Hindu Religious & Charitable Endowments Department
ಧಾರ್ಮಿಕ ಸಂಸ್ಥೆಗಳ ಜೀರ್ಣೋದ್ದಾರ ಅಭಿವೃದ್ದಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ಮಂಜೂರಾತಿ ಆರಾಧನಾ ಯೋಜನೆಯಡಿ ಅನುದಾನ ಮಂಜೂರಾತಿ, ನಗದು ಅನುದಾನ, ವರ್ಷಾಸನ, ತಸ್ತಿಕ್ ಭತ್ಯೆ ಅನುದಾನವನ್ನು ವಿತರಣೆ ಮಾಡುವುದು.
ರಾಜ್ಯದಲ್ಲಿನ ಪ್ರಮುಖ ಧಾರ್ಮಿಕ ಸಂಸ್ಥೆಗಳಿಗೆ ಬರುವ ಭಕ್ತಾಧಿಗಳಿಗೆ ದೈನಂದಿನ ದಾಸೋಹ ಸೇವೆ, ವಸತಿ ವ್ಯವಸ್ಥೆಗಳನ್ನು ಕಲ್ಪಿಸುವುದು.
ಅಂಗವಿಕಲರಿಗೆ, ವಯೋವೃದ್ದರಿಗೆ ಆದ್ಯತೆಯ ,ಮೇಲೆ ಪೂಜೆ/ಪ್ರತ್ಯೇಕ ದರ್ಶನ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗುವುದು.
ಭಕ್ತಾಧಿಗಳಿಗೆ ಕುಡಿಯುವ ನೀರು, ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
ಕರ್ನಾಟಕ ರಾಜ್ಯದಿಂದ ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ತಲಾ ರೂ.20,000/- ಗಳ ಸಹಾಯಧನ ನೀಡುವುದು.
ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ತಲಾ ರೂ.30,000/- ಗಳ ಸಹಾಯಧನ ನೀಡುವುದು.
ವಿಧ ಸೇವೆಗಳ ಸೇವಾ ಶುಲ್ಕ ಹಾಗೂ ದೇವಾಲಯಗಳಲ್ಲಿ ಅಭ್ಯವಿರುವ ಕೊಠಡಿಗಳ ಬಾಡಿಗೆ ಮೊಬಲಗಿನ ವಿವರವನ್ನು ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಈ ಪ್ರಯೋಜನವನ್ನು ಪಡೆಯಬಹುದಾಗಿದೆ.
ರಾಜ್ಯದಿಂದ ತಿರುಮಲ, ಮಂತ್ರಾಲಯ, ಶ್ರೀಶೈಲಂ ಮತ್ತು ಉತ್ತರ ಪ್ರದೇಶದ ವಾರಣಾಸಿ ಯಾತ್ರೆ ಕೈಗೊಳ್ಳುವ ಭಕ್ತಾಧಿಗಳಿಗೆ ವಸತಿ ಸೌಕರ್ಯ ಕಲ್ಪಿಸುವುದು..