡೆಯನ್ನು ಆ ಕನ್ಯೆಯ ತಲೆಯ ಮೇಲೆ ದಂಡೆಯನ್ನು ಹಾಕಿದಾಗ, ಹಾಕಿದ ಒಂದು ವರ್ಷದ ಒಳಗಾಗಿ ಮದುವೆಯಾದ ಉತ್ತಮ ಫಲ ಇದೆ. ಅಭಿಷೇಕ, ಪುಷ್ಪಾಲಂಕಾರ, ನೈವೇದ್ಯ, ಕುಂಕುಮಾರ್ಚನೆ ಪೂಜೆ ವಿಶೇಷತೆಯಿಂದ ಪ್ರಸಿದ್ಧಿಯಾಗಿದೆ. ಟೋಪು ಸೆರಗಿನ ಸೀರೆ, ಪೀತಾಂಬರ ಸೀರೆ, ಜಾತ್ರೆಯಲ್ಲಿ ಬಾಳಿದಂಡಿಗೆ ಮತ್ತು ಅಗ್ನಿಕುಂಡ ಪ್ರಸಿದ್ಧಿಯಾಗಿದೆ ಕಾಮಕಾಯನ ಗೋತ್ರಜರಾದ ವೇ.ಬ್ರ.ಶ್ರೀ ಚೌಡಿಭಟ್ಟ ಎಂಬ ಹೆಸರಿನ ಋತ್ವಿಜರು ಅಂದು ಶ್ರೀ ಸೋಮೇಶ್ವರ ಲಿಂಗದ ಪೂಜೆ ಮಾಡುತ್ತ ಬಂದಿದ್ದರು. ಸೌ.ಆದರ್ಶ ಜೀವನ ನಡೆಸುತ್ತಿದ್ದರು. ಗ್ರಾಮ ನಿವಾಸಿಗಳಿಗೆ ಧಾರ್ಮಿಕ ಜೀವನದಲ್ಲಿ ಸದಾಕಾಲವೂ ಸಹಾಯ ಸಹಕಾರಗಳನ್ನೀಯುತ್ತಿದ್ದರಲ್ಲದೆ, ಭಟ್ಟ ದಂಪತಿಗಳು, ಸಮಾಜ ಸೇವೆಯಲ್ಲಿಯೂ ಮಾರ್ಗದರ್ಶನ ನೀಡುತ್ತಿದ್ದರು. ಗ್ರಾಮ ನಿವಾಸಿಗಳು ಸಹ ಭಟ್ಟರಲ್ಲಿ ಭಕ್ತಿ ಹಾಗೂ ಗೌರವ ಸಲ್ಲಿಸುವಲ್ಲಿ ಹಿಂದೆ ಇರಲಿಲ್ಲ. ಮಳೆಯ ತುಟಾಗ್ರತೆಯಿಂದಾಗಿ ಈ ಪ್ರದೇಶ ಯಾವಾಗಲೂ ಕೃಷಿಯಲ್ಲಿ ಹಿಂದುಳಿದಿದ್ದಾಗಿತ್ತು. ತುಂಗಭದ್ರೆಯ ನೀರನ್ನು ಕೃಷಿಗೆ ಉಪಯೋಗಿಸಬೇಕೆನ್ನುವ ಯೋಚನೆಯಲ್ಲಿ ಚೌಡಿಭಟ್ಟರು ಸದಾ ಮಗ್ನರಾಗಿರುತ್ತಿದ್ದರು. ಶ್ರೀಯುತರು ಗ್ರಾಮ ನಿವಾಸಿಗಳ ಸಹಕಾರದಿಂದ ನದಿಗೆ ಅಡ್ಡಗೋಡೆ ನಿರ್ಮಿಸಿ, ಕಾಲುವೆ ತೋಡಿ ಈ ಪ್ರದೇಶದ ನೀರಾವರಿಗೆ ವ್ಯವಸ್ಥೆಗೊಳಿಸಿದರು. ಈ ಪ್ರದೇಶದ ಜನರ ಆರ್ಥಿಕ ಜೀವನಕ್ಕೆ ಇದೊಂದು ಭದ್ರ ಬುನಾದಿಯಾಯಿತು. ಚಾಲುಕ್ಯ ವಿಕ್ರಮ ಶಕೆ 13 ರಲ್ಲಿ ಅಂದಿನ ಆಳರಸರು ಚೌಡಿಭಟ್ಟರ ಈ ಘನಕಾರ್ಯಕ್ಕೆ ಮೆಚ್ಚಿ ಅವರಿಗೆ ಕೆಲ ದತ್ತಿಗಳನ್ನು ನೀಡಿದರು. ಈ ಐತಿಹಾಸಿಕ ಘಟನೆಯ ವಿವರವನ್ನು ಸಾರಿ ಹೇಳುವ ಶಿಲಾಶಾಸನವು ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಿಂತಿದೆ. ಚೌಡಿಭಟ್ಟರ ವಂಶಜರೇ ಆದ ಸೋಮನಾಥ ಭಟ್ಟರು ಅವರ ಪೂರ್ವಜರಂತೆಯೇ ಧಾರ್ಮಿಕ, ಸಾಮಾಜಿಕ ಪ್ರವೃತ್ತಿಯನ್ನು ಹೊಂದಿ ಈ ಪ್ರದೇಶದಲ್ಲಿ ಘನತೆ ಪಡೆದವರಾಗಿದ್ದಾರೆ. ಶ್ರೀ ಸೋಮನಾಥ ಭಟ್ಟರೂ ಸಹ ಶಿವಾರ್ಚನೆ ಮಾಡುತ್ತಿದ್ದರು. ಅಲ್ಲದೇ ಶಕ್ತಿಯ ಆರಾಧಕರೂ ಆಗಿದ್ದರು. ಶಕ್ತಿಯ ಮಹಿಮೆಯನ್ನು ಕುರಿತು ತಮ್ಮ ಆಸ್ತಿಕ ಅನುಯಾಯಿಗಳಿಗೆ ಸದಾ ಉಪದೇಶ ನೀಡುತ್ತಿದ್ದರು. ಸೋಮನಾಥ ಭಟ್ಟರ ಉಪದೇಶಾಮೃತದಲ್ಲಿ ವಿಶೇಷ ಶ್ರದ್ಧೆ ಹಾಗೂ ಭಕ್ತಿ ಇರಿಸಿದವರೆಂದರೆ, ಇದೇ ಗ್ರಾಮದ ನಿವಾಸಿಗಳಾದ ನಾಗಜೋಗಿ ಮತ್ತು ಬಸವಜೋಗಿ ಎಂಬರು ಇವರೀರ್ವರು ಗಂಗಾಮತಸ್ಥರಿದ್ದು ದೇವಿಯಲ್ಲಿ ಅನನ್ಯ ಭಕ್ತಿ ಹೊಂದಿದವರಾಗಿದ್ದರು. ವೇದಾಂತ ವಿಚಾರಗಳನ್ನು ಹೊಂದಿದ ದೇವಿ ಭಾಗವತದ ಪ್ರಸಂಗಗಳನ್ನು ಸಣ್ಣ ಸಣ್ಣ ಕತೆಗಳಾಗಿ ಅನೇಕ ಉದಾಹರಣೆಗಳೊಂದಿಗೆ ಭಟ್ಟರು ಇವರೀರ್ವರಿಗೂ ತಿಳಿಸಿ ಹೇಳುತ್ತಿದ್ದರು. ನಾಗಜೋಗಿ ಮತ್ತು ಬಸವಜೋಗಿ ಯವರ ಮನೆಯಲ್ಲಿ ಸವದತ್ತಿಯ ದೇವಿ ಎಲ್ಲಮ್ಮನಿಗೆ ಪೂಜಾದಿಗಳು ಅವರ ಪೂರ್ವಜರಿಂದ ಸಲ್ಲಿಸಲ್ಪಡುತ್ತಿದ್ದವು. ಪ್ರತಿ ಹುಣ್ಣಿಮೆಗೂ ದೇವಿ ಎಲ್ಲಮ್ಮನ ದರ್ಶನಕ್ಕೆ ಅವರ ಪೂರ್ವಜರು ಸವದತ್ತಿಗೆ ಹೋಗಿ ಬರುತ್ತಿದ್ದಂತೆಯೇ ನಾಗಜೋಗಿ ಮತ್ತು ಬಸವಜೋಗಿಯವರು ಸಹ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದವರಾಗಿದ್ದರು. ಅವರ ಧಾರ್ಮಿಕ ಸಂಪ್ರದಾಯಕ್ಕೆ ಶ್ರೀ ದೇವಿ ಎಲ್ಲಮ್ಮನಲ್ಲಿ ಅನನ್ಯ ಭಕ್ತಿ ಉಳ್ಳವರಾದ ನಾಗಜೋಗಿ ಬಸವಜೋಗಿಯವರಿಗೆ, ಭಟ್ಟರ ವೇದಾಂತ ಪೂರಿತ ಉಪದೇಶ ಪರಿಪಕ್ವತೆಯನ್ನು ತಂದಿದುದರಲ್ಲಿ ಸಂಶಯವಿಲ್ಲ. ಅವರ ಭಕ್ತಿಯ ಪರಾಕಾಷ್ಟತೆಯ ಫಲವೇ ಶ್ರೀದೇವಿ ಹುಲಿಗೆಮ್ಮನ ಅವತಾರಕ್ಕೆ ಮೂಲ ಕಾರಣವಾಯಿತು. ವಾಹನಗಳ ಸೌಕರ್ಯವೇ ಇಲ್ಲದೆ ಅಂದಿನ ಕಾಲದಲ್ಲಿ ಪ್ರಯಾಣ ತುಂಬ ಕಷ್ಟಕರವೆನಿಸಿದ್ದಿತು. ಶ್ರೀದೇವಿ ಎಲ್ಲಮ್ಮನಲ್ಲಿಯ ಭಕ್ತಿ ನಾಗಜೋಗಿ ಬಸವಜೋಗಿಯವರಿಗೆ, ಪ್ರಯಾಣದ ಆಯಾಸವನ್ನು ಹೋಗಲಾಡಿಸುತ್ತಿದ್ದಿತು. ಉಧೋ ಉಧೋ ಎನ್ನುವ ಉದ್ಗಾರ ಮಾತ್ರ ಪ್ರಯಾಣದುದ್ದಕ್ಕೂ ಅವರ ಬಾಯಿಂದ ಹೊರ ಬರುತ್ತಿತ್ತು. ಹಿಗೇಯೇ ದಿನಗಟ್ಟಲೇ ಅವರ ಪ್ರವಾಸ ಸಾಗಿದ್ದೀತು. ಆಷಾಢ ಶುದ್ಧ ಚತುರ್ದಶಿಯ ಹೊತ್ತಿಗೆ, ಇಬ್ಬರೂ ಭಕ್ತರು ಸವದತ್ತಿಯ ಸಮೀಪಕ್ಕೆ ಬರುವಷ್ಟರಲ್ಲಿ ಮಳೆ ಧಾರಾಕಾರವಾಗಿ ಸುರಿಯತೊಡಗಿತು. ಮಾರನೆಯ ದಿನವೇ ಪೂರ್ಣಿಮೆ, ಪೂರ್ಣಿಮೆಯಂದು ನಾಗಜೋಗಿ ಬಸವಜೋಗಿಯವರು ದೇವಿಯ ದರ್ಶನ ಪಡೆದುಕೊಂಡೇ ಅನ್ನ ಆಹಾರಾದಿಗಳನ್ನು ಸ್ವೀಕರಿಸಬೇಕು. ಮಳೆ ನಿಲ್ಲುವ ಲಕ್ಷಣಗಳು ಕಾಣಬರುತ್ತಿರಲಿಲ್ಲ. ಅವರು ಅಂದುಕೊಂಡಂತೆಯೇ ಮಲಪ್ರಭಾ ನದಿಯು ತುಂಬಿ ಹರಿಯುತ್ತಿದ್ದಿತು. ನದಿಯ ದಡಕ್ಕೆ ಬಂದು ಭಕ್ತರೀರ್ವರೂ ನದಿಯಲ್ಲಿ ಪ್ರವಾಹ ಕಡಮೆಯಾಗಲೆಂದು ಕಾಯುತ್ತ ಕುಳಿತರು. ನದಿಯ ದಡದಲ್ಲಿ ದಟ್ಟವಾಗಿ ಬೆಳೆದ ಕಾಡಿನಲ್ಲಿ ಆ ಘೋರ ಕತ್ತಲೆಯಲ್ಲಿ ಮರದಡಿಯೊಂದರಲ್ಲಿ ಒರೆಯಾಗಿ ಕುಳಿತಿದ್ದಾರೆ. ಮಿಂಚಿದಾಗೊಮ್ಮೆ ಆಕಾಶದಲ್ಲಿ ಒತ್ತರಿಸಿಕೊಂಡು ಬರುತ್ತಿರುವ ಮೋಡಗಳು ಕಾಣುತ್ತಿವೆ. ದಿಕ್ಕುದಿಕ್ಕುಗಳಲ್ಲಿ ಭೋರ್ಗರೆಯುತ್ತಿರುವ ಗುಡುಗಿನ ಹಬ್ಬ: ಒಂದೊಂದು ಸಲ ಸಿಡಿಲಿನ ಸಬ್ದವೂ ಕೇಳಿಬರುತ್ತಿದೆ.ಈರ್ವರ ಉಟ್ಟ ಬಟ್ಟೆಗಳು ಸಾಕಷ್ಟು ಒದ್ದೆಯಾಗಿವೆ. ಎಷ್ಟೇ ದೊಡ್ಡ ಗಾತ್ರದ ಮರದಡಿಯಲ್ಲಿ ಓರೆಯಾಗಿ ಕುಳಿತರೂ ಆ ಅವಿರತ ಮಳೆಯ ಹನಿಗಳಿಂದ ಬಟ್ಟೆಗಳನ್ನು ಒಣದಾಗಿ ಉಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಅದು ಆಷಾಢ ಮಾಸವಿದ್ದುದರಿಂದ ಗಾಳಿಯೂ ಬೀಸುತ್ತಿತ್ತು.ಆ ಗಾಳಿ ಮಳೆಯಲ್ಲಿ ಇಬ್ಬರೂ ತತ್ತರಿಸಿ ಹೋಗಿದ್ದಾರೆ. ಮಳೆ ನಿಲ್ಲುವ ಯಾವ ಸೂಚನೆಗಳೂ ಕಾಣಬರಲಿಲ್ಲ. ಚತುರ್ಧಶಿಯ ರಾತ್ರಿ ಕಳೆದು ಪೂರ್ಣಿಮೆಯ ಅರುಣೋದಯವಾಯಿತಾದರೂ ಸೂರ್ಯರಶ್ಮಿಗಳು ಮೋಡಗಳನ್ನು ಛೇದಿಸಿಕೊಂಡು ಬರಲಾರದೆ ತಡೆಯಲ್ಪಟ್ಟಿದ್ದವು. ಪೂರ್ಣಿಮೆಯ ಹಗಲೆಲ್ಲವೂ ಮಳೆ ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ಭಕ್ತರೀರ್ವರಿಗೂ ಮಳೆ ಕಡಿಮೆಯಾದೀತೆಂಬ ಆಸೆ. ಆದರೂ ಮಳೆಯ ಪರಿವೆ ಅವರಿಗಿದ್ದಂತಿರಲಿಲ್ಲ. ದೇವಿಯ ದರ್ಶನದ್ದೇ ಅವರ ಬಯಕೆ. ದರ್ಶನವಿಲ್ಲದ ಆಹಾರಾದಿಗಳ ಸೇವನೆ ಇಲ್ಲ. ಮಳೆ ನಿಲ್ಲದೆ ಹೊಳೆ ದಾಟುವಂತಿಲ್ಲ. ಚತುರ್ದಶಿ ಮತ್ತು ಹುಣ್ಣಿಮೆ, ಹೀಗೆ ಎರಡು ದಿನಗಳಿಂದ ಅರವಿಗೆ ಊಟವಿರಲಿಲ್ಲ. ಹಸಿವಿನ ಬಾಧೆ ಒಂದೆಡೆಯಾದರೆ, ಉಟ್ಟ ಬಟ್ಟೆಗಳು ತೋಯ್ದು ಚಳಿಯ ಬಾಧೆ ಮತ್ತೊಂದೆಡೆಗೆ, ಹೀಗಾಗಿ ಭಕ್ತರೀರ್ವರೂ ತತ್ತರಿಸಿ ಹೋಗಿದ್ದರು. ಅವರಿಗೆ ಇಂತಹ ಪ್ರಸಂಗ ಹಿಂದೆಂದೂ ಒದಗಿ ಬಂದಿರಲಿಲ್ಲ. ಶ್ರೀ ದೇವಿಯ ಗುಡ್ಡಕ್ಕೆ ಹೊರಡುವಾಗ. ತಮ್ಮ ಗುರುಗಳಲ್ಲಿ ಆಶೀರ್ವಾದ ಪಡೆಯಲು ಹೋದಾಗ, ಭಯ ಮತ್ತು ಕುತೂಹಲಪೂರಿತ ಅವರ ಮುಖಚರ್ಯದ ಕಲ್ಪನೆ ಈಗ ಅವರಿಗೆ ಹೊಳೆಯತೊಡಗಿತು. ಶ್ರೀ ದೇವಿ ದರ್ಶನ ಪಡೆಯಲು ಈಗ ಯಾರಿಂದಲೂ ಸಹಾಯ ದೊರೆಯುವ ಸಾಧ್ಯತೆಯೇ ಇರಲಿಲ್ಲ. “ ಆ ದೇವಿಯ ನಮ್ಮನ್ನು ಪಾರುಮಾಡುವಳೆಂಬ” ಅಚಲ ಶ್ರದ್ಧೆ ಮಾತ್ರ ಅವರಲ್ಲಿ ತುಂಬಿ ತುಳುಕುತ್ತಿದ್ದಿತು. ಪೂರ್ಣಿಮೆಯ ಸಂಜೆಗೆ ಮಳೆ ನಿಂತಿತಾದರೂ ನದಿಯಲ್ಲಿ ಪ್ರವಾಹ ತಗ್ಗಲಿಲ್ಲ. ಮಳೆಯಲ್ಲಿ ತೋಯ್ದಿದ್ದ ಬಟ್ಟೆಗಳು ಮೈಮೇಲೆಯೇ ಅರ್ಧಂಬರ್ಧ ಒಣಗಿದ್ದವು. ಕುಳಿತಲ್ಲಿಯೇ ಕಲ್ಲು ಬಂಡೆಯ ಮೇಲೆ ಈರ್ವರೂ ಒರಗಿಕೊಂಡಿದ್ದರು. ನಾಲಿಗೆಯ ಮೇಲೆ ದೇವಿಯ ನಮ, ಮನದಲ್ಲಿ ಶ್ರೀದೇವಿಯ ಸುಂದರ ಮೂರ್ತಿಯ ಚಿತ್ರಣ ಲಾಸ್ಯವಾಡುತ್ತಿದ್ದಾಗಲೇ ಅವರಿಗೆ ನಿದ್ರೆಯ ಮಂಪರು ಕವಿಯಿತು. ಕತ್ತಲೆಯ ಆ ಕರಾಳ ಛಾಯೆಯಲ್ಲಿಯೇ ಬೆಳಕೊಂದು ಗೋಚರಿಸಿತು. ಅಂತಹ ಬೆಳಕನ್ನು ನಿಜ ಜೀವನದಲ್ಲಿ ಯಾರೂ ಎಂದು ಕಂಡುದುದಿಲ್ಲ. ಆ ಅನರ್ವಚನೀಯ ಬೆಳಕಿನ ಮಧ್ಯದಲ್ಲಿ ಸುಂದರ ಸುಕೋಮಲ ತೇಜೋಮಯ ತಾಯಿ ಕಾಣಿಸಿದಳು. “ಮಕ್ಕಳಿರಾ, ನಿಮ್ಮನ್ನು ಬಹಳ ಕಷ್ಟಕ್ಕೀಡು ಮಾಡಿದೆ. ನಿಮಗದೆಷ್ಟು ತೊಂದರೆಯಾಯಿತೋ? ಪಾಪ, ನೀವು ಇನ್ನೂ ಮೇಲೆ ಇಷ್ಟೆಲ್ಲ ತೊಂದರೆಪಟ್ಟುಕೊಂಡು ಗುಡ್ಡಕ್ಕೆ ಬರಬೇಕಾದದ್ದಿಲ್ಲ. ನಿಮ್ಮೂರಿನ ಶಿವಾಲಯದ ಪಶ್ಚಿಮ ತಾಣದಲ್ಲಿ ಹರಿಹರ ಬ್ರಹ್ಮಾದಿಗಳೂ ಪೂಜಿಸುವ ಶ್ರೀಚಕ್ರ ದೊರಕುವುದು. ಸಾಲಿಗ್ರಾಮ ರೂಪದಲ್ಲಿ ನನ್ನ ಮುಖವೂ ಗೋಚರಿಸುವುದು ಅಲ್ಲಿಯೇ ನೀವು ಅವುಗಳನ್ನು ಪೂಜಿಸಿರಿ. ಅಲ್ಲಿ ನಾನು ಅವಿರ್ಭವಿಸುವೆ” ಎಂದು ಆ ತಾಯಿ ಅಪ್ಪಣೆ ಕೊಡಿಸಿದಳಲ್ಲದೇ ತನ್ನ ಪ್ರಭಾವದಿಂದ ದೇವಿಯು ಭಕ್ತರೀರ್ವರಿಗೂ ಗುಡ್ಡದ ದರ್ಶನ ಮೂಡಿಸಿ ಅಂತರ್ಧಾನವಾದಳು. ಭಕ್ತರೀರ್ವರೂ ಪಕ್ಕನೆ ಕಣ್ತೆರೆದು ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ. ಇಬ್ಬರಿಗೂ ಒಂದೇ ತೆರನಾದ ಕನಸು. ಬಾಯಿಂದ ಮಾತುಗಳೇ ಹೊರಸೂಸುತ್ತಿಲ್ಲ. ಕಣ್ಣಲ್ಲಿ ಆನಂದ ಭಾಷ್ಪಗಳು ಒಂದೇ ಸವನೆ ಹರಿಯುತ್ತಿವೆ. ಆನಂದದಿಂದ ಮೈ ಪುಳಕಿತಗೊಂಡಿತು. ಶ್ರೀ ದೇವಿಯು ನಮ್ಮ ಮೇಲೆ ಕೃಪ ಮಾಡಿದಳೆಂದು ಮನಗಂಡರು. ಅಲ್ಲಿಂದ ಮರಳಿದ ಬಳಿಕ, ನಡೆದ ವಿದ್ಯಮಾನಗಳನ್ನೆಲ್ಲ ಗುರು ಸೋಮನಾಥ ಭಟ್ಟರೆದುರು ಸವಿಸ್ತಾರ ವರ್ಣಿಸಿದರು. ದೇವಿಯ ಅಪ್ಪಣೆಯಂತೆ ಶಿವಾಲಯದ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಚಕ್ರ ಮತ್ತು ಸಾಲಿಗ್ರಾಮಗಳು ದೊರೆತವು. ಅದೇ ಸ್ಥಳದಲ್ಲಿ ಚಿಕ್ಕ ದೇವಾಲಯ ಒಂದನ್ನು ನಿರ್ಮಿಸಲಾಯಿತಲ್ಲದೇ ಶಾಸ್ತೋಕ್ತವಾಗಿ ವೇದ ಘೋಷಗಳೊಂದಿಗೆ ದೇವಿಯ ಪ್ರತಿಷ್ಟಾಪನೆ ಮಾಡಲಾಯಿತು. ಹುಲಿಗಿ ಗ್ರಾಮಕ್ಕೇನೇ ಆಕೆಯು ತಾಯಿಯಾದ್ದರಿಂದ ಆಕೆಯು “ಹುಲಿಗೆಮ್ಮ” ನಾದಳು. ಶ್ರೀ ದೇವಿ “ಹುಲಿಗೆಮ್ಮ” ತಾಯಿಯನ್ನು ಷೋಢಶೋಪಚಾರಗಳಿಂದ ನಿತ್ಯವೂ ಪೂಜಿಸುವ ಹೊಣೆ ಗುರು ಸೋಮನಾಥ ಭಟ್ಟರದಾಯಿತು. ಇದಕ್ಕೆ ಪೂರಕವಾಗಬಹುದಾದ ವೃತ ಒಂದನ್ನಾಚರಿಸ ಬೇಕೆಂಬುದಾಗಿ ನಾಗಜೋಗಿ ಬಸವಜೋಗಿ ಮತ್ತು ಸೋಮನಾಥ ಭಟ್ಟರು ಯೋಚಿಸತೊಡಗಿದರು. ಧರ್ಮಾಚರಣೆಯಲ್ಲಿ ತಿಲಕ ಪ್ರಾಯನಾದ ನಹುಷನ ಚರಿತ್ರೆ, ಆತ ಇಂದ್ರನಾದಾಗ ಸ್ವರ್ಗದಲ್ಲಿ ಆಚರಿಸಿದ ಶಿಬಿಕೋತ್ಸವ ತನ್ಮೂಲಕ ಮೂರು ಲೋಕಗಳಲ್ಲಿ ಅಧರ್ಮವು ಅಳಿದು ಧರ್ಮ ಉತ್ಥಾನ ಹೊಂದಿದ ಬಗೆಯನ್ನು ಮನದಲ್ಲಿಯೇ ಚಿಂತಿಸಿ ಗುರು ಸೋಮನಾಥ ಭಟ್ಟರು ಭಕ್ತರೀರ್ವರಿಗೂ ವಿಷಯ ವಿವರಿಸಿದರು. ಮಾರ್ಗದರ್ಶನ ಸೋಮನಾಥ ಭಟ್ಟರದು ಅನುಚರಣೆ ನಾಗಜೋಗಿ ಬಸವಜೋಗಿಯವರದು. ಬಾಳೀದಂಡಿಗೆ ಆಚರಣೆ ಪ್ರಾರಂಭ ಅಲ್ಲಿಂದಲೇ ಆಯಿತು. ಪ್ರತಿ ಮಂಗಳವಾರ , ಶುಕ್ರವಾರ, ಪೂರ್ಣಿಮೆ ಮತ್ತು ಅಮಾವಾಸ್ಯೆಗಳಂದು ಶ್ರೀ ದೇವಿ ಭಾಗವತ ಪಠಣ, ಶ್ರೀ ಸೋಮನಾಥ ಭಟ್ಟರಿಂದ ಜರುಗತೊಡಗಿತು. ಗ್ರಾಮ ನಿವಾಸಿಗಳೆಲ್ಲ ದೇವಸ್ಥಾನದಲ್ಲಿ ಸೇರತೊಡಗಿದರು. ಮೂಲ ದೇವಸ್ಥಾನಕ್ಕೆ ಮುಂದುಗಡೆ ಪ್ರಾಂಗಣ ಹಾಗೂ ಇಕ್ಕೆಲಗಳಲ್ಲಿ ಉಗ್ರಾಣಗಳ ರಚನೆಯಾಯಿತು. ನವರಾತ್ರಿಯಲ್ಲಿ ನವದಿನ ಪುರಾಣ ಪಠಣ, ವಿವಿಧ ಅಲಂಕಾರಯುಕ್ತ ಪೂಜೆ, ಭಕ್ಷ್ಯಭೋಜ್ಯ ಹಾರಗಳ ನೈವೇದ್ಯ ಮತ್ತು ಬ್ರಹ್ಮ ಬೋಜನಾದಿಗಳು ಜರುಗತೊಡಗಿದವು. ಈ ಪ್ರದೇಶದ ಜನರೆಲ್ಲರ ಸಂಕಷ್ಟಗಳು ಪರಿಹಾರಗೊಳ್ಳಬೇಕು. ಜನತೆಯಲ್ಲಿ ಧರ್ಮ ಜಾಗೃತಗೊಂಡು ಧರ್ಮಾಚರಣೆ ನಿತ್ಯದ ಉಸಿರಾಗಬೇಕು. ಅಧರ್ಮವನ್ನು ಮೆಟ್ಟಿನಿಲ್ಲುವ ಚಿರಂತನ ಶಕ್ತಿ ಜನತೆಯಲ್ಲಿ ಸಂಚಯಿಸಬೇಕು. ಈ ವೃತಾಚರಣೆ ಜೊತೆಯಲ್ಲಿಯೇ ಶ್ರೀ ದೇವಿಯ ಮಹಿಮೆಯನ್ನು ಲೋಕಕ್ಕೆ ತೋರಿಸಿಕೊಡಬೇಕಾದ್ದಿತು. ಇದು ಪವಾಡ ರೂಪಿಸಿದರೆ ಮಾತ್ರ ಸಾಧ್ಯವೆಂದು ಭಟ್ಟರಿಗೆ ತಿಳಿದಿದ್ದಿತಾದ್ದರಿಂದ ‘ಪಾಯಸ ನಿವೇಧನೆ ಮತ್ತು ಅಗ್ನಿಕುಂಡದ ಕಾರ್ಯಕ್ರಮವನ್ನು ಸೋಮನಾಥ ಭಟ್ಟರು ರೂಪಿಸಿದರು. ವೈಶಾಖ ಶುದ್ಧ ಪೂರ್ಣಿಮೆಯಿಂದ ವೃತಾಚರಣೆ ಪ್ರಾರಂಭವಾಯಿತು. ಪ್ರತಿಪದೆಯಂದು ನಾಗಜೋಗಿ ಬಸವಜೋಗಿಯವರಿಗೆ ತೈಲಾಭ್ಯಂಗ ಮಾಡಿಸಿ, ಪುಣ್ಯಾಹವಾಚನ ನೆರವೇರಿಸಿದರಲ್ಲದೇ ಶ್ರೀ ದೇವಿಯನ್ನು ಕುರಿತು ಆಚರಿಸಬೇಕಾಗಿರುವ ಬಾಳಿದಂಡಿಗೆ ನಿವೇಧನೆ ಮತ್ತು ಅಗ್ನಿಕುಂಡ ಕಾರ್ಯಕ್ರಮ ಜರುಗಿಸಲು ಕಂಕಣಬದ್ಧರನ್ನಾಗಿ ಮಾಡಲಾಯಿತು. ಪ್ರತಿಪೆಯಿಂದ ಸಪ್ತಮಿಯವರೆಗೆ ಒಂದುವಾರ ಶ್ರೀ ಸೋಮನಾಥ ಭಟ್ಟರ ಉಪದೇಶದಂತೆ, ನಾಗಜೋಗಿ ಬಸವಜೋಗಿಯರು ಕೇವಲ ಹಣ್ಣು ಹಾಲು ಸ್ವೀಕರಿಸಿದರಲ್ಲದೇ ಸದಾಕಾಲವು ದೇವಿಯ ಧ್ಯಾನ ಮಾಡಿದರು. ನವಮಿಯಂದು ದೇವಿಯವರಿಗೆ ಸರ್ವಾಲಂಕಾರ ಮಾಡಿ ರಥೋತ್ಸವ ಜರುಗಿಸಲಾಯಿತು. ದಶಮಿಯ ರಾತ್ರಿಯಲ್ಲಿ (ಶಿಬಿಕೆ) ಬಾಳಿದಂಡಿಗೆ ತಯಾರಿಸಲಾಯಿತು. ಗ್ರಾಮ ಮತ್ತು ದೇವಾಲಯಗಳ ಎಲ್ಲಾ ಮನೆ ಮಾರುಗಳು ತಳಿರು ತೋರಣದಿಂದ ಅಲಂಕೃತವಾದವು. ಏಕಾದಶಿಯಂದು ಬ್ರಾಹ್ಮೀ ಮೂಹೂರ್ತದಲ್ಲಿ ತುಂಗಭದ್ರೆಯಲ್ಲಿ ಪೂಜೆಗೈದು ಬಾಳಿದಂಡಿಗೆಯನ್ನೇರಿದ ನಾಗಜೋಗಿಗೆ ಬಸವಜೋಗಿಯು ಮುಖ್ಯವಾಹಕನಾದ. ದಂಡಿಗೆಯು ಶ್ರೀ ದೇವಿಯ ದೇವಾಲಯವನ್ನು ತ್ರಿಪ್ರದಕ್ಷಿಣೆಗೈದು ದೇವಾಲಯ ಪ್ರವೇಶಿಸಿತು. ಬಾಳೆಯ ಎಲೆಗಳು ಹರಿಯದಷ್ಟು ಹಗುರವಾಗಿ ನಾಗಜೋಗಿಯು ದಂಡಿಗೆಯ ಮೇಲೆ ವಿರಾಜಮಾನನಾಗಿದ್ದ. ದ್ವಾದಶಿಯ ಬ್ರಾಹ್ಮೀ ಮುಹೂರ್ತದಲ್ಲಿ ಹೊಸ ಹರವಿಯೊಂದರಲ್ಲಿ ಅಕ್ಕಿಯ ಅನ್ನ ಬೇಯಿಸಲಾಯಿತು. ನಾಗಜೋಗಿ ಬಸವಜೋಗಿಯರು ತಮ್ಮ ಬರೀ ಕೈಗಳಿಂದಲೇ ಬಿಸಿ ಬಿಸಿ ಅನ್ನವನ್ನು ಹರಿವಿಯಿಂದ ತೆಗೆದು ದೇವಿಗೆ ನೈವೇದ್ಯ ನಿವೇದಿಸಿದರು. ನಂತರ ವೃತಾಚರಣೆಯ ಕೊನೆಗೆ ಕಾರ್ಯಕ್ರಮವಾಗಿ ನಿಗಿ ನಿಗಿ ಕೆಂಡ ತುಂಬಿದ ಅಗ್ನಿಕುಂಡದಲ್ಲಿ ಈರ್ವರೂ ಶ್ರೀ ದೇವಿಯನ್ನು ಪ್ರಾರ್ಥಿಸಿ ಪ್ರವೇಶ ಮಾಡಿ ಅದರಲ್ಲಿ ಹಾಯ್ದು ಶ್ರೀ ದೇವಿಯ ದೇವಾಲಯದಲ್ಲಿ ಪ್ರವೇಶಿಸಿದರು. ಸರ್ವರೂ ದೇವಿಯನ್ನು ಆಕೆಯ ಭಕ್ತರೀರ್ವರನ್ನು ಮನಸಾರೆ ಸ್ಮರಸಿದರು. ನಂತರ ನಾಗಜೋಗಿ ಬಸವಜೋಗಿಯವರು ಶ್ರೀ ದೇವಿಗೆ ಮಾಡಿದ ನೈವೇದ್ಯವನ್ನು ವೃತಾಚರಣೆಯಲ್ಲಿ ಪಾಲ್ಗೊಂಡವರೆಲ್ಲರೊಂದಿಗೂ ಸೇರಿ ಸ್ವೀಕರಿಸಿದರು. ಅದೇ ಇಂದಿಗೂ ‘ಜೋಗಪಂಕ್ತಿ’ ಎಂದು ಕರೆಯಿಸಿಕೊಳ್ಳುತ್ತದೆ. ಈ ವೃತಾಚರಣೆಯೇ ಶ್ರೀ ದೇವಿ ಹುಲಿಗೆಮ್ಮನ ಜಾತ್ರೆಯಾಗಿ ವರ್ಷ ವರ್ಷವೂ ಸಂಪ್ರದಾಯವಾಯಿತು. ಗುರು ಸೋಮನಾಥ ಭಟ್ಟರು ಹಾಕಿಕೊಟ್ಟ ಮಾರ್ಗದಲ್ಲಿ ನಿಷ್ಕಾಮ ಭಕ್ತಿಯನ್ನಿಟ್ಟು ತಾವು ಆತ್ಮಸಾಕ್ಷಾತ್ಕಾರ ಸಾಧಿಸಿಕೊಂಡರಲ್ಲದೇ ಮಾನವ ಕುಲಕೋಟಿಗೆ ಶ್ರದ್ಧಾಸ್ಥಾನವನ್ನೇ ನಿರ್ಮಿಸಿ ಪರಮ ಪಾವನ ಕಾರ್ಯವೆಸಗಿದ್ದಾರೆ. ಅವರ ಮಾರ್ಗದಲ್ಲಿ , ಅವರಷ್ಟು ನಿಷ್ಕಾಮ ಭಕ್ತಿಯನ್ನಿರಿಸದಿದ್ದರೂ ಸಹ, ಕಿಂಚಿದ್ಭಕ್ತಿಯನ್ನಿರಿಸಿ ದೇವಿಯ ಸೇವೆ ಗೈದದ್ದಾರೆ ಹಾಗೂ ದೇವಿಯನ್ನು ಭಕ್ತಿ ಪೂರ್ವಕವಾಗಿ ಆರಾಧಿಸಿದರೆ ಭಕ್ತರಿಗೆ ಬೇಡಿದಿಷ್ಟಾರ್ಥಗಳನ್ನು ಪೂರೈಸುವವಳಾಗಿದ್ದಾಳೆ.
ಪೌರಾಣಿಕ ಹಿನ್ನೆಲೆ
ಸುಮಾರು ಎಂಟು ನೂರು ವರ್ಷಗಳಿಂದ ಹುಲಿಗಿ ಗ್ರಾಮವು ಒಂದು ಪುಣ್ಯಕ್ಷೇತ್ರ ಎಂದೆನಿಸಿಕೊಂಡು ಬಂದಿದೆ. ಗ್ರಾಮದ ಪೂರ್ವ ಭಾಗಕ್ಕೆ ತುಂಗಭದ್ರಾ ನದಿಯು ಉತ್ತರ ವಾಹಿನಿಯಾಗಿ ಹರಿಯುತ್ತಿದೆ. ನದಿಯ ತಟಾಕದಲ್ಲಿ ಶ್ರೀ ಸೋಮೇಶ್ವರ ಲಿಂಗವು ವಿರಾಜಮಾನವಾಗಿ ಅನೇಕ ಶಿವಭಕ್ತರ ಆರಾಧ್ಯ ದೇವತೆಯಾಗಿ ಪೂಜೆಗೊಳ್ಳುತ್ತಲಿದೆ. ಕಾಮಕಾಯನ ಗೋತ್ರಜರಾದ ವೇ.ಬ್ರ.ಶ್ರೀ ಚೌಡಿಭಟ್ಟ ಎಂಬ ಹೆಸರಿನ ಋತ್ವಿಜರು ಅಂದು ಶ್ರೀ ಸೋಮೇಶ್ವರ ಲಿಂಗದ ಪೂಜೆ ಮಾಡುತ್ತ ಬಂದಿದ್ದರು. ಸೌ.ಆದರ್ಶ ಜೀವನ ನಡೆಸುತ್ತಿದ್ದರು. ಗ್ರಾಮ ನಿವಾಸಿಗಳಿಗೆ ಧಾರ್ಮಿಕ ಜೀವನದಲ್ಲಿ ಸದಾಕಾಲವೂ ಸಹಾಯ ಸಹಕಾರಗಳನ್ನೀಯುತ್ತಿದ್ದರಲ್ಲದೆ, ಭಟ್ಟ ದಂಪತಿಗಳು, ಸಮಾಜ ಸೇವೆಯಲ್ಲಿಯೂ ಮಾರ್ಗದರ್ಶನ ನೀಡುತ್ತಿದ್ದರು. ಗ್ರಾಮ ನಿವಾಸಿಗಳು ಸಹ ಭಟ್ಟರಲ್ಲಿ ಭಕ್ತಿ...ಸುಮಾರು ಎಂಟು ನೂರು ವರ್ಷಗಳಿಂದ ಹುಲಿಗಿ ಗ್ರಾಮವು ಒಂದು ಪುಣ್ಯಕ್ಷೇತ್ರ ಎಂದೆನಿಸಿಕೊಂಡು ಬಂದಿದೆ. ಗ್ರಾಮದ ಪೂರ್ವ ಭಾಗಕ್ಕೆ ತುಂಗಭದ್ರಾ ನದಿಯು ಉತ್ತರ ವಾಹಿನಿಯಾಗಿ ಹರಿಯುತ್ತಿದೆ. ನದಿಯ ತಟಾಕದಲ್ಲಿ ಶ್ರೀ ಸೋಮೇಶ್ವರ ಲಿಂಗವು ವಿರಾಜಮಾನವಾಗಿ ಅನೇಕ ಶಿವಭಕ್ತರ ಆರಾಧ್ಯ ದೇವತೆಯಾಗಿ ಪೂಜೆಗೊಳ್ಳುತ್ತಲಿದೆ. ಕಾಮಕಾಯನ ಗೋತ್ರಜರಾದ ವೇ.ಬ್ರ.ಶ್ರೀ ಚೌಡಿಭಟ್ಟ ಎಂಬ ಹೆಸರಿನ ಋತ್ವಿಜರು ಅಂದು ಶ್ರೀ ಸೋಮೇಶ್ವರ ಲಿಂಗದ ಪೂಜೆ ಮಾಡುತ್ತ ಬಂದಿದ್ದರು. ಸೌ.ಆದರ್ಶ ಜೀವನ ನಡೆಸುತ್ತಿದ್ದರು. ಗ್ರಾಮ ನಿವಾಸಿಗಳಿಗೆ ಧಾರ್ಮಿಕ ಜೀವನದಲ್ಲಿ ಸದಾಕಾಲವೂ ಸಹಾಯ ಸಹಕಾರಗಳನ್ನೀಯುತ್ತಿದ್ದರಲ್ಲದೆ, ಭಟ್ಟ ದಂಪತಿಗಳು, ಸಮಾಜ ಸೇವೆಯಲ್ಲಿಯೂ ಮಾರ್ಗದರ್ಶನ ನೀಡುತ್ತಿದ್ದರು. ಗ್ರಾಮ ನಿವಾಸಿಗಳು ಸಹ ಭಟ್ಟರಲ್ಲಿ ಭಕ್ತಿ ಹಾಗೂ ಗೌರವ ಸಲ್ಲಿಸುವಲ್ಲಿ ಹಿಂದೆ ಇರಲಿಲ್ಲ. ಮಳೆಯ ತುಟಾಗ್ರತೆಯಿಂದಾಗಿ ಈ ಪ್ರದೇಶ ಯಾವಾಗಲೂ ಕೃಷಿಯಲ್ಲಿ ಹಿಂದುಳಿದಿದ್ದಾಗಿತ್ತು. ತುಂಗಭದ್ರೆಯ ನೀರನ್ನು ಕೃಷಿಗೆ ಉಪಯೋಗಿಸಬೇಕೆನ್ನುವ ಯೋಚನೆಯಲ್ಲಿ ಚೌಡಿಭಟ್ಟರು ಸದಾ ಮಗ್ನರಾಗಿರುತ್ತಿದ್ದರು. ಶ್ರೀಯುತರು ಗ್ರಾಮ ನಿವಾಸಿಗಳ ಸಹಕಾರದಿಂದ ನದಿಗೆ ಅಡ್ಡಗೋಡೆ ನಿರ್ಮಿಸಿ, ಕಾಲುವೆ ತೋಡಿ ಈ ಪ್ರದೇಶದ ನೀರಾವರಿಗೆ ವ್ಯವಸ್ಥೆಗೊಳಿಸಿದರು. ಈ ಪ್ರದೇಶದ ಜನರ ಆರ್ಥಿಕ ಜೀವನಕ್ಕೆ ಇದೊಂದು ಭದ್ರ ಬುನಾದಿಯಾಯಿತು. ಚಾಲುಕ್ಯ ವಿಕ್ರಮ ಶಕೆ 13 ರಲ್ಲಿ ಅಂದಿನ ಆಳರಸರು ಚೌಡಿಭಟ್ಟರ ಈ ಘನಕಾರ್ಯಕ್ಕೆ ಮೆಚ್ಚಿ ಅವರಿಗೆ ಕೆಲ ದತ್ತಿಗಳನ್ನು ನೀಡಿದರು. ಈ ಐತಿಹಾಸಿಕ ಘಟನೆಯ ವಿವರವನ್ನು ಸಾರಿ ಹೇಳುವ ಶಿಲಾಶಾಸನವು ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಿಂತಿದೆ. ಚೌಡಿಭಟ್ಟರ ವಂಶಜರೇ ಆದ ಸೋಮನಾಥ ಭಟ್ಟರು ಅವರ ಪೂರ್ವಜರಂತೆಯೇ ಧಾರ್ಮಿಕ, ಸಾಮಾಜಿಕ ಪ್ರವೃತ್ತಿಯನ್ನು ಹೊಂದಿ ಈ ಪ್ರದೇಶದಲ್ಲಿ ಘನತೆ ಪಡೆದವರಾಗಿದ್ದಾರೆ. ಶ್ರೀ ಸೋಮನಾಥ ಭಟ್ಟರೂ ಸಹ ಶಿವಾರ್ಚನೆ ಮಾಡುತ್ತಿದ್ದರು. ಅಲ್ಲದೇ ಶಕ್ತಿಯ ಆರಾಧಕರೂ ಆಗಿದ್ದರು. ಶಕ್ತಿಯ ಮಹಿಮೆಯನ್ನು ಕುರಿತು ತಮ್ಮ ಆಸ್ತಿಕ ಅನುಯಾಯಿಗಳಿಗೆ ಸದಾ ಉಪದೇಶ ನೀಡುತ್ತಿದ್ದರು. ಸೋಮನಾಥ ಭಟ್ಟರ ಉಪದೇಶಾಮೃತದಲ್ಲಿ ವಿಶೇಷ ಶ್ರದ್ಧೆ ಹಾಗೂ ಭಕ್ತಿ ಇರಿಸಿದವರೆಂದರೆ, ಇದೇ ಗ್ರಾಮದ ನಿವಾಸಿಗಳಾದ ನಾಗಜೋಗಿ ಮತ್ತು ಬಸವಜೋಗಿ ಎಂಬರು ಇವರೀರ್ವರು ಗಂಗಾಮತಸ್ಥರಿದ್ದು ದೇವಿಯಲ್ಲಿ ಅನನ್ಯ ಭಕ್ತಿ ಹೊಂದಿದವರಾಗಿದ್ದರು. ವೇದಾಂತ ವಿಚಾರಗಳನ್ನು ಹೊಂದಿದ ದೇವಿ ಭಾಗವತದ ಪ್ರಸಂಗಗಳನ್ನು ಸಣ್ಣ ಸಣ್ಣ ಕತೆಗಳಾಗಿ ಅನೇಕ ಉದಾಹರಣೆಗಳೊಂದಿಗೆ ಭಟ್ಟರು ಇವರೀರ್ವರಿಗೂ ತಿಳಿಸಿ ಹೇಳುತ್ತಿದ್ದರು. ನಾಗಜೋಗಿ ಮತ್ತು ಬಸವಜೋಗಿ ಯವರ ಮನೆಯಲ್ಲಿ ಸವದತ್ತಿಯ ದೇವಿ ಎಲ್ಲಮ್ಮನಿಗೆ ಪೂಜಾದಿಗಳು ಅವರ ಪೂರ್ವಜರಿಂದ ಸಲ್ಲಿಸಲ್ಪಡುತ್ತಿದ್ದವು. ಪ್ರತಿ ಹುಣ್ಣಿಮೆಗೂ ದೇವಿ ಎಲ್ಲಮ್ಮನ ದರ್ಶನಕ್ಕೆ ಅವರ ಪೂರ್ವಜರು ಸವದತ್ತಿಗೆ ಹೋಗಿ ಬರುತ್ತಿದ್ದಂತೆಯೇ ನಾಗಜೋಗಿ ಮತ್ತು ಬಸವಜೋಗಿಯವರು ಸಹ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದವರಾಗಿದ್ದರು. ಅವರ ಧಾರ್ಮಿಕ ಸಂಪ್ರದಾಯಕ್ಕೆ ಶ್ರೀ ದೇವಿ ಎಲ್ಲಮ್ಮನಲ್ಲಿ ಅನನ್ಯ ಭಕ್ತಿ ಉಳ್ಳವರಾದ ನಾಗಜೋಗಿ ಬಸವಜೋಗಿಯವರಿಗೆ, ಭಟ್ಟರ ವೇದಾಂತ ಪೂರಿತ ಉಪದೇಶ ಪರಿಪಕ್ವತೆಯನ್ನು ತಂದಿದುದರಲ್ಲಿ ಸಂಶಯವಿಲ್ಲ. ಅವರ ಭಕ್ತಿಯ ಪರಾಕಾಷ್ಟತೆಯ ಫಲವೇ ಶ್ರೀದೇವಿ ಹುಲಿಗೆಮ್ಮನ ಅವತಾರಕ್ಕೆ ಮೂಲ ಕಾರಣವಾಯಿತು. ವಾಹನಗಳ ಸೌಕರ್ಯವೇ ಇಲ್ಲದೆ ಅಂದಿನ ಕಾಲದಲ್ಲಿ ಪ್ರಯಾಣ ತುಂಬ ಕಷ್ಟಕರವೆನಿಸಿದ್ದಿತು. ಶ್ರೀದೇವಿ ಎಲ್ಲಮ್ಮನಲ್ಲಿಯ ಭಕ್ತಿ ನಾಗಜೋಗಿ ಬಸವಜೋಗಿಯವರಿಗೆ, ಪ್ರಯಾಣದ ಆಯಾಸವನ್ನು ಹೋಗಲಾಡಿಸುತ್ತಿದ್ದಿತು. ಉಧೋ ಉಧೋ ಎನ್ನುವ ಉದ್ಗಾರ ಮಾತ್ರ ಪ್ರಯಾಣದುದ್ದಕ್ಕೂ ಅವರ ಬಾಯಿಂದ ಹೊರ ಬರುತ್ತಿತ್ತು. ಹಿಗೇಯೇ ದಿನಗಟ್ಟಲೇ ಅವರ ಪ್ರವಾಸ ಸಾಗಿದ್ದೀತು. ಆಷಾಢ ಶುದ್ಧ ಚತುರ್ದಶಿಯ ಹೊತ್ತಿಗೆ, ಇಬ್ಬರೂ ಭಕ್ತರು ಸವದತ್ತಿಯ ಸಮೀಪಕ್ಕೆ ಬರುವಷ್ಟರಲ್ಲಿ ಮಳೆ ಧಾರಾಕಾರವಾಗಿ ಸುರಿಯತೊಡಗಿತು. ಮಾರನೆಯ ದಿನವೇ ಪೂರ್ಣಿಮೆ, ಪೂರ್ಣಿಮೆಯಂದು ನಾಗಜೋಗಿ ಬಸವಜೋಗಿಯವರು ದೇವಿಯ ದರ್ಶನ ಪಡೆದುಕೊಂಡೇ ಅನ್ನ ಆಹಾರಾದಿಗಳನ್ನು ಸ್ವೀಕರಿಸಬೇಕು. ಮಳೆ ನಿಲ್ಲುವ ಲಕ್ಷಣಗಳು ಕಾಣಬರುತ್ತಿರಲಿಲ್ಲ. ಅವರು ಅಂದುಕೊಂಡಂತೆಯೇ ಮಲಪ್ರಭಾ ನದಿಯು ತುಂಬಿ ಹರಿಯುತ್ತಿದ್ದಿತು. ನದಿಯ ದಡಕ್ಕೆ ಬಂದು ಭಕ್ತರೀರ್ವರೂ ನದಿಯಲ್ಲಿ ಪ್ರವಾಹ ಕಡಮೆಯಾಗಲೆಂದು ಕಾಯುತ್ತ ಕುಳಿತರು. ನದಿಯ ದಡದಲ್ಲಿ ದಟ್ಟವಾಗಿ ಬೆಳೆದ ಕಾಡಿನಲ್ಲಿ ಆ ಘೋರ ಕತ್ತಲೆಯಲ್ಲಿ ಮರದಡಿಯೊಂದರಲ್ಲಿ ಒರೆಯಾಗಿ ಕುಳಿತಿದ್ದಾರೆ. ಮಿಂಚಿದಾಗೊಮ್ಮೆ ಆಕಾಶದಲ್ಲಿ ಒತ್ತರಿಸಿಕೊಂಡು ಬರುತ್ತಿರುವ ಮೋಡಗಳು ಕಾಣುತ್ತಿವೆ. ದಿಕ್ಕುದಿಕ್ಕುಗಳಲ್ಲಿ ಭೋರ್ಗರೆಯುತ್ತಿರುವ ಗುಡುಗಿನ ಹಬ್ಬ: ಒಂದೊಂದು ಸಲ ಸಿಡಿಲಿನ ಸಬ್ದವೂ ಕೇಳಿಬರುತ್ತಿದೆ.ಈರ್ವರ ಉಟ್ಟ ಬಟ್ಟೆಗಳು ಸಾಕಷ್ಟು ಒದ್ದೆಯಾಗಿವೆ. ಎಷ್ಟೇ ದೊಡ್ಡ ಗಾತ್ರದ ಮರದಡಿಯಲ್ಲಿ ಓರೆಯಾಗಿ ಕುಳಿತರೂ ಆ ಅವಿರತ ಮಳೆಯ ಹನಿಗಳಿಂದ ಬಟ್ಟೆಗಳನ್ನು ಒಣದಾಗಿ ಉಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಅದು ಆಷಾಢ ಮಾಸವಿದ್ದುದರಿಂದ ಗಾಳಿಯೂ ಬೀಸುತ್ತಿತ್ತು.ಆ ಗಾಳಿ ಮಳೆಯಲ್ಲಿ ಇಬ್ಬರೂ ತತ್ತರಿಸಿ ಹೋಗಿದ್ದಾರೆ. ಮಳೆ ನಿಲ್ಲುವ ಯಾವ ಸೂಚನೆಗಳೂ ಕಾಣಬರಲಿಲ್ಲ. ಚತುರ್ಧಶಿಯ ರಾತ್ರಿ ಕಳೆದು ಪೂರ್ಣಿಮೆಯ ಅರುಣೋದಯವಾಯಿತಾದರೂ ಸೂರ್ಯರಶ್ಮಿಗಳು ಮೋಡಗಳನ್ನು ಛೇದಿಸಿಕೊಂಡು ಬರಲಾರದೆ ತಡೆಯಲ್ಪಟ್ಟಿದ್ದವು. ಪೂರ್ಣಿಮೆಯ ಹಗಲೆಲ್ಲವೂ ಮಳೆ ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ಭಕ್ತರೀರ್ವರಿಗೂ ಮಳೆ ಕಡಿಮೆಯಾದೀತೆಂಬ ಆಸೆ. ಆದರೂ ಮಳೆಯ ಪರಿವೆ ಅವರಿಗಿದ್ದಂತಿರಲಿಲ್ಲ. ದೇವಿಯ ದರ್ಶನದ್ದೇ ಅವರ ಬಯಕೆ. ದರ್ಶನವಿಲ್ಲದ ಆಹಾರಾದಿಗಳ ಸೇವನೆ ಇಲ್ಲ. ಮಳೆ ನಿಲ್ಲದೆ ಹೊಳೆ ದಾಟುವಂತಿಲ್ಲ. ಚತುರ್ದಶಿ ಮತ್ತು ಹುಣ್ಣಿಮೆ, ಹೀಗೆ ಎರಡು ದಿನಗಳಿಂದ ಅರವಿಗೆ ಊಟವಿರಲಿಲ್ಲ. ಹಸಿವಿನ ಬಾಧೆ ಒಂದೆಡೆಯಾದರೆ, ಉಟ್ಟ ಬಟ್ಟೆಗಳು ತೋಯ್ದು ಚಳಿಯ ಬಾಧೆ ಮತ್ತೊಂದೆಡೆಗೆ, ಹೀಗಾಗಿ ಭಕ್ತರೀರ್ವರೂ ತತ್ತರಿಸಿ ಹೋಗಿದ್ದರು. ಅವರಿಗೆ ಇಂತಹ ಪ್ರಸಂಗ ಹಿಂದೆಂದೂ ಒದಗಿ ಬಂದಿರಲಿಲ್ಲ. ಶ್ರೀ ದೇವಿಯ ಗುಡ್ಡಕ್ಕೆ ಹೊರಡುವಾಗ. ತಮ್ಮ ಗುರುಗಳಲ್ಲಿ ಆಶೀರ್ವಾದ ಪಡೆಯಲು ಹೋದಾಗ, ಭಯ ಮತ್ತು ಕುತೂಹಲಪೂರಿತ ಅವರ ಮುಖಚರ್ಯದ ಕಲ್ಪನೆ ಈಗ ಅವರಿಗೆ ಹೊಳೆಯತೊಡಗಿತು. ಶ್ರೀ ದೇವಿ ದರ್ಶನ ಪಡೆಯಲು ಈಗ ಯಾರಿಂದಲೂ ಸಹಾಯ ದೊರೆಯುವ ಸಾಧ್ಯತೆಯೇ ಇರಲಿಲ್ಲ. “ ಆ ದೇವಿಯ ನಮ್ಮನ್ನು ಪಾರುಮಾಡುವಳೆಂಬ” ಅಚಲ ಶ್ರದ್ಧೆ ಮಾತ್ರ ಅವರಲ್ಲಿ ತುಂಬಿ ತುಳುಕುತ್ತಿದ್ದಿತು. ಪೂರ್ಣಿಮೆಯ ಸಂಜೆಗೆ ಮಳೆ ನಿಂತಿತಾದರೂ ನದಿಯಲ್ಲಿ ಪ್ರವಾಹ ತಗ್ಗಲಿಲ್ಲ. ಮಳೆಯಲ್ಲಿ ತೋಯ್ದಿದ್ದ ಬಟ್ಟೆಗಳು ಮೈಮೇಲೆಯೇ ಅರ್ಧಂಬರ್ಧ ಒಣಗಿದ್ದವು. ಕುಳಿತಲ್ಲಿಯೇ ಕಲ್ಲು ಬಂಡೆಯ ಮೇಲೆ ಈರ್ವರೂ ಒರಗಿಕೊಂಡಿದ್ದರು. ನಾಲಿಗೆಯ ಮೇಲೆ ದೇವಿಯ ನಮ, ಮನದಲ್ಲಿ ಶ್ರೀದೇವಿಯ ಸುಂದರ ಮೂರ್ತಿಯ ಚಿತ್ರಣ ಲಾಸ್ಯವಾಡುತ್ತಿದ್ದಾಗಲೇ ಅವರಿಗೆ ನಿದ್ರೆಯ ಮಂಪರು ಕವಿಯಿತು. ಕತ್ತಲೆಯ ಆ ಕರಾಳ ಛಾಯೆಯಲ್ಲಿಯೇ ಬೆಳಕೊಂದು ಗೋಚರಿಸಿತು. ಅಂತಹ ಬೆಳಕನ್ನು ನಿಜ ಜೀವನದಲ್ಲಿ ಯಾರೂ ಎಂದು ಕಂಡುದುದಿಲ್ಲ. ಆ ಅನರ್ವಚನೀಯ ಬೆಳಕಿನ ಮಧ್ಯದಲ್ಲಿ ಸುಂದರ ಸುಕೋಮಲ ತೇಜೋಮಯ ತಾಯಿ ಕಾಣಿಸಿದಳು. “ಮಕ್ಕಳಿರಾ, ನಿಮ್ಮನ್ನು ಬಹಳ ಕಷ್ಟಕ್ಕೀಡು ಮಾಡಿದೆ. ನಿಮಗದೆಷ್ಟು ತೊಂದರೆಯಾಯಿತೋ? ಪಾಪ, ನೀವು ಇನ್ನೂ ಮೇಲೆ ಇಷ್ಟೆಲ್ಲ ತೊಂದರೆಪಟ್ಟುಕೊಂಡು ಗುಡ್ಡಕ್ಕೆ ಬರಬೇಕಾದದ್ದಿಲ್ಲ. ನಿಮ್ಮೂರಿನ ಶಿವಾಲಯದ ಪಶ್ಚಿಮ ತಾಣದಲ್ಲಿ ಹರಿಹರ ಬ್ರಹ್ಮಾದಿಗಳೂ ಪೂಜಿಸುವ ಶ್ರೀಚಕ್ರ ದೊರಕುವುದು. ಸಾಲಿಗ್ರಾಮ ರೂಪದಲ್ಲಿ ನನ್ನ ಮುಖವೂ ಗೋಚರಿಸುವುದು ಅಲ್ಲಿಯೇ ನೀವು ಅವುಗಳನ್ನು ಪೂಜಿಸಿರಿ. ಅಲ್ಲಿ ನಾನು ಅವಿರ್ಭವಿಸುವೆ” ಎಂದು ಆ ತಾಯಿ ಅಪ್ಪಣೆ ಕೊಡಿಸಿದಳಲ್ಲದೇ ತನ್ನ ಪ್ರಭಾವದಿಂದ ದೇವಿಯು ಭಕ್ತರೀರ್ವರಿಗೂ ಗುಡ್ಡದ ದರ್ಶನ ಮೂಡಿಸಿ ಅಂತರ್ಧಾನವಾದಳು. ಭಕ್ತರೀರ್ವರೂ ಪಕ್ಕನೆ ಕಣ್ತೆರೆದು ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ. ಇಬ್ಬರಿಗೂ ಒಂದೇ ತೆರನಾದ ಕನಸು. ಬಾಯಿಂದ ಮಾತುಗಳೇ ಹೊರಸೂಸುತ್ತಿಲ್ಲ. ಕಣ್ಣಲ್ಲಿ ಆನಂದ ಭಾಷ್ಪಗಳು ಒಂದೇ ಸವನೆ ಹರಿಯುತ್ತಿವೆ. ಆನಂದದಿಂದ ಮೈ ಪುಳಕಿತಗೊಂಡಿತು. ಶ್ರೀ ದೇವಿಯು ನಮ್ಮ ಮೇಲೆ ಕೃಪ ಮಾಡಿದಳೆಂದು ಮನಗಂಡರು. ಅಲ್ಲಿಂದ ಮರಳಿದ ಬಳಿಕ, ನಡೆದ ವಿದ್ಯಮಾನಗಳನ್ನೆಲ್ಲ ಗುರು ಸೋಮನಾಥ ಭಟ್ಟರೆದುರು ಸವಿಸ್ತಾರ ವರ್ಣಿಸಿದರು. ದೇವಿಯ ಅಪ್ಪಣೆಯಂತೆ ಶಿವಾಲಯದ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಚಕ್ರ ಮತ್ತು ಸಾಲಿಗ್ರಾಮಗಳು ದೊರೆತವು. ಅದೇ ಸ್ಥಳದಲ್ಲಿ ಚಿಕ್ಕ ದೇವಾಲಯ ಒಂದನ್ನು ನಿರ್ಮಿಸಲಾಯಿತಲ್ಲದೇ ಶಾಸ್ತೋಕ್ತವಾಗಿ ವೇದ ಘೋಷಗಳೊಂದಿಗೆ ದೇವಿಯ ಪ್ರತಿಷ್ಟಾಪನೆ ಮಾಡಲಾಯಿತು. ಹುಲಿಗಿ ಗ್ರಾಮಕ್ಕೇನೇ ಆಕೆಯು ತಾಯಿಯಾದ್ದರಿಂದ ಆಕೆಯು “ಹುಲಿಗೆಮ್ಮ” ನಾದಳು. ಶ್ರೀ ದೇವಿ “ಹುಲಿಗೆಮ್ಮ” ತಾಯಿಯನ್ನು ಷೋಢಶೋಪಚಾರಗಳಿಂದ ನಿತ್ಯವೂ ಪೂಜಿಸುವ ಹೊಣೆ ಗುರು ಸೋಮನಾಥ ಭಟ್ಟರದಾಯಿತು. ಪ್ರತಿ ಮಂಗಳವಾರ , ಶುಕ್ರವಾರ, ಪೂರ್ಣಿಮೆ ಮತ್ತು ಅಮಾವಾಸ್ಯೆಗಳಂದು ಶ್ರೀ ದೇವಿ ಭಾಗವತ ಪಠಣ, ಶ್ರೀ ಸೋಮನಾಥ ಭಟ್ಟರಿಂದ ಜರುಗತೊಡಗಿತು. ಗ್ರಾಮ ನಿವಾಸಿಗಳೆಲ್ಲ ದೇವಸ್ಥಾನದಲ್ಲಿ ಸೇರತೊಡಗಿದರು. ಮೂಲ ದೇವಸ್ಥಾನಕ್ಕೆ ಮುಂದುಗಡೆ ಪ್ರಾಂಗಣ ಹಾಗೂ ಇಕ್ಕೆಲಗಳಲ್ಲಿ ಉಗ್ರಾಣಗಳ ರಚನೆಯಾಯಿತು. ನವರಾತ್ರಿಯಲ್ಲಿ ನವದಿನ ಪುರಾಣ ಪಠಣ, ವಿವಿಧ ಅಲಂಕಾರಯುಕ್ತ ಪೂಜೆ, ಭಕ್ಷ್ಯಭೋಜ್ಯ ಹಾರಗಳ ನೈವೇದ್ಯ ಮತ್ತು ಬ್ರಹ್ಮ ಬೋಜನಾದಿಗಳು ಜರುಗತೊಡಗಿದವು. ಈ ಪ್ರದೇಶದ ಜನರೆಲ್ಲರ ಸಂಕಷ್ಟಗಳು ಪರಿಹಾರಗೊಳ್ಳಬೇಕು. ಜನತೆಯಲ್ಲಿ ಧರ್ಮ ಜಾಗೃತಗೊಂಡು ಧರ್ಮಾಚರಣೆ ನಿತ್ಯದ ಉಸಿರಾಗಬೇಕು. ಅಧರ್ಮವನ್ನು ಮೆಟ್ಟಿನಿಲ್ಲುವ ಚಿರಂತನ ಶಕ್ತಿ ಜನತೆಯಲ್ಲಿ ಸಂಚಯಿಸಬೇಕು. ಇದಕ್ಕೆ ಪೂರಕವಾಗಬಹುದಾದ ವೃತ ಒಂದನ್ನಾಚರಿಸಬೇಕೆಂಬುದಾಗಿ ನಾಗಜೋಗಿ ಬಸವಜೋಗಿ ಮತ್ತು ಸೋಮನಾಥ ಭಟ್ಟರು ಯೋಚಿಸತೊಡಗಿದರು. ಧರ್ಮಾಚರಣೆಯಲ್ಲಿ ತಿಲಕ ಪ್ರಾಯನಾದ ನಹುಷನ ಚರಿತ್ರೆ, ಆತ ಇಂದ್ರನಾದಾಗ ಸ್ವರ್ಗದಲ್ಲಿ ಆಚರಿಸಿದ ಶಿಬಿಕೋತ್ಸವ ತನ್ಮೂಲಕ ಮೂರು ಲೋಕಗಳಲ್ಲಿ ಅಧರ್ಮವು ಅಳಿದು ಧರ್ಮ ಉತ್ಥಾನ ಹೊಂದಿದ ಬಗೆಯನ್ನು ಮನದಲ್ಲಿಯೇ ಚಿಂತಿಸಿ ಗುರು ಸೋಮನಾಥ ಭಟ್ಟರು ಭಕ್ತರೀರ್ವರಿಗೂ ವಿಷಯ ವಿವರಿಸಿದರು. ಮಾರ್ಗದರ್ಶನ ಸೋಮನಾಥ ಭಟ್ಟರದು ಅನುಚರಣೆ ನಾಗಜೋಗಿ ಬಸವಜೋಗಿಯವರದು. ಬಾಳೀದಂಡಿಗೆ ಆಚರಣೆ ಪ್ರಾರಂಭ ಅಲ್ಲಿಂದಲೇ ಆಯಿತು. ಈ ವೃತಾಚರಣೆ ಜೊತೆಯಲ್ಲಿಯೇ ಶ್ರೀ ದೇವಿಯ ಮಹಿಮೆಯನ್ನು ಲೋಕಕ್ಕೆ ತೋರಿಸಿಕೊಡಬೇಕಾದ್ದಿತು. ಇದು ಪವಾಡ ರೂಪಿಸಿದರೆ ಮಾತ್ರ ಸಾಧ್ಯವೆಂದು ಭಟ್ಟರಿಗೆ ತಿಳಿದಿದ್ದಿತಾದ್ದರಿಂದ ‘ಪಾಯಸ ನಿವೇಧನೆ ಮತ್ತು ಅಗ್ನಿಕುಂಡದ ಕಾರ್ಯಕ್ರಮವನ್ನು ಸೋಮನಾಥ ಭಟ್ಟರು ರೂಪಿಸಿದರು. ವೈಶಾಖ ಶುದ್ಧ ಪೂರ್ಣಿಮೆಯಿಂದ ವೃತಾಚರಣೆ ಪ್ರಾರಂಭವಾಯಿತು. ಪ್ರತಿಪದೆಯಂದು ನಾಗಜೋಗಿ ಬಸವಜೋಗಿಯವರಿಗೆ ತೈಲಾಭ್ಯಂಗ ಮಾಡಿಸಿ, ಪುಣ್ಯಾಹವಾಚನ ನೆರವೇರಿಸಿದರಲ್ಲದೇ ಶ್ರೀ ದೇವಿಯನ್ನು ಕುರಿತು ಆಚರಿಸಬೇಕಾಗಿರುವ ಬಾಳಿದಂಡಿಗೆ ನಿವೇಧನೆ ಮತ್ತು ಅಗ್ನಿಕುಂಡ ಕಾರ್ಯಕ್ರಮ ಜರುಗಿಸಲು ಕಂಕಣಬದ್ಧರನ್ನಾಗಿ ಮಾಡಲಾಯಿತು. ಪ್ರತಿಪೆಯಿಂದ ಸಪ್ತಮಿಯವರೆಗೆ ಒಂದುವಾರ ಶ್ರೀ ಸೋಮನಾಥ ಭಟ್ಟರ ಉಪದೇಶದಂತೆ, ನಾಗಜೋಗಿ ಬಸವಜೋಗಿಯರು ಕೇವಲ ಹಣ್ಣು ಹಾಲು ಸ್ವೀಕರಿಸಿದರಲ್ಲದೇ ಸದಾಕಾಲವು ದೇವಿಯ ಧ್ಯಾನ ಮಾಡಿದರು. ನವಮಿಯಂದು ದೇವಿಯವರಿಗೆ ಸರ್ವಾಲಂಕಾರ ಮಾಡಿ ರಥೋತ್ಸವ ಜರುಗಿಸಲಾಯಿತು. ದಶಮಿಯ ರಾತ್ರಿಯಲ್ಲಿ (ಶಿಬಿಕೆ) ಬಾಳಿದಂಡಿಗೆ ತಯಾರಿಸಲಾಯಿತು. ಗ್ರಾಮ ಮತ್ತು ದೇವಾಲಯಗಳ ಎಲ್ಲಾ ಮನೆ ಮಾರುಗಳು ತಳಿರು ತೋರಣದಿಂದ ಅಲಂಕೃತವಾದವು. ಏಕಾದಶಿಯಂದು ಬ್ರಾಹ್ಮೀ ಮೂಹೂರ್ತದಲ್ಲಿ ತುಂಗಭದ್ರೆಯಲ್ಲಿ ಪೂಜೆಗೈದು ಬಾಳಿದಂಡಿಗೆಯನ್ನೇರಿದ ನಾಗಜೋಗಿಗೆ ಬಸವಜೋಗಿಯು ಮುಖ್ಯವಾಹಕನಾದ. ದಂಡಿಗೆಯು ಶ್ರೀ ದೇವಿಯ ದೇವಾಲಯವನ್ನು ತ್ರಿಪ್ರದಕ್ಷಿಣೆಗೈದು ದೇವಾಲಯ ಪ್ರವೇಶಿಸಿತು. ಬಾಳೆಯ ಎಲೆಗಳು ಹರಿಯದಷ್ಟು ಹಗುರವಾಗಿ ನಾಗಜೋಗಿಯು ದಂಡಿಗೆಯ ಮೇಲೆ ವಿರಾಜಮಾನನಾಗಿದ್ದ. ದ್ವಾದಶಿಯ ಬ್ರಾಹ್ಮೀ ಮುಹೂರ್ತದಲ್ಲಿ ಹೊಸ ಹರವಿಯೊಂದರಲ್ಲಿ ಅಕ್ಕಿಯ ಅನ್ನ ಬೇಯಿಸಲಾಯಿತು. ನಾಗಜೋಗಿ ಬಸವಜೋಗಿಯರು ತಮ್ಮ ಬರೀ ಕೈಗಳಿಂದಲೇ ಬಿಸಿ ಬಿಸಿ ಅನ್ನವನ್ನು ಹರಿವಿಯಿಂದ ತೆಗೆದು ದೇವಿಗೆ ನೈವೇದ್ಯ ನಿವೇದಿಸಿದರು. ನಂತರ ವೃತಾಚರಣೆಯ ಕೊನೆಗೆ ಕಾರ್ಯಕ್ರಮವಾಗಿ ನಿಗಿ ನಿಗಿ ಕೆಂಡ ತುಂಬಿದ ಅಗ್ನಿಕುಂಡದಲ್ಲಿ ಈರ್ವರೂ ಶ್ರೀ ದೇವಿಯನ್ನು ಪ್ರಾರ್ಥಿಸಿ ಪ್ರವೇಶ ಮಾಡಿ ಅದರಲ್ಲಿ ಹಾಯ್ದು ಶ್ರೀ ದೇವಿಯ ದೇವಾಲಯದಲ್ಲಿ ಪ್ರವೇಶಿಸಿದರು. ಸರ್ವರೂ ದೇವಿಯನ್ನು ಆಕೆಯ ಭಕ್ತರೀರ್ವರನ್ನು ಮನಸಾರೆ ಸ್ಮರಸಿದರು. ನಂತರ ನಾಗಜೋಗಿ ಬಸವಜೋಗಿಯವರು ಶ್ರೀ ದೇವಿಗೆ ಮಾಡಿದ ನೈವೇದ್ಯವನ್ನು ವೃತಾಚರಣೆಯಲ್ಲಿ ಪಾಲ್ಗೊಂಡವರೆಲ್ಲರೊಂದಿಗೂ ಸೇರಿ ಸ್ವೀಕರಿಸಿದರು. ಅದೇ ಇಂದಿಗೂ ‘ಜೋಗಪಂಕ್ತಿ’ ಎಂದು ಕರೆಯಿಸಿಕೊಳ್ಳುತ್ತದೆ. ಈ ವೃತಾಚರಣೆಯೇ ಶ್ರೀ ದೇವಿ ಹುಲಿಗೆಮ್ಮ ನ ಜಾತ್ರೆಯಾಗಿ ವರ್ಷವರ್ಷವೂ ಸಂಪ್ರದಾಯವಾಯಿತು. ಗುರು ಸೋಮನಾಥ ಭಟ್ಟರು ಹಾಕಿಕೊಟ್ಟ ಮಾರ್ಗದಲ್ಲಿ ನಿಷ್ಕಾಮ ಭಕ್ತಿಯನ್ನಿಟ್ಟು ತಾವು ಆತ್ಮಸಾಕ್ಷಾತ್ಕಾರ ಸಾಧಿಸಿಕೊಂಡರಲ್ಲದೇ ಮಾನವ ಕುಲಕೋಟಿಗೆ ಶ್ರದ್ಧಾಸ್ಥಾನವನ್ನೇ ನಿರ್ಮಿಸಿ ಪರಮ ಪಾವನ ಕಾರ್ಯವೆಸಗಿದ್ದಾರೆ. ಅವರ ಮಾರ್ಗದಲ್ಲಿ , ಅವರಷ್ಟು ನಿಷ್ಕಾಮ ಭಕ್ತಿಯನ್ನಿರಿಸದಿದ್ದರೂ ಸಹ, ಕಿಂಚಿದ್ಭಕ್ತಿಯನ್ನಿರಿಸಿ ದೇವಿಯ ಸೇವೆ ಗೈದದ್ದಾರೆ ಹಾಗೂ ದೇವಿಯನ್ನು ಭಕ್ತಿ ಪೂರ್ವಕವಾಗಿ ಆರಾಧಿಸಿದರೆ ಭಕ್ತರಿಗೆ ಬೇಡಿದಿಷ್ಟಾರ್ಥಗಳನ್ನು ಪೂರೈಸುವವಳಾಗಿದ್ದಾಳೆ. -: ಉಧೋ ಉಧೋ ಉಧೋ ಉಧೋ ತಾಯಿ ಶ್ರೀ ದೇವಿ ಹುಲಿಗೆಮ್ಮ ದೇವಿಯೇ ನಮ್ಮೆಲ್ಲರನ್ನು ಕಾಯಿ:- ***************************
