2011-12ನೇ ಸಾಲಿನಿಂದ ಈ ಯೋಜನೆಯು ಜಾರಿಗೆ ಬಂದಿರುತ್ತದೆ. ಪರಿಶಿಷ್ಠ ಜಾತಿ ಉಪಯೋಜನೆಯಡಿ ಪರಿಶಿಷ್ಠ ಜಾತಿಯ ಜನಾಂಗದವರು ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಠ ಪಂಗಡದವರು ವಾಸಿಸುವ ಸ್ಥಳಗಳಲ್ಲಿನ ದೇವಾಲಯದ ಜೀರ್ಣೋದ್ದಾರ/ನವನಿರ್ಮಾಣ ಅಥವಾ ಸಮುದಾಯ ಭವನ/ ಕಲ್ಯಾಣ ಮಂಟಪ ಜೀರ್ಣೋದ್ದಾರ ಉದ್ದೇಶಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ.