Screen Reader Access     A-AA+
Government of karnataka
Hindu Religious Institutions & Charitable Endowments Department
×
Go-Top
ಸಾಮಾನ್ಯ ಸಂಗ್ರಹಣಾ ನಿಧಿ

Hindu Religious & Charitable Endowments Department


ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಅಧ್ಯಾಯ-4 ಕಲಂ 17ರಲ್ಲಿ ಅಧಿಸೂಚಿತ ಸಂಸ್ಥಗಳಿಂದ ಸಂಸ್ಥೆಯ ಆದಾಯದ ಮಿತಿಯಂತೆ ಯಾವ ಸಂಸ್ಥೆಗಳ ಒಟ್ಟು ವಾರ್ಷಿಕ ಆದಾಯವು ಒಟ್ಟು: 10.00 ಲಕ್ಷಗಳನ್ನು ಮೀರುವುದೋ ಆ ಸಂಸ್ಥೆಗಳಿಗೆ ಸಂಬಂಧಪಟ್ಟ ನಿವ್ವಳ ಆದಾಯದ 10% ಮತ್ತು ಯಾವ ಸಂಸ್ಥೆಗಳ ಒಟ್ಟು ವಾರ್ಷಿಕ ಆದಾಯವು ಒಟ್ಟು5.00 ಲಕ್ಷಗಳನ್ನು ಮೀರಿದ್ದು, ಆದರೆ ರೂ.10.00 ಲಕ್ಷಗಳನ್ನು ಮೀರುವುದಿಲ್ಲವೋ ಆ ಸಂಸ್ಥೆಗಳಿಗೆ ಸಂಬಂಧಪಟ್ಟ ನಿವ್ವಳ ಆದಾಯದ ಶೇ 5% ರಂತೆ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸಂಗ್ರಹಿಸಲು ಅವಕಾಶವಿರುತ್ತದೆ. ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಕಾಯ್ದೆಯ ಕಲಂ 19 ರಲ್ಲಿ ಸೂಚಿಸಿರುವ ಉದ್ದೇಶಗಳಿಗೆ ರಾಜ್ಯ ಧಾರ್ಮಿಕ ಪರಿಷತ್ತಿನ ಅನುಮೋದನೆಗೊಳಪಟ್ಟು ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಅನುದಾನದಲ್ಲಿ ಶೀಥಿಲವಾಗಿರುವ ದೇವಸ್ಥಾನಗಳ ಜೀರ್ಣೋದ್ದಾರಕ್ಕಾಗಿ ಸಹ ಅನುದಾನ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಿರುತ್ತದೆ.