ಕರ್ನಾಟಕ (ಮತೀಯ ಮತ್ತು ಧರ್ಮಾರ್ಥ) ಇನಾಂ ರದ್ದಿಯಾತಿ ಕಯ್ದೆ 1955 ಕಲಂ 21” ಮತ್ತು ಕರ್ನಾಟಕ ಹಲವು ಇನಾಂ ರದ್ದಿಯಾತಿ ಕಯ್ದೆ 1977” ರನ್ವಯ ಧಾರ್ಮಿಕ ಸಂಸ್ಥೆಗಳ ಜಮೀನುಗಳು ಸರ್ಕಾರದಲ್ಲಿ ವಿಹಿತವಾದ್ದರಿಂದ, ಇದಕ್ಕೆ ಪರಿಹಾರಾರ್ಥವಾಗಿ ಧಾರ್ಮಿಕ ಸಂಸ್ಥೆಗಳಿಗೆ ತಸ್ತಿಕ್ ಭತ್ಯೆಯನ್ನು ನೀಡಲಾಗುತ್ತಿದೆ.
2005-06ನೇ ಸಾಲಿನಿಂದ ಜಾರಿಗೆ ಬರುವಂತೆ ವಾರ್ಷಿಕ ಕನಿಷ್ಠ ರೂ.5,999/- ಗಳಿಗಿಂತ ಕಡಿಮೆ ತಸ್ತಿಕ್ ಪಡೆಯುತ್ತಿದ್ದ ಸಂಸ್ಥೆಗಳಿಗೆ ರೂ.6000/- ಗಳಿಗೆ 2010-11 ನೇ ಸಾಲಿನಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ ತಲಾ 12000/-ಗಳಿಗೆ ಹೆಚ್ಚಿಸಲಾಗಿರುತ್ತದೆ. 2013-14ನೇ ಸಾಲಿನಿಂದ ಜಾರಿಗೆ ಬರುವಂತೆ ರೂ.24000/- ಗಳಿಗೆ ಹಾಗೂ 2015-16 ನೇ ಸಾಲಿನಿಂದ ಜಾರಿಗೆ ಬರುವಂತೆ ರೂ.36000/-ಗಳಿಗೆ 2017-18ನೇ ಸಾಲಿನಿಂದ ಜಾರಿಗೆ ಬರುವಂತೆ ರೂ.48000/-ಗಳಿಗೆ ಸರ್ಕಾರವು ಹೆಚ್ಚಿಸಿ ಆದೇಶಿಸಿರುತ್ತದೆ.