Hindu Religious & Charitable Endowments Department
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖಾ ಧ್ಯೇಯೋದ್ದೇಶಗಳು.
- 34,558 ಅಧಿಸೂಚಿತ ಸಂಸ್ಥೆಗಳ/ಘೋಷಿತ ಸಂಸ್ಥೆಗಳ ಆಡಳಿತ ನಿರ್ವಹಣೆ.
- ದೇವಾಲಯಗಳ ಅಭಿವೃದ್ಧಿ/ ದುರಸ್ಥಿ/ ಜೀರ್ಣೋದ್ಧಾರ/ ಪುನರ್ ನಿರ್ಮಾಣ.
- ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಹಾಗೂ ನಿರ್ವಹಿಸುವುದು.
- ಸ್ಥಿರಾಸ್ತಿ-ಚರಾಸ್ತಿ, ಆಭರಣಗಳ ನಿರ್ವಹಣೆ/ ಸಂರಕ್ಷಣೆ/ಜಮೀನು-ನಿವೇಶನ ಒತ್ತುವರಿ, ತೆರವು.
- ಒಳಾಂಗಣ ನೌಕರರು ಹಾಗೂ ಹೊರಾಂಗಣ ನೌಕರರ ನೇಮಕಾತಿ.
- ಅಧಿಸೂಚಿತ ಸಂಸ್ಥೆಗಳ ಆಯವ್ಯಯ ಮಂಜೂರಾತಿ.
- ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‍ಗಳ ರಚನೆ.
- ರಾಜ್ಯ ಧಾರ್ಮಿಕ ಪರಿಷತ್‍ನ ಸಭೆಗಳನ್ನು ಕರೆಯುವುದು, ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಟಾನಗೊಳಿಸುವುದು.
- ಅಧಿಸೂಚಿತ ಸಂಸ್ಥೆಗಳ (ಅನುವಂಶಿಕ ಆಡಳಿತವಿರುವ ಸಂಸ್ಥೆಗಳನ್ನು ಹೊರತುಪಡಿಸಿ) ವ್ಯವಸ್ಥಾಪನಾ ಸಮಿತಿಯನ್ನು ರಚಿಸುವುದು.
- ರಾಜ್ಯ- ಹೊರರಾಜ್ಯಗಳಲ್ಲ್ಲಿರುವ ಕರ್ನಾಟಕ ರಾಜ್ಯ ಛತ್ರಗಳ ನಿರ್ವಹಣೆ.
- ಅಧಿಸೂಚಿತ ಸಂಸ್ಥೆಗಳ ದುರಸ್ತಿ/ಜೀರ್ಣೋದ್ದಾರ/ಅಭಿವೃದ್ದಿ ಕಾಮಗಾರಿಗಳನ್ನು ಸಾರ್ವಜನಿಕ ವಂತಿಗೆಯ ಮೂಲಕ ಕೈಗೊಳ್ಳಲು ಜೀರ್ಣೋದ್ದಾರ/ಅಭಿವೃದ್ಧಿ ಸಮಿತಿ ರಚನೆ.
- ಆಗಮ ಶಾಲೆಗಳನ್ನು ನಡೆಸಲು ಮಾನ್ಯತೆ ನೀಡುವುದು ಮತ್ತು ಹೊಸ ಶಾಲೆಗಳನ್ನು ಪ್ರಾರಂಭಿಸಲು ಅನುಮೋದನೆ. ಪ್ರತಿ ವರ್ಷ ಆಗಮ ಪರೀಕ್ಷೆಗಳನ್ನು ನಡೆಸುವುದು.
- ಅಧಿಸೂಚಿತ ಸಂಸ್ಥೆಗಳ ವಾರ್ಷಿಕ ಬಜೆಟ್ ತಯಾರಿಕೆ ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕ ಪರಿಶೋಧನೆ ಮಾಡಿಸುವುದು.
- ನೂರಾರು ವರ್ಷ ಹಿಂದಿನ ಅನೇಕ ದೇವಾಲಯಗಳು ಅತ್ಯಂತ ಶಿಥಿಲವಾಗಿ, ಕುಸಿಯುವ ಸ್ಥಿತಿಯಲ್ಲಿದ್ದು, ಇವುಗಳ ಜೀರ್ಣೋದ್ಧಾರಕ್ಕೆ ಅವಶ್ಯಕ ಸಂಪನ್ಮೂಲವನ್ನು ನಿಗದಿಪಡಿಸುವುದು.